ಮಾದಕ ವ್ಯಸನದ ವಿರುದ್ಧ ಅಭಿಯಾನ: ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಕೊಡಗು ಜಿಲ್ಲಾ ಜಂಇಯ್ಯತುಲ್ ಮುಅಲ್ಲಿಮೀನ್
ಮಡಿಕೇರಿ:ಸಮಸ್ತ ಕೇರಳ ಜಂಇಯ್ಯತುಲ್ ಮುಅಲ್ಲಿಮೀನ್ ಸೆಂಟ್ರಲ್ ಕೌನ್ಸಿಲ್ ಕೇಂದ್ರ ಸಮಿತಿಯ ನಿರ್ದೇಶದ ಮೇರೆಗೆ ಮಾದಕ ವಸ್ತುಗಳ ವಿರುದ್ದ ಅಭಿಯಾನವನ್ನು ಇತ್ತೀಚೆಗೆ ಕೊಡಗು ಜಿಲ್ಲಾ ಮಟ್ಟದ ಮದರಸಗಳಲ್ಲಿ ಪ್ರತ್ಯೇಕ ಶಿಬಿರಗಳು ಹಮ್ಮಿಕೊಳ್ಳಲಾಗಿತ್ತು.ಇದೀಗ ಕರ್ನಾಟದ ಮುಖ್ಯಮಂತ್ರಿ ಗಳಿಗೆ ಕೊಡಗು ಜಿಲ್ಲೆಯ ಐದು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳ ಸಹಿ ಸಂಗ್ರಹಿಸಿ ಕೊಡಗು ಜಿಲ್ಲಾದಿಕಾರಿ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭ ಕೊಡಗು ಜಿಲ್ಲಾ ಜಂಇಯ್ಯತುಲ್ ಮುಅಲ್ಲಿಮೀನ್ ಪ್ರಧಾನ ಕಾರ್ಯದರ್ಶಿ ಪಿ.ಎಂ ಆರಿಫ್ ಪೈಝಿ, ಕೋಶಾದಿಕಾರಿ ಎಂ ತಮ್ಲೀಖ್ ದಾರಿಮಿ,ಹ ಕಾರ್ಯದರ್ಶಿ ಅಬೂಬಕ್ಕರ್ ಸಿದ್ದೀಖ್ ವಾಫಿ, ಜಿಲ್ಲಾ ಸದಸ್ಯರಾದ ಹನೀಫ್ ಪೈಝಿ ಮಡಿಕೇರಿ, ಅಬ್ದುಲ್ ರವೂಫ್ ಹುದವಿ ನೆಲ್ಲಿಹುದಿಕೇರಿ ಬಶೀರ್ ಹಸನಿ,ಹಾಗೂ ಸಹದ್ ಫೈಝಿ ಇದ್ದರು.