COMPANIONS" ಆಲ್ ಇಂಡಿಯಾ ಫುಟ್ಬಾಲ್ ಪಂದ್ಯಾವಳಿ: ಡ್ರಗ್ಸ್ ಮುಕ್ತ ಸಮಾಜಕ್ಕೆ ವಿದ್ಯಾರ್ಥಿಗಳ ಪಾತ್ರ ಬಹುಮುಖ್ಯ: ಶಾಸಕ ಎಎಸ್ ಪೊನ್ನಣ್ಣ
ವಿರಾಜಪೇಟೆ:ವಿರಾಜಪೇಟೆಯಲ್ಲಿ ಸಂತ ಅನ್ನಮ್ಮ ಕಾಲೇಜಿನ "COMPANIONS" ವಿದ್ಯಾರ್ಥಿಗಳು ಇಲ್ಲಿನ ತಾಲ್ಲೂಕು ಮೈದಾನದಲ್ಲಿ ಆಯೋಜಿಸಿದ,
ಆಲ್ ಇಂಡಿಯಾ 5' ರ ಡ್ರಗ್ ಮುಕ್ತ ಭಾರತ ಫುಟ್ಬಾಲ್ ಪಂದ್ಯಾವಳಿಯಲ್ಲಿ ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ಡ್ರಗ್ಸ್ ಫ್ರೀ ಇಂಡಿಯಾ (ನಶೆ ಮುಕ್ತ ಭಾರತ) ಪರಿಕಲ್ಪನೆಯೊಂದಿಗೆ, ನಶೆಯ ದುಷ್ಪರಿಣಾಮಗಳನ್ನು ಸಾರುವ ಸದುದ್ದೇಶದಿಂದ ಹಾಗೂ ಯುವ ಜನತೆ ಡ್ರಗ್ಸ್ ನಿಂದ ದೂರ ಇರಬೇಕು ಎಂಬ ಸಂದೇಶ ಸಾರುವ ಈ ಪಂದ್ಯಾಟಕ್ಕೂ ಮೊದಲು, ಸಾಂಕೇತಿಕವಾಗಿ ನಶೆಯ ನಕಲನ್ನು ಮಾನ್ಯ ಶಾಸಕರು ಸುಡುವ ಮೂಲಕ ಚಾಲನೆ ನೀಡಿದರು.
ವಿರಾಜಪೇಟೆಯ ತಾಲೂಕು ಮೈದಾನದಲ್ಲಿ ನಡೆದ ಈ ಪಂದ್ಯಾವಳಿಯಲ್ಲಿ ಮಾತನಾಡಿದ ಮಾನ್ಯ ಶಾಸಕರು, ಜಗತ್ತಿನಾದ್ಯಂತ ಬಹುತೇಕ ಎಲ್ಲಾ ರಾಷ್ಟ್ರಗಳು ಫುಟ್ಬಾಲ್ ಕ್ರೀಡೆಗೆ ವಿಶೇಷ ಆದ್ಯತೆ ನೀಡುತ್ತಿದೆ. ನಮ್ಮ ದೇಶದಲ್ಲಿಯೂ ಫುಟ್ಬಾಲ್ ಕ್ರೀಡೆ ಜನಪ್ರಿಯಗೊಳ್ಳುತ್ತಿದ್ದು, ಇಂದು ಸಾಮಾಜಿಕ ಕಳಕಳಿಯ ಉದ್ದೇಶದಿಂದ ಆಯೋಜನೆಗೊಂಡಿರುವ ಈ ಪಂದ್ಯಾವಳಿಯು ನಾಡಿಗೆ ಉತ್ತಮ ಫೂಟ್ಬಾಲ್ ಪಟುಗಳನ್ನು ನೀಡುವಂತಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರು ರಾಫಿ, ಡಿಸಿಸಿ ಸದಸ್ಯರು ಸತೀಶ್, ಮಂಜುನಾಥ್ ಹಾಗೂ ಕ್ರೀಡಾ ಪ್ರೇಮಿಗಳು ಹಾಗೂ ಪ್ರಮುಖರು ಉಪಸ್ಥಿತರಿದ್ದರು.