ಸ್ವಚ್ಛಕೊಡಗು- ಸುಂದರ ಕೊಡಗು: ನೆಲ್ಲಿಹುದಿಕೇರಿ ಡೊಮಿನೊಸ್ ಸಂಘದಿಂದ ಸ್ವಚ್ಛತಾ ಅಭಿಯಾನ
ಸಿದ್ದಾಪುರ; ಡೊಮಿನೊಸ್ ಕಲಾ- ಕ್ರೀಡಾ ಯುವಜನ ಸಂಘದ ವತಿಯಿಂದ ಈ ದಿನ ಕಾವೇರಿ ಸೇತುವೆಯ ಸಮೀಪ ಸಂಘದ ವತಿಯಿಂದ ನಿರ್ಮಿಸಿದ ಗಾರ್ಡನ್, ಯುವಕ ಸಂಘದ ಸದಸ್ಯರು ಸೇರಿ ಕಸಕಡ್ಡಿಗಳನ್ನು ಸ್ವಚ್ಛಗೊಳಿಸಿ, ಬೃಹತ್ ಆಕಾರವಾಗಿ ಬೆಳೆದು ನಿಂತಿದ್ದ ಮರಗಳನ್ನು ಕಡಿದು ಸೇತುವೆಯ ಸುತ್ತಲೂ ಕಸಕಡ್ಡಿಗಳನ್ನು ತೆಗೆದು ಸ್ವಚ್ಛಗೊಳಿಸಲಾಯಿತು.ಸ್ವಚ್ಛತಾ ಕಾರ್ಯಕ್ರಮದಲ್ಲಿ ಡೊಮಿನೋಸ್ ಕಲಾ ಕ್ರೀಡಾ ಯುವಜನ ಸಂಘದ ಸಹ ಕಾರ್ಯದರ್ಶಿ ಶೌಕತ್ ಅಲಿ, ಸದಸ್ಯರುಗಳಾದ ಶಿ ಯಾಬುದ್ದೀನ್ ವಿ,ಪಿ,ಎಸ್, ಫಾಝಿಲ್ ಲಿಂಬ್ರ, ಸನಿಲ್, ಆಶಿಮ್, ಬಶೀರ್, ಅನಸ್, ನೌಫಲ್, ಮತ್ತಿತರು ಭಾಗವಹಿಸಿದ್ದರು.