ಕುಶಾಲನಗರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಚಂದ್ರಮೋಹನ್ ಅವಿರೋಧ ಆಯ್ಕೆ

ಕುಶಾಲನಗರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಚಂದ್ರಮೋಹನ್ ಅವಿರೋಧ ಆಯ್ಕೆ

ಕುಶಾಲನಗರ:ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ 2025-28 ಸಾಲಿನ ಅಧ್ಯಕ್ಷರಾಗಿ ಎಂ ಎನ್ ಚಂದ್ರಮೋಹನ್, ಉಪಾಧ್ಯಕ್ಷರಾಗಿ ಮೊಹಮ್ಮದ್ ಮುಸ್ತಾಫಾ, ಪ್ರಧಾನ ಕಾರ್ಯದರ್ಶಿಯಾಗಿ ಕೆ ಜೆ ಶಿವರಾಜ್, ಕಾರ್ಯದರ್ಶಿಯಾಗಿ ಕೆ ಕೆ ನಾಗರಾಜ ಶೆಟ್ಟಿ, ನಿರ್ದೇಶಕರುಗಳಾಗಿ ಹೆಚ್ ವಿ ವಿನೋದ್ ಮತ್ತು ಹೆಬ್ಬಾಲೆ ರಘು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

 ನಿರ್ದೇಶಕರ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಜಯಪ್ರಕಾಶ್ ಅವರು ಒಪ್ಪಂದದ ಮೇರೆಗೆ ನಾಮಪತ್ರ ಹಿಂತೆಗೆದುಕೊಂಡಿದ್ದಾರೆ. ಚುನಾವಣಾ ಅಧಿಕಾರಿಯಾಗಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಹಿರಿಯ ಲೈಬ್ರರಿಯನ್ ನಂದೀಶ್ ಮತ್ತು ಚುನಾವಣಾ ವೀಕ್ಷಕರಾಗಿ ನಮ್ಮ ಸಂಘದ ಜಿಲ್ಲಾ ಉಪಾಧ್ಯಕ್ಷರಾದ ಪಾರ್ಥ ಚಿನ್ನಪ್ಪ ಅವರು ಉಪಸ್ಥಿತರಿದ್ದರು.