Kodagu

ಜನಾಂಗ ನಿಂದನೆ, ಮಹಿಳೆಯ ಹೇಳಿಕೆಗೆ ಖಂಡನೆ

admincoorgdaily

ಜನಾಂಗ ನಿಂದನೆ, ಮಹಿಳೆಯ ಹೇಳಿಕೆಗೆ ಖಂಡನೆ

ವಿರಾಜಪೇಟೆ; ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಅನಿತ ಕಾಸರಗೋಡು ಎಂಬ ಮಹಿಳೆ ಬಿಲ್ಲವ ಸಮಾಜ, ಪೂಜಾರಿ,ಬಂಟ್ಸ್ ಸೇರಿದಂತೆ ಹಿಂದೂ ಧರ್ಮವನ್ನು ಅವಹೇಳನ ಮಾಡುವಂತೆ ತುಚ್ಚವಾಗಿ ಕಂಡು ಮನಬಂದಂತೆ ಮಾತನಾಡಿರುವುದು ಖಂಡನಾರ್ಹವೆಂದು ಕೆದಮುಳ್ಳೂರು ಗ್ರಾಮ‌ ಪಂಚಾಯಿತಿ ಮಾಜಿ ಸದಸ್ಯ ಕಿರಣ್ ಪೂಜಾರಿ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮಹಿಳೆಯು ತನ್ನ ವೈಯುಕ್ತಿಕ ದ್ವೇಷ ಸಾಧನೆಯನ್ನು ಮುಂದಿಟ್ಟುಕೊಂಡು ಅನ್ಯಕೋಮಿನ ಬಾಂಧವರನ್ನು ಆಕಾಶ ಎತ್ತೆರಕಿಟ್ಟು ಹಿಂದೂ ಧರ್ಮ ಮತ್ತು ಹಿಂದೂ ಧರ್ಮದಲ್ಲಿ ಅಡಕವಾಗಿರುವ ಜಾತಿಗಳ ಬಗ್ಗೆ ಕೀಳಾಗಿ ಮಾತನಾಡಿರುವುದು ಖಂಡನೀಯ.

ಮಹಿಳೆಯು ಸಾಮಾಜಿಕ ಜಾಲತಾಣದಲ್ಲಿ ‌ಹರಿಬಿಟ್ಟ ಸಂದೇಶವು ವಿಶ್ವದ ಎಲ್ಲೆಡೆ ವಾಸಮಾಡುವ ಬಿಲ್ಲವ ಸಮಾಜವನ್ನು ಗುರಿಯಾಗಿಸಿಕೊಂಡು ಅಶ್ಲೀಲ ಪದಗಳ ಬಳಕೆ ಮಾಡಿ ನಿಂದಿಸಿರುವುದು ಖಂಡನೀಯ. ಸಾಮಾಜಿಕ ಜಾಲತಾಣದ ಮೂಲಕ ವಿಡಿಯೋ ಸಂದೇಶ ಹರಿಯಬಿಟ್ಟ ಮಹಿಳೆಯ ಮೇಲೆ ಕಾನೂನು ಕ್ರಮ ಜರುಗಿಸಿ ಮಹಿಳೆಯನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.