ಚೆಟ್ಟಳ್ಳಿ-ಮಡಿಕೇರಿ ಮಾರ್ಗ: ಮಳೆಗಾಲದಲ್ಲೇ ರಸ್ತೆ ಕಾಮಗಾರಿ, ವಾಹನ ಸವಾರರ ಪರದಾಟ

ಚೆಟ್ಟಳ್ಳಿ-ಮಡಿಕೇರಿ ಮಾರ್ಗ: ಮಳೆಗಾಲದಲ್ಲೇ ರಸ್ತೆ ಕಾಮಗಾರಿ, ವಾಹನ ಸವಾರರ ಪರದಾಟ

ಮಡಿಕೇರಿ, ಜೂನ್ 28: ಕೊಡಗಿನಲ್ಲಿ ಪ್ರತಿ ಮಳೆಗಾಲದಲ್ಲೂ ರಸ್ತೆ ದುರಸ್ತಿ, ಡಾಂಬರೀಕರಣ, ಚರಂಡಿ ಕಾಮಗಾರಿ ಆರಂಭಿಸುವ ಪರಿಪಾಠ ಮುಂದುವರಿದಿದೆ. ಚೆಟ್ಟಳ್ಳಿ-ಮಡಿಕೇರಿ ಮಾರ್ಗದಲ್ಲಿ ಈಗಾಗಲೇ ಮಳೆಯಿಂದ ವಾಹನ ಸಂಚಾರ ಕಷ್ಟವಾಗಿರುವಾಗಲೇ ತಿರುವಿನಲ್ಲಿ ಚರಂಡಿ ಕಾಮಗಾರಿ ನಡೆಯುತ್ತಿದೆ.

ಹತ್ತು-ಹದಿನೈದು ದಿನಗಳಿಂದ ಕಾಮಗಾರಿ ಮುಗಿಯದೆ ಬಾಕಿ ಉಳಿದಿದ್ದು, ರಸ್ತೆ ಕಿರಿದಾಗಿ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಮಳೆ ನೀರು ರಸ್ತೆಯಲ್ಲೇ ನಿಂತು ಕೆಸರುಮಯವಾಗಿದ್ದು, ದ್ವಿಚಕ್ರ ವಾಹನ ಸವಾರರು ಜಾರಿ ಬೀಳುವ ಆತಂಕದಲ್ಲಿದ್ದಾರೆ. ಸ್ಥಳೀಯರು "ಮಳೆಗಾಲ ಶುರುವಾಗುವುದಕ್ಕೂ ಮೊದಲೇ ಕಾಮಗಾರಿ ಮುಗಿಸಬೇಕಿತ್ತು. ಈಗ ವಾಹನ ಸಾಗುವುದೇ ದುಸ್ತರ. ತುರ್ತು ಸಂದರ್ಭದಲ್ಲಿ ಆ್ಯಂಬುಲೆನ್ಸ್ ಸಂಚಾರಕ್ಕೂ ತೊಂದರೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.