ಜ.10ರಂದು ಸೌಹಾರ್ದ ವೇದಿಕೆ ವತಿಯಿಂದ ಪುಸ್ತಕ ಬಿಡುಗಡೆ

ಜ.10ರಂದು ಸೌಹಾರ್ದ ವೇದಿಕೆ ವತಿಯಿಂದ ಪುಸ್ತಕ ಬಿಡುಗಡೆ

ಸಿದ್ದಾಪುರ :- ರಾಜ್ಯದ 20ಜಿಲ್ಲೆಗಳಲ್ಲಿ ಲೇಖಕ ನಾಡೋಜ ಬರಗೂರು ರಾಮಚಂದ್ರಪ್ಪನವರು ಬರೆದ "ಸೌಹಾರ್ದ ಭಾರತ ಸಮಾನತೆಯ ಸ್ನೇಹಿತ" ಕೃತಿಯನ್ನು ಕೊಡಗು ಜಿಲ್ಲಾ ಸೌಹಾರ್ದ ವೇದಿಕೆ ವತಿಯಿಂದ ಬಿಡುಗಡೆ ಕಾರ್ಯಕ್ರಮವು ಸಿದ್ದಾಪುರ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ನಡೆಯಲಿದೆ.

ಕನ್ನಡ ಸಾಹಿತ್ಯ ಪರಿಷತ್ ನ ಜಿಲ್ಲಾ ಸಮಿತಿ ಸದಸ್ಯ ಎಂ.ಎಸ್ ವೆಂಕಟೇಶ್ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಐ. ಆರ್ ಪ್ರಮೋದ್ ವಕೀಲರು,ಕವಿ ಎಂ.ಕೆ.ಗೋಪಾಲಕೃಷ್ಣ,ಗ್ರಾಮ ಪಂಚಾಯಿತಿ ಉಪಾಧ್ಯಕ್ಷರ ಪಳನಿ ಸ್ಟಾಮಿ,ಸೇರಿದಂತೆ ಗಣ್ಯರು ಪಾಲ್ಗೊಳಲಿದ್ದಾರೆ ಎಂದು ಸಂಚಾಲಕ ಹೆಚ್.ಬಿ.ರಮೇಶ್ ಮಾಹಿತಿ  ನೀಡಿದ್ದಾರೆ