ಹಾಕತ್ತೂರಿನಲ್ಲಿ ರಕ್ತದಾನ ಶಿಬಿರ ಯಶಸ್ವಿ: 41 ಮಂದಿ ರಕ್ತದಾನ

Jun 19, 2026 - 17:50
 0  169
ಹಾಕತ್ತೂರಿನಲ್ಲಿ ರಕ್ತದಾನ ಶಿಬಿರ ಯಶಸ್ವಿ: 41 ಮಂದಿ ರಕ್ತದಾನ

ಮಡಿಕೇರಿ, ಜೂನ್ 19: ಹಾಕತ್ತೂರು ತಂಡ ಮತ್ತು ರಕ್ತನಿಧಿ ಕೇಂದ್ರ ಮಡಿಕೇರಿ ವತಿಯಿಂದ ಹಾಕತ್ತೂರಿನ ಕುವೆಂಪು ಶಾಲಾ ಸಭಾಂಗಣದಲ್ಲಿ ಆಯೋಜಿಸಿದ್ದ ಸಾರ್ವಜನಿಕ ರಕ್ತದಾನ ಶಿಬಿರವು 41 ಸಹೃದಯಿ ದಾನಿಗಳ ಸಹಕಾರದೊಂದಿಗೆ ಯಶಸ್ವಿಯಾಗಿ ಮುಕ್ತಾಯಗೊಂಡಿತು.

ರಕ್ತನಿಧಿ ಕೇಂದ್ರದ ಮುಖ್ಯಸ್ಥರಾದ ಕರುಂಬಯ್ಯ ಅವರು ಶಾಲಾ ಮಕ್ಕಳಿಗೆ ಮತ್ತು ಶಿಬಿರಕ್ಕೆ ಆಗಮಿಸಿದ್ದ ಸಾರ್ವಜನಿಕರಿಗೆ ರಕ್ತದಾನದ ಮಹತ್ವ ಹಾಗೂ ಜವಾಬ್ದಾರಿಯ ಬಗ್ಗೆ ಅರಿವು ಮೂಡಿಸಿದರು.ಶಿಬಿರದಲ್ಲಿ ಹಾಕತ್ತೂರಿನ ಪಂಚಾಯಿತಿ ಮಹಿಳಾ ಉದ್ಯೋಗಸ್ಥರಾದ ಲೀಲಾವತಿ ಅವರು ರಕ್ತದಾನ ಮಾಡುವ ಮೂಲಕ ಏಕೈಕ ಮಹಿಳಾ ದಾನಿಯಾಗಿ ಗುರುತಿಸಿಕೊಂಡರು."ತಂಡದ ಕೋರಿಕೆಗೆ ಸ್ಪಂದಿಸಿ ಅಮೂಲ್ಯ ಸಮಯದೊಂದಿಗೆ ತಮ್ಮ ರಕ್ತವನ್ನು ನೀಡಿ ಪರರ ಜೀವಕ್ಕೆ ಆಸರೆಯಾದ ಎಲ್ಲ ರಕ್ತದಾನಿಗಳಿಗೆ ಹೃದಯಸ್ಪರ್ಶಿ ಧನ್ಯವಾದಗಳು" ಎಂದು ತಂಡದ ಸದಸ್ಯ ಅಲ್ತಾಫ್ ತಿಳಿಸಿದರು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0