ಜಾತಿ ಗಣತಿ: ಕೊಡವ ಎಂದು ನಮೂದಿಸಲು ಕೊಡವ ಸಮಾಜ ಮನವಿ

ಜಾತಿ ಗಣತಿ: ಕೊಡವ ಎಂದು ನಮೂದಿಸಲು ಕೊಡವ ಸಮಾಜ ಮನವಿ

ವಿರಾಜಪೇಟೆ: ರಾಜ್ಯ ಸರ್ಕಾರ ನಡೆಸುತ್ತಿರುವ ಸಾಮಾಜಿಕ,ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಯಲ್ಲಿ ಕೊಡವ ಸಮೂದಾಯವರು ಜಾತಿ ಕೊಡವ, ಭಾಷೆ ಕೊಡವ, ಮತ್ತು ಧರ್ಮ ಹಿಂದು ಎಂದು ನಮೂದಿಸಲು ನಲ್ವತೋಕ್ಲು ಕೊಡವ ಸಮಾಜದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.

 ವಿರಾಜಪೇಟೆ ತಾಲೂಕಿನ ಬಿಳುಗುಂದ ,ಹೊಸಕೋಟೆ ಮತ್ತು ನಲ್ವತೋಕ್ಲು ಗ್ರಾಮ ನಲ್ವತೋಕ್ಲು ಕೊಡವ ಸಮಾಜದಲ್ಲಿ ಜಾತಿ ಗಣತಿಯ ಬಗ್ಗೆ ಬೋಂದ ಮುನ್ನೂರು ಒಕ್ಕಡ ಅಧ್ಯಕ್ಷರಾದ ಚಿಲ್ಲವಂಡ ಪಿ. ಕಾವೇರಪ್ಪ ಅವರ ಅಧ್ಯಕ್ಷತೆಯಲ್ಲಿ ಸಭೆ ಜರುಗಿತ್ತು. ಸಭೆಯಲ್ಲಿ ಜಾತಿ ಗಣತಿಯ ಸಂದರ್ಭದಲ್ಲಿ ಕೊಡವ ಸಮುದಾಯದ ಬಾಂಧವರಲ್ಲಿ ಯಾವ ಗೊಂದಲಗಳಿಗೆ ಆಸ್ಪಾದವಾಗದಂತೆ ವಿವರಗಳನ್ನು ನೀಡುವಂತೆ ಚರ್ಚೆಗಳು ನಡೆಯಿತು.

ನಂತರ ಸಭೆಯಲ್ಲಿ ಹಾಜರಿದ್ದ ಬಿಳುಗುಂದ ಮತ್ತು ನಲ್ವತೋಕ್ಲು ಗ್ರಾಮದ ಕೊಡವ ಸಮೂದಾಯ ಬಾಂದವರ ಒಮ್ಮತದ ಅಭಿಪ್ರಾಯವಾಗಿ ಗಣತಿದಾರರೀಗೆ ಜಾತಿ ಕೊಡವ ಎಂದು, ಭಾಷೆ ಕೊಡವ ಎಂದು,ಧರ್ಮ ಹಿಂದು ಎಂದು ಮಾಹಿತಿ ನೀಡುವಂತೆ ನಿರ್ಣಯವಾಯಿತು. ಸಭೆಯಲ್ಲಿ ಬಿಳುಗುಂದ ಗ್ರಾಮದ ಕೊಡವ ಸಮಾಜದ ಅದ್ಯಕ್ಷರಾದ ಐನಂಡ ಕಿರಣ್, ನಲ್ವತೋಕ್ಲು ಗ್ರಾಮದ ಕೊಡವ ಸಮಾಜದ ಅದ್ಯಕ್ಷರಾದ ಮುಕ್ಕಾಟಿರ ಸಂತೋಷ್ ಹಾಗೂ ಬಿಳುಗುಂದ ,ಹೊಸಕೋಟೆ ಮತ್ತು ನಲ್ವತೋಕ್ಲು ಗ್ರಾಮದ ಕೊಡವ ಸಮುದಾಯ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.