Kodagu

ಕಲ್ಕಂದೂರಿನಲ್ಲಿ ಸಂಭ್ರಮದ ಈದ್-ಮಿಲಾದ್ ಆಚರಣೆ

admincoorgdaily

ಸೋಮವಾರಪೇಟೆ:ಸಮೀಪದ ಕಲ್ಕಂದೂರು ಜುಮಾ ಮಸೀದಿಯಲ್ಲಿ ಈದ್ ಮಿಲಾದ್ ಹಬ್ಬವನ್ನು ಆಚರಿಸಲಾಯಿತು. ಮಸೀದಿಯಿಂದ ಈದ್ ಮೀಲಾದ್ ಸಂದೇಶ ಜಾಥಾ ನಡೆಯಿತು. ಮಸೀದಿ ಖತೀಬರಾದ ಅಬ್ದುಲ್ ರೆಹಮಾನ್ ಸಖಾಫಿ, ಜಮಾತ್ ಅಧ್ಯಕ್ಷ ಕೆ.ಈ.ಶರೀಪ್, ಸದರ್ ಉಸ್ತಾದರಾದ ಬದುರುಲ್ ಮುನೀರ್ ಫಾಲಿಳಿ, ಕಾರ್ಯದರ್ಶಿ ಅಬ್ದುಲ್ ರೆಹಮಾನ್ ಮತ್ತಿತರರು ಇದ್ದರು. ಮಕ್ಕಳ ಧಫ್ ಪ್ರದರ್ಶನ ಗಮನ ಸೆಳೆಯಿತು.