Kodagu

ಪ್ರತೀಯೋವ೯ರಲ್ಲಿಯೂ ದೇಶಭಕ್ತಿ ಮೂಡಿದಾಗ ಭಾರತ ಸಮೖದ್ದ:ಎ.ಎಸ್ ಪೊನ್ನಣ್ಣ

admincoorgdaily

ಮಡಿಕೇರಿ:ಕೊಡಗು ಪತ್ರಕತ೯ರ ಸಂಘ (ರಿ) ಹಾಗೂ ರೋಟರಿ ಮಿಸ್ಟಿ ಹಿಲ್ಸ್ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಕಾಗಿ೯ಲ್ ವಿಜಯ್ ದಿವಸ್ ಕಾರ್ಯಕ್ರಮ ಮತ್ತು ಯೋಧರಿಗೆ ಗೌರವ ನಮನ ಸಲ್ಲಿಸುವ ಕಾಯ೯ಕ್ರಮದಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಭಾಗವಹಿಸಿ ವೀರ ಯೋಧರಿಗೆ ಗೌರವಾರ್ಪಣೆ ಮಾಡಿದರು.ದೇಶ ರಕ್ಷಣೆಯಲ್ಲಿ ವೀರ ಯೋಧರ ಕೊಡುಗೆಯನ್ನು ಸ್ಮರಿಸಿದ ಪೊನ್ನಣ್ಣ ವೀರತ್ವಕ್ಕೆ ಕೊಡಗು ಹೆಸರುವಾಸಿಯಾಗಿದ್ದು, ಕೊಡಗಿನ ಸಾವಿರಾರು ಜನ ಸೈನಿಕರ ಕೊಡುಗೆ ಈ ದೇಶದ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಬಣ್ಣಿಸಿದರು. ದೇಶದ ಪ್ರತಿಯೊಬ್ಬರು ದೇಶಭಕ್ತಿಯನ್ನು ಬೆಳೆಸಿಕೊಂಡಲ್ಲಿ, ನಮ್ಮ ನಾಡು, ನಮ್ಮ ದೇಶ ಸಮೃದ್ಧವಾಗುವುದರಲ್ಲಿ ಯಾವುದೇ ಅನುಮಾನ ಬೇಡ ಎಂದು ಪೊನ್ನಣ್ಣ ಅಭಿಪ್ರಾಯಪಟ್ಟರು.

ನಮ್ಮ ದೇಶವನ್ನು ಕಾಯುವ ಯೋಧರನ್ನು ನಾವು ಸದಾ ಸ್ಮರಿಸುತ್ತಾ ಅವರಿಗೆ ಚಿರಋಣಿಯಾಗಿರಬೇಕು ಎಂದು ಇದೇ ಸಂದರ್ಭದಲ್ಲಿ ಅವರು ಕಿವಿಮಾತು ಹೇಳಿದರು. ಕೊಡಗಿನಿಂದ ದೇಶದ ಸೈನ್ಯಕ್ಕೆ ನೀಡಲಾದ ಯೋಧರ ಕೊಡುಗೆ ಬೇರೆ ಯಾವ ರಾಜ್ಯದಿಂದಲೂ ಇಲ್ಲ ಎಂದು ಹೇಳಿದ ಪೊನ್ನಣ್ಣ, 26 ವಷ೯ಗಳ ಹಿಂದೆ ಕಾಗಿ೯ಲ್ ನಲ್ಲಿ ಹುತಾತ್ಮರಾದ ಯೋಧರನ್ನು ಎಲ್ಲಾ ಸಂಘಸಂಸ್ಥೆಗಳೊಡಗೂಡಿ ಸ್ಮರಿಸುವ ಈ ವಿಭಿನ್ನ ಕಾಯ೯ಕ್ರಮ ಶ್ಲಾಘನೀಯ ಎಂದು ಮೆಚ್ಚುಗೆ ಸೂಚಿಸಿದರು. ಮೊದಲಿನ ಕಾಲದಲ್ಲಿ ಹುದ್ದೆಗಳ ಬೇಧವಿಲ್ಲದೆ ಯೋಧರು ಅವರಿಗೆ ಬಸ್ ಪ್ರಯಾಣಿಕರು ತಾವು ಕುಳಿತಿದ್ದ ಸೀಟ್ ಗಳನ್ನು ಬಿಟ್ಟು ಗೌರವ ನೀಡುತ್ತಿದ್ದರು ಎಂದು ತನ್ನ ತಂದೆ ಎ.ಕೆ.ಸುಬ್ಬಯ್ಯ ಹೇಳುತ್ತಿದ್ದ ಮಾತನ್ನು ಸ್ಮರಿಸಿದ ಎ.ಎಸ್. ಪೊನ್ನಣ್ಣ ಆದರೆ ಈಗ ಮಾಜಿ ಸೈನಿಕರೇ ತಮ್ಮ ಸ್ಥಾನ ಬಿಟ್ಟುಕೊಡುವ ಕಾಲಬಂದಿದೆ ಎಂದು ವಿಷಾಧಿಸಿದರು. ನಮ್ಮ ರಕ್ಷಣೆಗೆ ಸದಾ ಶ್ರಮಿಸುತ್ತಿರುವ ಯೋದರಿಂದಾಗಿಯೇ ನಾವಿಂದು ಹಾಯಾಗಿ ಓಡಾಡುವಂತಾಗಿದೆ. ಯೋಧರ ಕತ೯ವ್ಯ ನಿಷ್ಟೆಯನ್ನು ಎಂದೆಂದೂ ಮರೆಯಬಾರು ಎಂದೂ ಹೇಳಿದರು.

ಕೊಡಗು ಪತ್ರಕತ೯ರ ಸಂಘದ ಅಧ್ಯಕ್ಷ ಅನಿಲ್ ಹೆಚ್.ಟಿ. ಇದೇ ಸಂದಭ೯ ಮಾಜಿ ಸೈನಿಕರ ಪರವಾಗಿ ಮಾತನಾಡಿ, ಕೊಡಗಿನ ರಸ್ತೆಗಳಿಗೆ ಗಣ್ಯಾತಿಗಣ್ಯರ ಹೆಸರನ್ನು ನಾಮಕರಣ ಮಾಡುವ ಸಂದಭ೯ದಲ್ಲಿ ಕೊಡಗಿನ ಹುತಾತ್ಮ ಯೋಧರ ಹೆಸರನ್ನೂ ರಸ್ತೆಗಳು, ಬೀದಿಗಳಿಗೆ ನಾಮಕರಣ ಮಾಡುವ ನಿಟ್ಟಿನಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಸಕಾ೯ರದಿಂದ ಸೂಚಿಸುವ ಸಂಬಂಧಿತ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಆದ್ಯತೆ ನೀಡಬೇಕೆಂದು ಕೋರಿದರು. ಈ ಬಗ್ಗೆ ಗಮನ ಹರಿಸುವುದಾಗಿ ಶಾಸಕ ಎ.ಎಸ್. ಪೊನ್ನಣ್ಣ ಭರವಸೆ ನೀಡಿದರು. ಗ್ಯಾರಂಟಿ ಅನುಷ್ಠಾನ ಸಮಿತಿಯ ಜಿಲ್ಲಾ ಅಧ್ಯಕ್ಷ ತೀತೀರ ಧರ್ಮಜ ಉತ್ತಪ್ಪ ಉಪಸ್ಥಿತರಿದ್ದರು.