ಸೋಲು-ಗೆಲುವನ್ನು ಸಮಾನ ಮನಸ್ಥಿತಿಯಲ್ಲಿ ಸ್ವೀಕಾರ ಮಾಡುವ ಮನೋಭಾವವನ್ನು ಬೆಳೆಸಿಕೊಳ್ಳುವುದು ನಿಜವಾದ ಕ್ರೀಡಾ ಸ್ಪೂರ್ತಿ;ಶಾಸಕ‌ ಎಎಸ್ ಪೊನ್ನಣ್ಣ

Jan 25, 2026 - 09:57
 0  258
ಸೋಲು-ಗೆಲುವನ್ನು ಸಮಾನ ಮನಸ್ಥಿತಿಯಲ್ಲಿ ಸ್ವೀಕಾರ ಮಾಡುವ ಮನೋಭಾವವನ್ನು ಬೆಳೆಸಿಕೊಳ್ಳುವುದು ನಿಜವಾದ ಕ್ರೀಡಾ ಸ್ಪೂರ್ತಿ;ಶಾಸಕ‌ ಎಎಸ್ ಪೊನ್ನಣ್ಣ

ಚೆಟ್ಟಿಮಾನಿ ಪ್ರೀಮಿಯರ್ ಲೀಗ್ ಪಂದ್ಯಾವಳಿಯ ಮುಖ್ಯ ಅತಿಥಿಯಾಗಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭಾಗವಹಿಸಿ ಶುಭ ಕೋರಿದರು.

ಭಾಗಮಂಡಲ ಹೋಬಳಿಯ ಚೆಟ್ಟಿಮಾನಿಯ ಶಾಲಾ ಮೈದಾನದಲ್ಲಿ ಆಯೋಜನೆಗೊಂಡ ಈ ಪಂದ್ಯಾವಳಿಗೆ ಶುಭ ಕೋರುತ್ತಾ ಮಾತನಾಡಿದ ಶಾಸಕರು, ಪಂದ್ಯಾಟದಲ್ಲಿ ಭಾಗವಹಿಸಿದವರೆಲ್ಲರೂ ಕ್ರೀಡಾ ಸ್ಪೂರ್ತಿಯಿಂದ ಕ್ರೀಡೆಯನ್ನು ಆನಂದಿಸಿ ಗೆಲುವನ್ನು ತಮ್ಮದಾಗಿಸಿಕೊಳ್ಳಲು ಪ್ರಯತ್ನಿಸಬೇಕೆಂದು ಹೇಳಿದರು.

ಪಂದ್ಯಾಟವನ್ನು ಕ್ರೀಡಾಸ್ಪೂರ್ತಿಯಲ್ಲಿ ತೆಗೆದುಕೊಂಡು ಸೋಲು ಗೆಲುವನ್ನು ಸಮಾನ ಮನಸ್ಥಿತಿಯಲ್ಲಿ ಸ್ವೀಕಾರ ಮಾಡುವ ಮನೋಭಾವವನ್ನು ಬೆಳೆಸಿಕೊಳ್ಳುವುದು ನಿಜವಾದ ಕ್ರೀಡಾ ಸ್ಪೂರ್ತಿ ಎಂದು ಬಣ್ಣಿಸಿದ ಮಾನ್ಯ ಶಾಸಕರು, ಆಯೋಜಕರ ಪ್ರಯತ್ನವನ್ನು ಮೆಚ್ಚಿದರು.

 ಈ ಸಂದರ್ಭದಲ್ಲಿ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಇಸ್ಮಾಯಿಲ್, ವಲಯ ಅಧ್ಯಕ್ಷರು ಕೀರ್ತಿ ಉತ್ತಪ್ಪ, ಕಾರ್ಯಕ್ರಮ ಆಯೋಜಕರು ಬ್ಲೂ ಸ್ಟಾರ್ ಅಧ್ಯಕ್ಷರು ಸರ್ಫುದಿನ್, ಪಂಚಾಯಿತಿ ಸದಸ್ಯರು ಹ್ಯಾರೀಶ್, ಪಕ್ಷದ ಮುಖಂಡರು ಸೂರಜ್ ಹೊಸೂರು, ಸುನಿಲ್ ಪತ್ರಾವ್, ಪ್ರಕಾಶ್, ಹರ್ಷ, ಯುವ ಕಾಂಗ್ರೆಸ್ ಉಪಾಧ್ಯಕ್ಷರು ಮೈಸಿ ಕತ್ತಣ್ಣಿರ, ನಾಪೋಕ್ಲು ಯುವ ಕಾಂಗ್ರೆಸ್ ಅಧ್ಯಕ್ಷರು ಹಂಸ ಕೊಡಿ, ಗೌರೀಶ್, ರಶೀದ್, ರಿಷಿ ಕೆದಂಬಾಡಿ, ಸುಹೈದ್ ಹಾಗೂ ಕ್ರೀಡಾ ಪ್ರೇಮಿಗಳು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 1
Wow Wow 0