ಕಲಾ ಉತ್ಸವ ಕೊಡಗು 2025' ಲಾಂಛನ ಬಿಡುಗಡೆಗೊಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು:ಕಲೆಯನ್ನು ಉಳಿಸಬೇಕು ಮತ್ತು ಬೆಳಸಬೇಕು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಲಾ ಉತ್ಸವ ಹೆಸರಿನಲ್ಲಿ ಕಲಾ ಜಾತವನ್ನು ಪಸರಿಸುತ್ತಿರುವ ಸಾದಿಕ್ ಆರ್ಟ್ಸ್ ಲಿಂಕ್ ಅಯೋಜಿತ ಕಲಾ ಉತ್ಸವ ಕೊಡಗು 2025 ರ ಲಾಂಛನ ರಾಜ್ಯದ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯ ಅವರು ತಮ್ಮ ಗೃಹ ಕಛೇರಿ ಕೃಷ್ಣ ಕೃಪಾ ಬೆಂಗಳೂರುವಿನಲ್ಲಿ ಬಿಡುಗಡೆಗೊಳಿಸಿದರು. ಸಾಧಿಕ್ ಆರ್ಟ್ಸ್ ಲಿಂಕ್ ವಿರಾಜಪೇಟೆ ಸಾರಥ್ಯದಲ್ಲಿ 09 ನೇ ವರ್ಷದ ಕಲಾ ಉತ್ಸವ ಕೊಡಗು ಲಾಂಛನ ಬಿಡುಗಡೆ ಕಾರ್ಯಕ್ರಮ ರಾಜ್ಯದ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯ ಅವರ ಗೃಹ ಕಛೇರಿಯಾದ ಕೃಷ್ಣಾ ಕೃಪ ಬೆಂಗಳೂರಿನಲ್ಲಿ ಜರುಗಿತು. ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರು ಮತ್ತು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಅವರ ಘನ ಉಪಸ್ಥಿತಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಮುಖ್ಯ ಮಂತ್ರಿಗಳು ಕಲಾ ಉತ್ಸವ ಕೊಡಗು 2025 ರ ಲಾಂಛನ ಬಿಡುಗಡೆಗೊಳಿಸಿದರು. ನಂತರ ಮಾತನಾಡಿದ ಮುಖ್ಯ ಮಂತ್ರಿಗಳು ಕಲೆಗಳು ಜೀವಂತವಾಗಿರಿಸಬೇಕು. ಕಲೆಗಳು ಎಂದಿಗೂ ಮಾಸಬಾರದು. ಕಲೆಯನ್ನು ಪ್ರೋತ್ಸಾಹಿಸಿ ಮುಂದಿನ ಪೀಳಿಗೆಗೆ ಧಾರೆಯೆರೆಯಬೇಕು ಎಂದು ಹೇಳಿ ಕಲಾ ಉತ್ಸವಕ್ಕೆ ಶುಭ ಕೋರಿದರು.
ಶಾಸಕರು ಮಾತನಾಡಿ ಕಲೆ,ಸಂಸ್ಕೃತಿಗಳು ಮರೆಯಲಾಗದ ಅನುಭವ, ಕಲಿತ ವಿಧ್ಯೆ,ಕಲೆಯು ಎಂದಿಗೂ ಕಣ್ಮರೆಯಾಗುವುದಿಲ್ಲ ಬದಲಿಗೆ ಜೀವಂತ ಎಂದೆನಿಸುತ್ತದೆ. ಕಲೆಯನ್ನು ಉಳಿಸುವ ಪ್ರಯತ್ನ ನಿರಂತರವಾಗಿ ಸಾಗಬೇಕು. ಕಲಾಶಕ್ತರಿಗೆ ಪ್ರೋತ್ಸಾಹ ದೊರಕುವಂತಾಗಬೇಕು. ಎಂದು ಹೇಳಿದರು. ಕಲಾ ಉತ್ಸವ ಕೊಡಗು 2025 ರ ಲಾಂಛನ ಬಿಡುಗಡೆ ಸಂಧರ್ಭದಲ್ಲಿ ಅಯೋಜಕರಾದ ಸಾಧಿಕ್ ಹಂಸ, ಸಹಲ್ ಹಂಸ, ಕೊಡಗು ಜಿಲ್ಲಾ ಉಸ್ತುವಾರಿ ಸಚಿವರು,ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಹಾಗೂ ಪುರಸಭೆಯ ಸದಸ್ಯರಾದ ಪಟ್ಟಡ ರಂಜಿ ಪೂಣಚ್ಚ, ಬ್ಲಾಕ್ ಯುವ ಘಟಕದ ಮುಖಂಡರಾದ ಶಭೀರ್ ಅವರುಗಳು ಉಪಸ್ಥಿತರಿದ್ದರು.
ಕಿಶೋರ್ ಕುಮಾರ್ ಶೆಟ್ಟಿ