ಭಾಗಮಂಡಲ:ಅನೈತಿಕ ಸಂಬಂಧ ಶಂಕೆ;ಡಬಲ್ ಮರ್ಡರ್ ಆರೋಪಿ ಅರೆಸ್ಟ್

Mar 12, 2026 - 13:27
 0  2.1k
ಭಾಗಮಂಡಲ:ಅನೈತಿಕ ಸಂಬಂಧ ಶಂಕೆ;ಡಬಲ್ ಮರ್ಡರ್ ಆರೋಪಿ ಅರೆಸ್ಟ್

ಮಡಿಕೇರಿ; ಮಾರ್ಚ್ 11 ರಂದು ಭಾಗಮಂಡಲ ಪೊಲೀಸ್ ಠಾಣಾ ವ್ಯಾಪ್ತಿಯ ಕುಂದಚೇರಿ ಗ್ರಾಮದ ನಿವಾಸಿಗಳಾದ ಯಶೋಧ ಹಾಗೂ ಕುಂಞರಾಮ ಎಂಬುವವರನ್ನು ಚಂದು ಎಂಬಾತನು ಕೊಲೆ ಮಾಡಿರುವ ಕುರಿತು ದೂರು ಸ್ವೀಕರಿಸಿದ್ದು, ಭಾಗಮಂಡಲ ಪೊಲೀಸ್‌ ಠಾಣೆಯಲ್ಲಿ ಕಲಂ: 103(1) ಬಿಎನ್‌ಎಸ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ಸದರಿ ಪ್ರಕರಣದ ಕೃತ್ಯ ನಡೆದ ಸ್ಥಳಕ್ಕೆ ಪೊಲೀಸ್‌ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

 ಕುಂದಚೇರಿ ಗ್ರಾಮದ ನಿವಾಸಿಗಳಾದ ಯಶೋಧ ಹಾಗೂ ಕುಂಞರಾಮ ಎಂಬುವವರಿಗೆ 02 ವರ್ಷಗಳಿಂದ ಅನೈತಿಕ ಸಂಬಂಧ ಇರುವ ಬಗ್ಗೆ ಯಶೋಧಳ ಅಣ್ಣನಾದ ಚಂದು ಹೆಚ್.ಕೆ ಎಂಬಾತನಿಗೆ ಇಷ್ಟವಿಲ್ಲದ ಕಾರಣ ಜಗಳವಾಡಿ ಯಶೋಧ ಹಾಗೂ ಕುಂಞರಾಮ ಇಬ್ಬರನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿರುವುದಾಗಿ ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿರುತ್ತದೆ.

ಸದರಿ ಪ್ರಕರಣದ ಆರೋಪಿ ಚಂದು ಹೆಚ್.ಕೆ. 64 ವರ್ಷ, ಕುಂದಚೇರಿ ಗ್ರಾಮ ಎಂಬಾತನನ್ನು ತನಿಖಾ ತಂಡವು ದಸ್ತಗಿರಿ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗಿರುತ್ತದೆ.

What's Your Reaction?

Like Like 1
Dislike Dislike 1
Love Love 0
Funny Funny 0
Angry Angry 0
Sad Sad 0
Wow Wow 0