ಕಾರ್ಮಿಕ ಸಂಘಟನೆಗಳೊಂದಿಗೆ ಚರ್ಚಿಸಿ ಕನಿಷ್ಠ ವೇತನದ ಕುರಿತು ಸಲಹೆ;ಟಿ.ಎಂ.ಶಾಹಿದ್ ತೆಕ್ಕಿಲ್
admincoorgdaily

ಮಡಿಕೇರಿ: ರಾಜ್ಯದ ಎಲ್ಲ ಜಿಲ್ಲೆಗಳ ಪ್ರವಾಸ ಕೈಗೊಂಡು ಕಾರ್ಮಿಕ ಸಂಘಟನೆಗಳೊಂದಿಗೆ ಚರ್ಚಿಸಿ ಕನಿಷ್ಠ ವೇತನದ ಕುರಿತು ಸಲಹೆ ನೀಡುವುದಾಗಿ ಕರ್ನಾಟಕ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ.ಶಾಹಿದ್ ತೆಕ್ಕಿಲ್ ತಿಳಿಸಿದರು.
ಕೇಂದ್ರದ ಹೊಸ ಕಾರ್ಮಿಕ ಕೋಡ್‌ಗಳಿಂದ ಆತಂಕ ಇರುವ ಹಿನ್ನೆಲೆಯಲ್ಲಿ ಕ್ಷೇತ್ರ ಮಟ್ಟದ ಸಮಸ್ಯೆ ಆಲಿಸುವುದು ಅಗತ್ಯ ಎಂದ ಅವರು, ಗಲ್ಫ್‌ನಲ್ಲಿ ಭಾರತೀಯ ಕಾರ್ಮಿಕರು ಎದುರಿಸಿದ ಸಮಸ್ಯೆ ಉಲ್ಲೇಖಿಸಿ, ರಾಜ್ಯ ಮಟ್ಟದಲ್ಲಿ ಹಿತರಕ್ಷಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು. ರಾಜ್ಯದ ಗ್ಯಾರಂಟಿ ಯೋಜನೆಗಳು ಕಾರ್ಮಿಕರಿಗೆ ನೆರವಾಗಿವೆ, ಇತರ ರಾಜ್ಯಗಳೂ ಅನುಸರಿಸುತ್ತಿವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರಾ ಮೈನಾ, ಪ್ರಕಾಶ್ ಆಚಾರ್ಯ, ಎಚ್.ಎ.ಹಂಸ, ಪ್ರಮುಖರಾದ ದಿನೇಶ್ ಶೆಟ್ಟಿ, ಜಗದೀಶ್ ಉಪಸ್ಥಿತರಿದ್ದರು.