ಚೆಂಬು ಗ್ರಾಮದ ಕಾಂತುಬೈಲಿನಲ್ಲಿ ಶಾಸಕ ಎ.ಎಸ್ ಪೊನ್ನಣ್ಣ ಅವರ 25ಲಕ್ಷ ರೂ ಅನುದಾನದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿ ಪೂರ್ಣ

ಚೆಂಬು ಗ್ರಾಮದ ಕಾಂತುಬೈಲಿನಲ್ಲಿ ಶಾಸಕ ಎ.ಎಸ್ ಪೊನ್ನಣ್ಣ ಅವರ 25ಲಕ್ಷ ರೂ ಅನುದಾನದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿ ಪೂರ್ಣ

ಸಂಪಾಜೆ:ಚೆಂಬು ಗ್ರಾಮದ ಕಾಂತುಬೈಲಿನಲ್ಲಿ, ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರ ಅನುದಾನದ ಅಂದಾಜು ₹ 25 ಲಕ್ಷ ವೆಚ್ಚದಲ್ಲಿ, ನೂತನವಾದ ಕಾಂಕ್ರೀಟ್ ರಸ್ತೆ (ಅಂದಾಜು 225 ಮೀಟರ್) ಹಾಗೂ ಸೇತುವೆಗೆ ಕೈತಡೆ ಮತ್ತು ಸೇತುವೆಯ ನಾಲ್ಕು ಬದಿಗೆ ತಡೆಗೋಡೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ.

 ಈ ಹಿಂದೆ ಪ್ರಕೃತಿ ವಿಕೋಪ ಸಂದರ್ಭದಲ್ಲಿ, ಈ ಭಾಗದಲ್ಲಿ ಸೇತುವೆ ಹಾಗೂ ರಸ್ತೆಗಳಿಗೆ ತೀವ್ರತರವಾದ ಹಾನಿಯಾಗಿತ್ತು. ಇದನ್ನು ಮನಗಂಡ ಶಾಸಕರು, ವಿಶೇಷ ಅನುದಾನ ನೀಡಿ ಈ ಭಾಗದ ಗುಡ್ಡ ಪ್ರದೇಶದ ಜನರಿಗೆ ಅನುಕೂಲವಾಗಲೆಂದು ರಸ್ತೆ ನಿರ್ಮಿಸಲು ಅನುವು ಮಾಡುವುದರೊಂದಿಗೆ, ಸೇತುವೆಯ ಎರಡೂ ಬದಿಯ ನಾಲ್ಕು ಕಡೆ, ತಡೆಗೋಡೆ ನಿರ್ಮಾಣ ಹಾಗೂ ಸೇತುವೆಯಲ್ಲಿ ಪ್ರಯಾಣಿಸುವವರ ಸುರಕ್ಷಗಾಗಿ ಕೈತಡೆಯನ್ನು ನಿರ್ಮಿಸಿ ಸಹಕರಿಸಿರುತ್ತಾರೆ.

 ಪೂರ್ಣಗೊಂಡ ಕಾಮಗಾರಿಯ ವೀಕ್ಷಣೆಯನ್ನು ಇಂದು ಚೆಂಬು ವಲಯ ಕಾಂಗ್ರೆಸ್ ಪ್ರಮುಖರು ನೆರವೇರಿಸಿದರು. ಶಾಸಕರ ಮುಂದಿನ ಪ್ರವಾಸ ಕಾರ್ಯಕ್ರಮದಲ್ಲಿ ಈ ರಸ್ತೆಯನ್ನು ಲೋಕಾರ್ಪಣೆ ಮಾಡಲಾಗುವುದು ಎಂದು ವಲಯ ಕಾಂಗ್ರೆಸ್ ಅಧ್ಯಕ್ಷರಾದ ರವಿರಾಜ್ ಹೊಸೂರು ತಿಳಿಸಿದ್ದಾರೆ.