"COMPANIONS" ಆಲ್ ಇಂಡಿಯಾ ಫುಟ್ಬಾಲ್ ಪಂದ್ಯಾವಳಿ: ಆತಿಥೇಯ ತಂಡಕ್ಕೆ ಒಲಿದ ಚಾಂಪಿಯನ್ ಪಟ್ಟ | ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡ ಸಿಸಿಬಿ ಕೊಡಗು
ವಿರಾಜಪೇಟೆ:ಇಲ್ಲಿನ ಪ್ರತಿಷ್ಠಿತ ಸಂತ ಅನ್ನಮ್ಮ ಪ್ರಥಮ ದರ್ಜೆ ಕಾಲೇಜಿನ "COMPANIONS" ವಿದ್ಯಾರ್ಥಿಗಳ ಬಳಗ ವತಿಯಿಂದ ತಾಲೂಕು ಮೈದಾನದಲ್ಲಿ ಮೂರು ದಿನಗಳ ಕಾಲ ರಾಷ್ಟ್ರ ಮಟ್ಟದ ಕಾಲ್ಚೆಂಡು ಪಂದ್ಯಾಟ ನಡೆಯಿತು. ಕೇರಳ, ತಮಿಳುನಾಡು ಮತ್ತು ಕರ್ನಾಟಕ ರಾಜ್ಯ ಹಾಗೂ ಜಿಲ್ಲೆಯ ಒಟ್ಟು 32 ತಂಡಗಳು ಭಾಗವಹಿಸಿದ್ದವು.
ಮೊದಲನೇ ಸೆಮಿಫೈನಲ್ ಪಂದ್ಯ ಯಂಗ್ ಇಂಡಿಯಾ ಪಾಲಿಬೆಟ್ಟ ಮತ್ತು ಕಂಪೇನಿಯನ್ಸ್ ತಂಡಗಳ ಮದ್ಯೆ ನಡೆಯಿತು.ಎರಡು ತಂಡಗಳ ನಡುವೆ ಜಿದ್ದಾಜಿದ್ದಿನ ಕಾಳಗದಲ್ಲಿ 2-2 ಗೋಲುಗಳಿಂದ ಸಮಬಲ ಸಾಧಿಸಿತು.
ಅಂತಿಮವಾಗಿ ಪೆನಾಲ್ಟಿ ಶೂಟೌಟ್ ನಲ್ಲಿ ಆತಿಥೇಯ ಕಂಪೇನಿಯನ್ಸ್ ತಂಡವು 3-2 ಗೋಲುಗಳ ಅಂತರದಿಂದ ಗೆದ್ದು ಫೈನಲ್ ಪ್ರವೇಶಿಸಿತು.
ದ್ವೀತಿಯ ಸೆಮಿಫೈನಲ್ ಪಂದ್ಯವು ಸಿ.ಸಿ.ಬಿ. ಕೊಡಗು ಮತ್ತು ಕ್ಲಾಸಿಕ್ ಇಂಡಿಯಾ ಗೋಣಿಕೊಪ್ಪಲು ತಂಡಗಳ ನಡುವಿನ ಪಂದ್ಯದಲ್ಲಿ ನಿಗದಿತ ಸಮಯದಲ್ಲಿ ಎರಡು ತಂಡಗಳು ಕೂಡ ಯಾವುದೇ ಗೋಲು ಬಾರಿಸದೆ ಸಮಬಲ ಸಾಧಿಸಿತು.ಅಂತಿಮವಾಗಿ ಪೆನಾಲ್ಟಿ ಶೂಟೌಟ್ ನಲ್ಲಿ ಸಿ.ಸಿ.ಬಿ. ತಂಡವು 2-1 ಗೋಲುಗಳ ಅಂತರದಿಂದ ಗೆದ್ದು ಫೈನಲ್ ಪ್ರವೇಶಿಸಿತು.
ಫೈನಲ್ ಪಂದ್ಯವು ಸಿ.ಸಿ.ಬಿ. ಕೊಡಗು ಮತ್ತು ಕಂಪೇನಿಯನ್ಸ್ ತಂಡಗಳ ಮಧ್ಯೆ ಪಂದ್ಯಾಟ ನಡೆದು 1-0 ಗೋಲುಗಳಿಂದ ಕಂಪೇನಿಯನ್ಸ್ ತಂಡ ಸಿ.ಸಿ.ಬಿ. ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು.
ಪಂದ್ಯಾವಳಿಯಲ್ಲಿ ಅತೀ ಹೆಚ್ಚು ಗೋಲುಗಳಿಸಿದ ಆಟಗಾರ ಪ್ರಶಸ್ತಿಯನ್ನು ಫಾರಿಸ್,ಉತ್ತಮ ಗೋಲು ಕೀಪರ್ ಕೆವಿನ್,ಪಂದ್ಯ ಪುರುಷೋತ್ತಮ ದರ್ಶನ್, ಎಮೆರ್ಜಿಂಗ್ ಆಟಗಾರ ಪಾಚೆ, ಉತ್ತಮ ಮುನ್ನಡೆ ಆಟಗಾರ ಸುಹೈಲ್ ಪಡೆದುಕೊಂಡರು.
ವರದಿ: ಕಿಶೋರ್ ಕುಮಾರ್ ಶೆಟ್ಟಿ