Kodagu

ಮಡಿಕೇರಿ ಶ್ರೀ ವಿದ್ಯಾ ವಿನಾಯಕ ಯುವಕ ಮಂಡಳಿಯ ವತಿಯಿಂದ ಕೇರಂ ಹಾಗೂ ಚೆಸ್ ಪಂದ್ಯಾವಳಿ

admincoorgdaily

ಮಡಿಕೇರಿ:ನಗರದ ಚೈನ್ ಗೇಟ್ ಶ್ರೀ ವಿದ್ಯಾ ವಿನಾಯಕ ಯುವಕ ಮಂಡಳಿಯ 18ನೇ ವರ್ಷದ ಗಣೇಶೋತ್ಸವದ ಪ್ರಯುಕ್ತ ಕೇರಂ ಪಂದ್ಯಾವಳಿ ಹಾಗೂ ಚೆಸ್ ಪಂದ್ಯವನ್ನು ಆಯೋಜಿಸಲಾಗಿತ್ತು. ಉದ್ಘಾಟಕರಾಗಿ ಆಗಮಿಸಿದ ಡಾ.ಕೆಬಿ ಸೂರ್ಯ ಕುಮಾರ್ ರವರು ಮಕ್ಕಳಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮಡಿಕೇರಿ ಮೂಡ ಸದಸ್ಯರಾದ ಚಂದ್ರಶೇಖರ್ ಆರ್ ಪಿ, ಸಂಘದ ಅಧ್ಯಕ್ಷರಾದ ರಾಹುಲ್, ರಾಘವೇಂದ್ರ, ಮಧುಗೌಡ, ಸಚಿನ್, ಸುನಿಲ್, ಲೋಕೇಶ್ ಎಸ್, ಗೌರವ್ ಆರ್ ಸಿ, ದರ್ಶನ್ ಬಿ ಬಿ, ಪ್ರಶಾಂತ್, ಪುನೀತ್ ಕುಮಾರ್, ಯತೀಶ್ ರಂಜಿತ್ ಹಾಗೂ ರಾಜೇಶ್ ಮತ್ತು ಸಂಘದ ಸದಸ್ಯರು ಹಾಜರಿದ್ದರು.‌