ಸಮುದಾಯ ಬಾಂಧವರು ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಮುಂದುವರೆಯಬೇಕು:ಎಸ್.ಎನ್.ಡಿ.ಪಿ ಅಧ್ಯಕ್ಷ ವಿ.ಕೆ. ಲೋಕೇಶ್
ವಿರಾಜಪೇಟೆ: ಸ್ವತಂತ್ರ ಪೂರ್ವದಿಂದಲೂ ಶೋಷಿತ ಸಮಿದಾಯಗಳು ಮೇಲ್ಪಂತಿ ವರ್ಗದಿಂದ ತುಳಿತಕ್ಕೆಒಳಗಾಗಿದ್ದರು. ಕಾಲ ಬದಲಾಗಿದ್ದು ಸಮುದಾಯ ಬಾಂಧವರು ಎಲ್ಲಾ ಕ್ಷೇತ್ರದಲ್ಲಿ ಮುಂದುವರೆದ ಸಮುದಾಯ ಎಂದೆನಿಸಿಕೊಂಡಿದ್ದಾರೆ ಎಂದು ಎಸ್.ಎನ್.ಡಿ.ಪಿ ಯೂನಿಯನ್ ಜಿಲ್ಲಾಧ್ಯಕ್ಷ ವಿ.ಕೆ. ಲೋಕೇಶ್ ಅವರು ಅಭಿಪ್ರಾಯ ವ್ಯಕ್ತ ಪಡಿಸಿದರು.
ಶ್ರೀ ನಾರಾಯಣ ಗುರು ಪರಿಪಾಲನ ಯೋಗಂ, ಎಸ್.ಎನ್.ಡಿ.ಪಿ. ವಿರಾಜಪೇಟೆ ಶಾಖೆಯ 2022-25 ನೇ ಸಾಲೀನ ಮಹಾಸಭೆಯು ನಗರದ ಮುತ್ತಪ್ಪ ದೇವಾಲಯದ ಶ್ರೀ ಮುತ್ತಪ್ಪ ಕಲಾ ಮಂಟಪ ಸಭಾಂಗಣದಲ್ಲಿ ಶಾಖೆಯ ಅದ್ಯಕ್ಷರಾದ ಟಿ.ಎ. ನಾರಾಯಣ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮಹಾಸಭೆಗೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಲೋಕೇಶ್ ಅವರು ಯೋಗಂ, ಯುನಿಯನ್, ಶಾಖೆಯ ಅಡಿಯಲ್ಲಿ ಸಂಘಟನೆಯು ಆರಂಭಿಸಲಾಗಿದೆ.ಏಕ ದೇವ, ಎಏಕ ಧರ್ಮ, ಏಕ ಜಾತಿ ಎಂದು ಪರಿಪಾಲನೆಯ ಮಾಡುವಂತೆ ಕರೆ ನೀಡಿದ ಶ್ರೀ ನಾರಾಯಣ ಗುರು ಸಂತರಾಗಿ ಸಂಘಟನೆಯ ಅದ್ಯಕ್ಷರಾಗಿ ಸೇವೆಯನ್ನು ಸಲ್ಲಸಿದ್ದಾರೆ. ಸಮುದಾಯ ಬಾಂಧವರು ಶೈಕ್ಷಣಿಕವಾಗಿ ಮುಂದುವರೆದಲ್ಲಿ ಮಾತ್ರ ಉತ್ತಮ ಸಮಾಜ ರೂಪಿಸಲು ಸಾಧ್ಯ.ಈ ನಿಟ್ಟಿನಲ್ಲಿ ಮುಂದಿನ 25 ವರ್ಷಗಳ ದೂರದೃಷ್ಟಿಯನ್ನು ಮನದಲ್ಲಿಟ್ಟು ಪ್ರತಿಯೊಂದು ಮನೆಯಲ್ಲಿ ಪದವಿ ಪಡೆದ ವ್ಯಕ್ತಿ ಕಾಣಸಿಗಬೇಕು. ಸಂಘಟನೆ 100 ವರ್ಷಗಳ ಇತಿಹಾಸ ಹೊಂದಿದ್ದು. ಅಂದೂ ರೂಪಿಸಲಾದ ಬೈಲಾ ಕಾನೂನು ಅಡಿಯಲ್ಲಿ ಎಲ್ಲಾ ಶಾಖೆಗಳು ಕಾರ್ಯನಿರ್ವಹಿಸುತ್ತಿದೆ. ಸಮಾಜ ಬಾಂಧವರು ಇಂದು ಎಲ್ಲಾ ಕ್ಷೇತ್ರದಲ್ಲಿ ಅಭಿವೃದ್ದಿ ಸಾಧಿಸಿದ್ದಾರೆ. ಸಮಾಜದಲ್ಲಿ ಗುರುತಿಸುವಂತ ಕಾರ್ಯಕ್ಕೆ ಮುಂದಾಗಿರುವುದು ಶ್ರೀ ನಾರಾಯಣ ಗುರು ಅವರು ಹಾಕಿಕೊಟ್ಟ ಸಿದ್ದಾಂತಗಳಿಂದ ಮಾತ್ರ ಎಂದು ಹೆಮ್ಮೆಯಿಂದ ಹೇಳುತ್ತೇನೆ ಎಂದು ಮಹಾಸಭೆ ಉದ್ದೇಶಿಸಿ ಮಾತನಾಡಿದರು.
ಎಸ್.ಎನ್.ಡಿ.ಪಿ ವಿರಾಜಪೇಟೆ ಶಾಖೆಯ ಅಧ್ಯಕ್ಷರಾದ ಟಿ.ಎ. ನಾರಾಯಣ ಅವರು ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಾಖೆಯು ತನ್ನ ಮೂರು ವರ್ಷಗಳ ಅವಧಿಯಲ್ಲಿ ಸಮಾಜ ಬಾಂಧವರನ್ನು ಗುರುತಿಸಿ ಸನ್ಮಾನ ಕಾರ್ಯಕ್ರಮ, ಮತ್ತು ವಿವಿಧ ಕಾರ್ಯಗಳಿಗೆ ಸಹಾಯಧನವನ್ನು ಒದಗಿಸಿದೆ. ಅವಧಿಯಲ್ಲಿ ಆಡಳಿತ ಮಂಡಳಿಯ ಸದಸ್ಯರು, ಯೂನಿಯನ್ ನೊಂದಿಗೆ ಉತ್ತಮ ಬಾಂಧವ್ಯ ಹೊಂದಿದೆ ಎಂದು ಹೇಳಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಶಾಖೆಯ ಕಾರ್ಯದರ್ಶಿ ಟಿ.ಕೆ. ಪದ್ಮನಾಭ ಅವರು 2022-25 ನೇ ಸಾಲಿನ ವರದಿ, ಮತ್ತು ಲೆಕ್ಕಪರಿಶೋಧನ ವರದಿಯನ್ನು ವಾಚಿಸಿದರು. ಕಾರ್ಯಕ್ರಮದ ಮೊದಲಿಗೆ ದೀಪ ಬೆಳಗಿಸಿ ಶ್ರೀ ನಾರಾಯಣ ಗುರು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಅಗಲಿದ ಶಾಖೆಯ ಸದಸ್ಯರಿಗೆ ಒಂದು ನಿಮಿಷಗಳ ಮೌನ ಪ್ರಾರ್ಥನೆ ನೆರವೆರಿಸಿದರು.
ಚೆಸ್ಕಂ ಸಹಾಯಕ ಅಭಿಯಂತರರಾದ ಸೊಮೇಶ್ ಮತ್ತು ಬಿಲ್ಲವ ಸಮಾಜದ ಅಧ್ಯಕ್ಷರು ಹಾಗೂ ಗುತ್ತಿಗೆಧಾರರಾದ ಬಿ.ಎಂ, ಗಣೇಶ್, 2024 ನೇ ಸಾಲೀನಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪದವಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಗಣ್ಯರಿಂದ ಸನ್ಮಾನಿಸಲಾಯಿತು. 2026-29 ನೇ ಸಾಲೀನ ಆಡಳಿತ ಮಂಡಳಿಯು ಪುನರ್ ರಚನೆಗೊಂಡು ಅದ್ಯಕ್ಷರಾಗಿ ಟಿ.ಎ. ನಾರಾಯಣ, ಉಪಾಧ್ಯಕ್ಷರಾಗಿ ಟಿ.ಆರ್. ಗಣೇಶ್, ಕಾರ್ಯದಶಿಯಾಗಿ ಟಿ.ಕೆ.ಪದ್ಮನಾಭ ಅವರುಗಳು ಪುನರ್ ಆಯ್ಕೆಗೊಂಡರು.
ಜಿಲ್ಲಾ ಯುನಿಯನ್ ಉಪಾಧ್ಯಕ್ಷರಾದ ಕೆ. ರಾಜನ್, ಜಿಲ್ಲಾ ಕಾರ್ಯಕಾರಿ ಮಂಡಳಿ ಸದಸ್ಯ ಗಿರೀಶ್ , ಶ್ರೀ ಚೈತನ್ಯ ಮಠಪುರ ಮುತ್ತಪ್ಪ ದೇವಾಲಯದ ಅಧ್ಯಕ್ಷರಾದ ಟಿ.ಕೆ. ರಾಜನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಎಸ್.ಎನ್.ಡಿ.ಪಿ ವಿರಾಜಪೇಟೆ ಶಾಖೆಯ ಕಾರ್ಯದರ್ಶಿ ಟಿ.ಕೆ ಪದ್ಮನಾಭ ಅವರು ಸ್ವಾಗತಿಸಿ, ಉಷಾ ಕುಮಾರಿ ನಿರೂಪಿಸಿ, ಶಾಖೆಯ ಉಪಾಧ್ಯಕ್ಷ ಟಿ.ಆರ್. ಗಣೇಶ್ ವಂದಿಸಿದರು.
ಎಸ್.ಎನ್.ಡಿ.ಪಿ ವಿರಾಜಪೇಟೆ ಶಾಖೆಯ ಅಡಳಿತ ಮಂಡಳಿಯ ಪದಾಧಿಕಾರಿಗಳು ಸದಸ್ಯರು, ವಿವಿಧ ಭಾಗಗಳಿಂದ ಆಗಮಿಸಿದ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.
ವರದಿ:ಕಿಶೋರ್ ಕುಮಾರ್ ಶೆಟ್ಟಿ