Kodagu

SKSSF ಸಿದ್ದಾಪುರ ಶಾಖೆ ವತಿಯಿಂದ ಶೈಖುನಾ ಮಾಣಿಯೂರ್ ಉಸ್ತಾದ್ ಅನುಸ್ಮರಣೆ

admincoorgdaily

ಸಿದ್ದಾಪುರ:ಮುನವ್ವಿರುಲ್ ಇಸ್ಲಾಂ ಮದರಸ ಆವರಣದಲ್ಲಿ SKSSF ಯೂನಿಟ್ ಅಧ್ಯಕ್ಷ ಶರ್ಫುದ್ದೀನ್ ಅವರ ಅಧ್ಯಕ್ಷತೆಯಲ್ಲಿ ಎಸ್.ಕೆ.ಎಸ್.ಎಸ್.ಎಫ್ ಸಿದ್ದಾಪುರ ಶಾಖೆ ವತಿಯಿಂದ ಶೈಖುನಾ ಮಾಣಿಯೂರ್ ಉಸ್ತಾದ್ ಅನುಸ್ಮರಣೆ ಹಾಗೂ ಪ್ರಾರ್ಥನಾ ಸಂಗಮ ನಡೆಯಿತು.

 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ, ಖತೀಬ್ ನೌಫಲ್ ಉದವಿ ,ಪ್ರವಾದಿ ಮುಹಮ್ಮದ್ (ಸ.ಅ)ಅವರು ಜನಿಸಿದ ಪವಿತ್ರ ತಿಂಗಳು ಆಗಮಿಸುತ್ತಿದ್ದು,ಎಲ್ಲರೂ ಸಜ್ಜಾಗಲು ಕರೆ ನೀಡಿದರು. ಸಮಸ್ತ ಕೇರಳ ಜಂಇಯತುಲ್ ಮುಅಲ್ಲಿಮೀನ್ ಕೊಡಗು ಜಿಲ್ಲಾ ಕಾರ್ಯದರ್ಶಿ ಆರಿಫ್ ಫೈಝಿ, ಮಾಣಿಯೂರ್ ಉಸ್ತಾದ್ ಸಮುದಾಯಕ್ಕೆ ನೀಡಿದ ಕೊಡುಗೆ ಹಾಗೂ ಆವರ ಜೀವನ ಚರಿತ್ರೆ ಬಗ್ಗೆ ಮಾತನಾಡಿದರು.

 ಸಿದ್ದಾಪುರ ಜಮಾಹತ್ ಕಾರ್ಯದರ್ಶಿ ರವೂಫ್ ಹಾಜಿ, ಎಸ್.ಕೆ.ಎಸ್.ಎಸ್.ಎಫ್ ಕೊಡಗು ಜಿಲ್ಲಾ ಕಾರ್ಯದರ್ಶಿ ಸಿದ್ದೀಕ್ ವಾಫಿ, ಎಸ್‌ಕೆ.ಎಸ್.ಬಿ.ವಿ ಕನ್ವೀನರ್ ಸಹದ್ ಫೈಝಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮೊಹಿದ್ದೀನ್ ಮುಸ್ಲಿಯಾರ್, ಅಹ್ಮದ್ ಯಮಾನಿ, ಜಬ್ಬಾರ್ ಫೈಝಿ, ಎಸ್.ಕೆ.ಎಸ್.ಎಸ್.ಎಫ್ ಯೂನಿಟ್ ಖಜಾಂಜಿ ನೌಷಾದ್,ಸಿದ್ದೀಕ್ ಹಾಗೂ ಎಸ್.ಕೆ.ಎಸ್.ಎಸ್.ಎಫ್ ಕಾರ್ಯಕರ್ತರು ಇದ್ದರು. ಎಸ್‌ಕೆಎಸ್.ಎಸ್.ಎಫ್ ಪ್ರಧಾನ ಕಾರ್ಯದರ್ಶಿ ಅಯಾಸ್ ಸ್ವಾಗತಿಸಿ, ಸಗ ಕಾರ್ಯದರ್ಶಿ ಶಮೀರ್ ಕೆಪಿ ವಂದಿಸಿದರು.