ಸ್ವಚ್ಛ ಕೊಡಗು-ಸುಂದರ ಕೊಡಗು: ಕತ್ತಲೆಕಾಡು - ಜೇನುಕೊಲ್ಲಿ ಶ್ರೀ ವಿನಾಯಕ ಸೇವಾ ಸಮಿತಿ ಟ್ರಸ್ಟ್ ವತಿಯಿಂದ ಸ್ವಚ್ಛತಾ ಕಾರ್ಯ
ಕತ್ತಲೆಕಾಡು : ಸ್ವಚ್ಛ ಕೊಡಗು-ಸುಂದರ ಕೊಡಗು ಅಭಿಯಾನದ ಭಾಗವಾಗಿ ಕತ್ತಲೆಕಾಡಿನಲ್ಲಿ ಸ್ವಚ್ಛತಾ ಕಾರ್ಯಕ್ರಮ ನೆರವೇರಿತು. ಕತ್ತಲೆಕಾಡು-ಜೇನುಕೊಲ್ಲಿ ಶ್ರೀ ವಿನಾಯಕ ಸೇವಾ ಟ್ರಸ್ಟ್ ಮುಂದಾಳತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕತ್ತಲೆಕಾಡು ವ್ಯೂ ಪಾಯಿಂಟ್ ಮೇಲ್ಭಾಗದಿಂದ ಕ್ಲೋಸ್ಬರ್ನ್ ಶಾಲೆವರೆಗೆ ಮುಖ್ಯ ರಸ್ತೆ ಬದಿಯಲ್ಲಿನ ತ್ಯಾಜ್ಯಗಳನ್ನು ವಿಲೇವಾರಿ ಮಾಡಲಾಯಿತು.
ಪ್ಲಾಸ್ಟಿಕ್ ತ್ಯಾಜ್ಯ, ಬಾಟಲ್‌ಗಳು, ಮದ್ಯ ಬಾಟಲಿಗಳು ಸೇರಿ 20 ದೊಡ್ಡ ಚೀಲ ಕಸ ಸಂಗ್ರಹ ಮಾಡಲಾಯಿತು. ಈ ಕಾರ್ಯದಲ್ಲಿ ಕಡಗದಾಳು ಪಂಚಾಯಿತಿಯ ಸ್ಥಳೀಯ ವಾರ್ಡ್ ಸದಸ್ಯರಾದ ಪುಷ್ಪಾವತಿ ರೈ ಬಿ.ಎನ್., ಪ್ರಭಾವತಿ ಕರ್ಪಸ್ವಾಮಿ, ವಿನಾಯಕ ಸೇವಾ ಟ್ರಸ್ಟ್ ಹಾಗೂ ಸೇವಾ ಸಮಿತಿಯ ರಮಣಿ ಶೇಷಪ್ಪ, ಬ್ರಿಜೇಶ್ ರೈ, ಚೈತನ್ಯ ರೈ, ಪ್ರಭಾವತಿ, ಪುಷ್ಪಾವತಿ ಜನಾರ್ದನ್, ರಾಜೇಶ್, ಹೊನ್ನಪ್ಪ, ಕಿಶೋರ್ ರೈ ಕತ್ತಲೆಕಾಡು, ಲೋಕೇಶ್ ರೈ, ಅಶೋಕ್ ಎಂ.ಎಸ್., ಚಂದ್ರಶೇಖರ್ ರೈ, ಜಯಪ್ರಕಾಶ್, ಪ್ರಜ್ಞಾ ರೈ, ಆರಾಧ್ಯ, ಸ್ಥಳೀಯರಾದ, ಶಿವ, ಪರಪ್ಪು ಕೃಷ್ಣಪ್ಪ, ರಮೇಶ್ ಎಂ., ಅನುಶ್ರೀ, ಹಮೀದ್(ಕೇಸರಿ), ನಾಸರ್, ಬಿ.ಆರ್. ಕೃಷ್ಣಪ್ಪ ಪೂಜಾರಿ, ದಿವಾಕರ್ ಪೂಜಾರಿ ಮತ್ತಿತರರಿದ್ದು ಸಹಕರಿಸಿದರು. ಸಂಗ್ರಹವಾದ ಕಸವನ್ನು ಬಂಟರ ಸಂಘದ ವತಿಯಿಂದ ಪ್ರಾಯೋಜಿಸಲಾಗಿದ್ದ ವಾಹನದಲ್ಲಿ ವಿಲೇವಾರಿಗೆ ಕಳುಹಿಸಲಾಯಿತು.