ಗುಂಡಿಕೆರೆಯಲ್ಲಿ ನಿರ್ಮಾಣವಾದ 35ಲಕ್ಷ ರೂ ವೆಚ್ಚದ ಕಾಂಕ್ರೀಟ್ ರಸ್ತೆ
ವಿರಾಜಪೇಟೆ:ತಾಲ್ಲೂಕಿನ ಬೇಟೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ, ಬೇಟೋಳಿ ಗುಂಡಿಕೆರೆಯ ಮಸೀದಿ ಮುಂಭಾಗದಿಂದ ಬೇಟೋಳಿ ಸರ್ಕಾರಿ ಶಾಲೆಯವರೆಗೆ ಹಾದು ಹೋಗುವ ರಸ್ತೆ ಮತ್ತು ಅಲ್ಪಸಂಖ್ಯಾತ ಕುಟುಂಬಸ್ಥರುಗಳ ಮನೆಗಳಿಗೆ ಹಾದು ಹೋಗುವ ರಸ್ತೆಯು, ಹಲವು ವರ್ಷಗಳಿಂದ ದುಸ್ಥಿತಿಯಲ್ಲಿದ್ದನ್ನ ಗಮನಿಸಿ, ಸುಸಜ್ಜಿತ ರಸ್ತೆಯ ಬೇಡಿಕೆಯನ್ನು ಅಲ್ಪಸಂಖ್ಯಾತ ಅಭಿವೃದ್ಧಿ ಇಲಾಖೆ ಅನುದಾನದಲ್ಲಿ ಮುಖ್ಯಮಂತ್ರಿಯವರ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣರವರು ಸುಮಾರು ₹35 ಲಕ್ಷಗಳ ವೆಚ್ಚದಲ್ಲಿ ನಿರ್ಮಿಸಲು ಸಹಕರಿಸಿದ್ದಾರೆ. ಇದೀಗ ಸುಸಜ್ಜಿತ ಕಾಂಕ್ರೀಟ್ ರಸ್ತೆಯು ಪೂರ್ಣಗೊಂಡಿದೆ.