ಭಗತ್ ಸಿಂಗ್ ಯುವಕ ಸಂಘದ ಜಿಸಿಎಲ್ ಕ್ರಿಕೆಟ್ ಭಗತ್ ಕಪ್; ವಿರಾಟ್ ಕ್ರಿಕೆಟರ್ಸ್ ಚಾಂಪಿಯನ್
ಗೋಣಿಕೊಪ್ಪ :ಭಗತ್ ಸಿಂಗ್ ಯುವಕ ಸಂಘದ ಆಯೋಜಿಸಿದ 6ನೇ ಆವೃತ್ತಿಯ ಜಿಸಿಎಲ್ ಕ್ರಿಕೆಟ್ ನ ಭಗತ್ ಕಪ್ ವಿರಾಟ್ ಕ್ರಿಕೆಟರ್ಸ್ ತಂಡ ಮುಡಿಗೇರಿಸಿಕೊಂಡಿತು.
ಹಾತೂರು ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಭಗತ್ ಸಿಂಗ್ ಯುವಕ ಸಂಘದ ಅಧ್ಯಕ್ಷ ಸತೀಶ್ ಸಿಂಗಿ ನೇತ್ರತ್ವದಲ್ಲಿ ನಾಲ್ಕು ದಿನಗಳು ನಡೆದ ಈ ಕ್ರೀಡಾಕೂಟದ ಅಂತಿಮ ಹಣಹಣಿಯಲ್ಲಿ ಬೂಮ್ ಬೂಮ್ ತಂಡ ಐದು ಓವರ್ ನಲ್ಲಿ ಎರಡು ವಿಕೆಟ್ ನಷ್ಟಕ್ಕೆ ದಾಖಲಿಸಿದ ೨೨ ರನ್ನುಗಳನ್ನು ಬೆನ್ನಟ್ಟಿದ ತಂಡ ಎರಡು ಓವರಗಳಲ್ಲಿ 23 ರನ್ಗಳನ್ನ ಕಲೆ ಹಾಕುವ ಮೂಲಕ ಗುರಿಯಂತ ತನ್ನ ಓಟದ ನಗೆಯನ್ನು ಬೀರಿತು.
ವಿರಾಟ್ ಕ್ರಿಕೆಟರ್ಸ್ನ ಗಗನ್ ಆಳ್ವ 8 ಬಾಲ್ಗೆ 20 ರನ್ ಗಳನ್ನು ದಾಖಲಿಸಿದ ಹಿನ್ನೆಲೆಯೇ ತಂಡದ ಗೆಲುವು ನಿಶ್ಚಯಿಸಿತು. ಬೂಮ್ ಬೂಮ್ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟು ನಿರ್ಗಮಿಸಿತು.
ಚಾಂಪಿಯನ್ ಪಟ್ಟ ಏರಿದ ತಂಡಕ್ಕೆ 1 ಲಕ್ಷ ನಗದು ಮತ್ತು ಆಕರ್ಷಕ ಟ್ರೋಪಿಯನ್ನು ನೀಡಲಾಯಿತು. ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟ ತಂಡಕ್ಕೆ 50,000 ನಗದು ಮತ್ತು ಟ್ರೋಪಿಯನ್ನು ನೀಡಲಾಯಿತು. ತೃತೀಯ ಸ್ಥಾನವನ್ನು ಕ್ರಿಕೆಟರ್ ಮತ್ತು ನಾಲ್ಕನೇ ಸ್ಥಾನವನ್ನು ಎಜೆ ಬಾಯ್ಸ್ ಕ್ರಿಕೆಟರ್ಸ್ ಪಡೆದುಕೊಂಡು ನಗದು ಮತ್ತು ಟ್ರೋಪಿಯನ್ನ ಪಡೆದುಕೊಂಡಿತ್ತು.
ಈ ಸಂದರ್ಭ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಗುಮ್ಮಟೀರ ಕಿಲಾನ್ ಗುಣಪತಿ ಮಾತನಾಡಿ, ಕ್ರೀಡೆ ಎನ್ನುವುದು ಸದಾ ಮನುಷ್ಯನನ್ನು ಚಟುವಟಿಕೆಯಿಂದ ಇರಲು ಮಾಡುವ ಪ್ರೇರಣೆಯ ಅಂಶವಾಗಿದೆ. ಭಗತ್ ಸಿಂಗ್ ಯುವಕ ಸಂಘ ಈ ಹಿನ್ನೆಲೆಯಲ್ಲಿ ಕ್ರಿಕೆಟಿಗೆ ಆದ್ಯತೆ ನೀಡುವ ಮೂಲಕ ಯುವಕರನ್ನ ಆರೋಗ್ಯಪೂರ್ಣ ವ್ಯಕ್ತಿತ್ವಕ್ಕೆ ಪ್ರೇರೇಪಿಸುತ್ತಿದೆ ಎಂದು ಹೇಳಿದರು.
ಗೋಣಿಕೊಪ್ಪ ಮರ್ಚೆಂಟ್ ಬ್ಯಾಂಕ್ ಅಧ್ಯಕ್ಷ ಅರುಣ್ ಪೂಣಚ್ಚ ಮಾತನಾಡಿ, ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸುವುದು ಬಹುದೊಡ್ಡ ಸಾಹಸವೇ ಆಗಿದೆ. ಇಂತಹ ಸಾಹಸಕ್ಕೆ ಭಗತ್ ಸಿಂಗ್ ಯುವಕ ಸಂಘ ಮುಂದಾಗಿರುವುದು ಶ್ರೇಷ್ಠ ಸಾಧನೆ ಎಂದು ಹೇಳಿದರು.
ಸಮಾಜ ಸೇವಕ ಚೋಕಂಡ ಸಂಜು ಸುಬ್ಬಯ್ಯ , ಆರೋಗ್ಯಪೂರ್ಣ ಬದುಕಿಗೆ ಕ್ರೀಡೆಗಳು ಸಹಕಾರಿಯಾಗಬಲ್ಲದು ಈ ನಿಟ್ಟಿನಲ್ಲಿ ಸಂಘಟನೆಗಳು ಅತಿ ಹೆಚ್ಚು ಕ್ರೀಡಾಕೂಟಗಳನ್ನಾಗಿಸುವ ಮೂಲಕ ಯುವಕರಿಗೆ ಕ್ರೀಡೆಯಲ್ಲಿ ಆಸಕ್ತಿ ಗಳಿಸುವ ವೇದಿಕೆಯಾಗಬೇಕು ಎಂದರು.
ಪತ್ರಕರ್ತ, ಜಗದೀಶ್ ಜೋಡುಬೀಟಿ ಮಾತನಾಡಿ, ಬಲಿಷ್ಠ ಭಾರತ ನಿರ್ಮಾಣಕ್ಕೆ ಆರೋಗ್ಯ ಪೂರ್ಣ ಯುವ ಸಮುದಾಯದ ಅಗತ್ಯತೆ ಇದೆ. ಯುವಕರು ಆರೋಗ್ಯಪೂರ್ಣವಾಗಿರಲು ಮತ್ತು ಈ ದೇಶವನ್ನು ಕಟ್ಟುವ ಸತ್ಯವಂತರಾಗಲು ಬಲಿಷ್ಠ ,ಪೌಷ್ಟಿಕ ದೇಹದೃಢತೆಯನ್ನು ಹೊಂದಬೇಕಾಗಿದೆ.
ಹಗದಲ್ಲಿ ಅತ್ಯುತ್ತಮ ಜೀವನ ನಡೆಸಲು ಸಾಧ್ಯವಾಗಬಲ್ಲದು ಈ ಕಾರಣಕ್ಕೆ ಕ್ರಿಕೆಟ್ ಬಹು ಸಹಕಾರಿ ಎಂದು ಹೇಳಿದರು. ಇದೇ ಸಂದರ್ಭ ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಚಿರಿಯಪಂಡ ಸುರೇಶ್ ನಂಜಪ್ಪ ಅವರ ಪರಿಗಣಿಸಿ ಸನ್ಮಾನಿಸಲಾಯಿತು.
ಇವರೊಂದಿಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕಿರಿಯಮಾಡ ಅರುಣ್ ಪೂಣಚ್ಚ, ವೈದಕೀಯ ಕ್ಷೇತ್ರದಲ್ಲಿನ ಸಮಾಜ ಸೇವೆಗೆ ಸಂಜು ಸುಬ್ಬಯ್ಯ ಅವರನ್ನು ಮತ್ತು ಪತ್ರಕರ್ತ ಸಿಂಗಿ ಸತೀಶ್ ,ಸಮಾಜಸೇವೆಯನ್ನು ಗುರುತಿಸಿ ಉಂಬಾಯಿ, ಭಗತ್ ಸಿಂಗ್ ಯುವಕ ಸಂಘದ ಗೌರವ ಅಧ್ಯಕ್ಷ ಕಣ್ಣನ್ ವೇಣು ದಂಪತಿಗಳನ್ನು ಸನ್ಮಾನಿಸಲಾಯಿತು.
ಗೋಣಿಕೊಪ್ಪ ಗ್ರಾ ಪಂ ಸದಸ್ಯ ಶರತ್ , ಹಿಂದೂ ಮಳಿಯಾಳಿ ಸಮಾಜದ ಅಧ್ಯಕ್ಷ ಪ್ರಶಾಂತ್, ಪ್ರಧಾನ ಕಾರ್ಯದರ್ಶಿ ವಿ ವಿ ಅರುಣ್ ಕುಮಾರ್,ಮೀನು ವ್ಯಾಪಾರಿ ಊಂಬಾಯಿ, ಉದ್ಯಮಿಗಳಾದ ಜೀವನ್ , ಜಿತನ್, ಭಗತ್ ಸಿಂಗ್ ಯುವಕ ಸಂಘದ ಉಪಾಧ್ಯಕ್ಷ ಕಣ್ಣನ್ ವೇಣು, ಕ್ರೀಡಾ ಸಂಚಾಲಕ ಸಂತೋಷ್ ಪಿಟ್ಟೆ, ಭಗತ್ ಸಿಂಗ್ ಯುವಕ ಸಂಘದ ನಿರ್ದೇಶಕರುಗಳಾದ, ಹರಿಶ್ , ಪುಷ್ಷಮನೊಜ್ , ಸುರೇಶ್, ಎ. ಡಿ ಮಂಜುನಾಥ್, ರವಿ ಸ್ಕಂದ ,ನಿತಿನ್ ಆಳ್ವ, ಸಂಜಯ್,ರವಿ ಟಿಂಬರ್, ಅಭಿ, ವಿನ್ಯಾ ಮನೋಜ್, ಅಪ್ಪಿ, ಜೋಗಿ, ಸುದಿ, ಅಕ್ಷಯ್, ಶಿವು ಮತ್ತು 16 ತಂಡಗಳ ಮಾಲೀಕರು,ನಾಯಕರು, ಕ್ರೀಡಾಪಟುಗಳು ಇದ್ದರು.
