ರೋಟರಿ ವುಡ್ಸ್ ವತಿಯಿಂದ ಚಾಮಾ೯ಡಿ ಬೈಕ್ ರೈಡ್

Apr 23, 2026 - 13:49
Apr 23, 2026 - 13:49
 0  157
ರೋಟರಿ ವುಡ್ಸ್ ವತಿಯಿಂದ ಚಾಮಾ೯ಡಿ ಬೈಕ್ ರೈಡ್

ಮಡಿಕೇರಿ ಏ. 23;ಮಡಿಕೇರಿ ರೋಟರಿ ವುಡ್ಸ್ ವತಿಯಿಂದ ಸುಬ್ರಹ್ಮಣ್ಯ - ಚಾಮಾ೯ಡಿ ಘಾಟ್ ಗಾಗಿ ಬೈಕ್ ರೈಡ್ ಆಯೋಜಿಸಲಾಗಿತ್ತು.

ರೋಟರಿ ಸಂಸ್ಥೆಯ ಪ್ರಮುಖರಾದ ಬಿ.ಜಿ. ಅನಂತಶಯನ, ರೋಟರಿ ವುಡ್ಸ್ ಅಧ್ಯಕ್ಷ ಕಿರಣ್ ಕುಂದರ್, ನಿದೇ೯ಶಕರಾದ ಹರೀಶ್ ಕಿಗ್ಗಾಲು, ರಂಜಿತ್ ಕಿಗ್ಗಾಲು, ಚೇಂದ್ರಿಮಾಡ ವಿನು, ಕಶ್ಯಪ್ ಮತ್ತು ಚೇತನ್ ಪಾಲ್ಗೊಂಡಿದ್ದರು.

ಮಡಿಕೇರಿಯ ಜನರಲ್ ತಿಮ್ಮಯ್ಯ ವೖತ್ತದಲ್ಲಿ ಬೈಕ್ ರೈಡ್ ಗೆ ರೋಟರಿ ಜಿಲ್ಲೆಯ ಪಬ್ಲಿಕ್ ಇಮೇಜ್ ಸಮಿತಿ ಉಪಾಧ್ಯಕ್ಷ ಅನಿಲ್ ಹೆಚ್.ಟಿ, ಮತ್ತು ರೋಟರಿ ವುಡ್ಸ್ ಮಾಜಿ ಅಧ್ಯಕ್ಷ ವಸಂತ್ ಕುಮಾರ್ ಚಾಲನೆ ನೀಡಿದರು. 

ಸಂಪಾಜೆ ಮಾಗ೯ವಾಗಿ ಸುಬ್ರ್ರಹ್ಮಣ್ಯ ತಲುಪಿದ ಬೈಕ್ ರೈಡರ್ ಗಳನ್ನು ಸುಬ್ರಹ್ಮಣ್ಯ ರೋಟರಿ ಸಂಸ್ಥೆಯ ಅಧ್ಯಕ್ಷರಾದ ಜಯಪ್ರಕಾಶ್ , ನಿದೇ೯ಶಕರಾದ ಚಂದ್ರಶೇಖರ್,. ರೋಹಿತ್ ಮತ್ತು ಸದಸ್ಯರು ಸ್ವಾಗತಿಸಿದರು. .

ಚಾಮಾ೯ಡಿ ಘಾಟ್ ಗಾಗಿ ಬಂದ ರೈಡರ್ ಗಳನ್ನು ಸೋಮವಾರಪೇಟೆ ರೋಟರಿ ಸಂಸ್ಥೆಯ ಅಧ್ಯಕ್ಷೆ ವೀಣಾ ಮನೋರ್, ನಿದೇ೯ಶಕ ದಿನೇಶ್ , ಆಶಾ ಪುಟ್ಟರಾಜು ಮತ್ತು ಸದಸ್ಯರು ಸ್ವಾಗತಿಸಿದರು. ನಿಸಗ೯ ರಮಣೀಯತೆ ನಡುವಿನ 150 ಕಿಮಿ. ಮಾಗ೯ದಲ್ಲಿ ಬೈಕ್ ರೈಡಿಂಗ್ ವಿನೂತನ ಅನುಭವ ನೀಡಿತ್ತು ಎಂದು ಸವಾರರು ಸಂತೋಷ ವ್ಯಕ್ತಪಡಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 1