ಕುಶಾಲನಗರ ಗುಂಡೂರಾವ್ ಕ್ರೀಡಾಂಗಣಕ್ಕೆ ' ಕೊಳವೆ ಬಾವಿ ' ವ್ಯವಸ್ಥೆ

ಕುಶಾಲನಗರ ಗುಂಡೂರಾವ್ ಕ್ರೀಡಾಂಗಣಕ್ಕೆ ' ಕೊಳವೆ ಬಾವಿ ' ವ್ಯವಸ್ಥೆ

ಕುಶಾಲನಗರ : ಪುರಸಭೆ ವ್ಯಾಪ್ತಿಯಲ್ಲಿ ಬರುವ ಗುಂಡೂರಾವ್ ಕ್ರೀಡಾಂಗಣದಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ರವರ ಅನುದಾನದಲ್ಲಿ ಪುರಸಭೆ ಅನುಷ್ಠಾನದ ಮೂಲಕ ಅಂದಾಜು 3 ಲಕ್ಷದ ವೆಚ್ಚದಲ್ಲಿ ಶುಕ್ರವಾರ ಕೊಳವೆ ಬಾವಿಯನ್ನು ಕೊರೆಯಲಾಯಿತು.

 ಕುಶಾಲನಗರ ಭಾಗದಲ್ಲಿ ಸಾರ್ವಜನಿಕ ಕ್ರೀಡಾಂಗಣ ಇಲ್ಲದಿರುವುದರಿಂದ ಕ್ರೀಡಾಂಗಣ ನಿರ್ಮಾಣಕ್ಕಾಗಿ ಸ್ಥಳೀಯ ಕ್ರೀಡಾಪಟುಗಳು ,ವಿವಿಧ ಕ್ರೀಡಾ ಸಂಘಟನೆಗಳು, ಹಾಗೂ ಸ್ಥಳೀಯ ಪ್ರಮುಖರು ಸೇರಿಕೊಂಡು ,ಗುಂಡೂರಾವ್ ಕ್ರೀಡಾಂಗಣ ಟ್ರಸ್ಟ್ ನೋಂದಣಿ ಮಾಡುವ ಮೂಲಕ ಸಂಘಟಿತರಾಗಿ,ಸರ್ಕಾರದ ಮೂಲಕ ತಾಲ್ಲೂಕು ಕ್ರೀಡಾಂಗಣದ ನಿರ್ಮಾಣಕ್ಕಾಗಿ ಪ್ರಯತ್ನ ನಡೆಸುತ್ತಿದ್ದು ಇದರ ಫಲವಾಗಿ ಟ್ರಸ್ಟ್ ಸದಸ್ಯರ ಮನವಿಯ ಮೇರೆಗೆ ಶಾಸಕರು ತಮ್ಮ ಅನುದಾನದಲ್ಲಿ ಮೈದಾನದಲ್ಲಿ ಕುಡಿಯುವ ನೀರಿಗಾಗಿ ಕೊಳವೆ ಬಾವಿಯನ್ನು ಕೊರೆಸಿದರು.

ಹಾಗೂ ಕೊಳವೆ ಬಾವಿಯಿಂದ ಯಥೇಚ್ಛವಾಗಿ ನೀರು ಕೂಡ ಸಿಕ್ಕಿದೆ ಇದರಿಂದ , ಮೈದಾನದಲ್ಲಿ ನಡೆಯುವ ಕ್ರೀಡೆಗಳಿಗೆ ,ಶ್ರೀ ಗಣಪತಿ ದೇವಾಲಯದ ಜಾತ್ರೆ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಿಗೆ ಕುಡಿಯುವ ನೀರಿನ ವ್ಯವಸ್ಥೆಗೆ ಅನುಕೂಲಕರವಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಪ್ರಶಂಸೆಯ ಮಾತುಗಳು ಕೇಳಿಬರುತ್ತಿದೆ .

ಈ ಸಂದರ್ಭದಲ್ಲಿ ಗುಂಡೂರಾವ್ ಕ್ರೀಡಾಂಗಣ ಟ್ರಸ್ಟ್ ಗೌರವ ಅಧ್ಯಕ್ಷ ಪವನ್ ಗಣಪತಿ ,ಅಧ್ಯಕ್ಷ ಲಕ್ಷ್ಮಿ ನಾರಾಯಣ, ಉಪಾಧ್ಯಕ್ಷರಾದ ಡೈಮಂಡ್ ಮಣಿ,ಫಯಾಜ್ ,ಪ್ರಧಾನ ಕಾರ್ಯದರ್ಶಿಎಸ್ ಆದಂ,ಕಾರ್ಯದರ್ಶಿ ದೇವೇಂದ್ರ ಸೋಮಪ್ಪ, ಮಹಾದೇವ ,ಪ್ರಧಾನ ಸಂಚಾಲಕ ರಕ್ಷೀತ್ ಮಾವಾಜಿ,ಸಂಘಟನೆ ಕಾರ್ಯದರ್ಶಿ ಸಲ್ಮಾನ್ ಅಹ್ಮದ್ ,ಖಜಾಂಚಿ ಭಾಷಾ,ನಿರ್ದೇಶಕರುಗಳು‌ ಉತ್ತಪ್ಪ,ವೇಣು,ನಂದೀಶ್ ರಾವ್, ಇಲಿಯಾಜ್,ಅಬ್ದುಲ್ ಮೆಹರೂಫ್,ಚಂದ್ರಶೇಖರ್, ಖಾಜ ಮೊಯ್ದಿನ್ ,ಕಾನೂನು ಸಲಹೆಗಾರರಾದ ಶಿವಮೂರ್ತಿ, ಮಾಧ್ಯಮ ಸಲಹೆಗಾರರಾದ ಟಿ.ಆರ್.ಪ್ರಭುದೇವ್ ಹಾಗೂ ಜಯಪ್ರಕಾಶ್ ಇದ್ದರು.

 ವರದಿ;ಟಿ.ಆರ್ ಪ್ರಭುದೇವ್