ಜಗಳವನ್ನು ನಿಲ್ಲಿಸಲು ಬಂದವನ ಕೈಯಲ್ಲಿ ರಕ್ತ ಸುರಿದರೆ ಕಾನೂನು ಮೌನವಾಗಲಾರದೆಂದು ವಿರಾಜಪೇಟೆ ಜಡ್ಜ್ ಯಾಕೆ ಹೇಳಿದರು ಗೊತ್ತೇ?: 2022ರಲ್ಲಿ ಕುಟ್ಟ ಗ್ರಾಮದಲ್ಲಿ ನಡೆದದ್ದೇನು ಗೊತ್ತಾ!
" ವರದಿ: ಕಿಶೋರ್ ಕುಮಾರ್ ಶೆಟ್ಟಿ
ವಿರಾಜಪೇಟೆ: ಪತಿ ಮತ್ತು ಪತ್ನಿ ನಡುವೆ ಜಗಳ ಅಕ್ರಮ ಸಂಬಂಧ ಎಂದು ವಾದದ ನಡುವೆ ಜಗಳ ಬಿಡಿಸಲು ಬಂದ ವ್ಯಕ್ತಿಯ ಮೇಲೆ ಕತ್ತಿಯಿಂದ ಹಲ್ಲೆ ಮಾಡಿದ ಘಟನೆಗೆ ಸಂಭಂದಿಸಿದಂತೆ ವಿರಾಜಪೇಟೆ ನ್ಯಾಯಾಲಯವು ಆರೋಪಿಗೆ ಕಠಿಣ ಜೀವಾವಧಿ ಶಿಕ್ಷೆಯನ್ನು ಪ್ರಕಟಿಸಿದೆ.
ಪೊನ್ನಂಪೇಟೆ ತಾಲೂಕು ಕುಟ್ಟ ವ್ಯಾಪ್ತಿಯ ತೈಲ ಗ್ರಾಮ ಚೆಕ್ಕೇರ ತಿಮ್ಮಯ್ಯ ಅವರ ತೋಟದ ಲೈನ್ ಮನೆಯಲ್ಲಿ ವಾಸವಿದ್ದ ಕರ್ಪ ಎಂಬುವವರ ಪುತ್ರ ಪಂಜರಿಎರವರ ಸುಬ್ರಮಣಿ ಅಲಿಯಾಸ್ ಚಂದನ್ (26) ಕಠಿಣ ಜೀವಾವಧಿ ಶಿಕ್ಷೆಗೆ ಗುರಿಯಾದ ವ್ಯಕ್ತಿ. ಕುಟ್ಟ, ನರಿಕಡಿಯ ಗ್ರಾಮದ ಪಂಜರಿಎರವರ ಚಾಮಿ ಅಲಿಯಾಸ್ ಬಸವ (23) ಕತ್ತಿಯಿಂದ ಹಲ್ಲೆಗೆ ಒಳಗಾಗಿ ಕೈತುಂಡಾದ ವ್ಯಕ್ತಿ.
ಘಟನೆಯ ವಿವರ:
ಕುಟ್ಟ ನರಿಕಡಿಯ ಗ್ರಾಮದ ತಿತೀರ ಜಯ ಎಂಬುವವರ ತೋಟದ ಲೈನ್ ಮನೆಯಲ್ಲಿ ವಾಸವಿದ್ದ ಚಾಮಿ ಅಲಿಯಾಸ್ ಬಸವ ಕಾಫಿ ತೋಟದ ಕಾರ್ಮಿಕನಾಗಿ ದುಡಿಯುತ್ತಿದ್ದ. ಬಸವನ ಪೋಷಕರು ಸನಿಹ ಗ್ರಾಮವಾದ ತೈಲ ಗ್ರಾಮದ ನಿವಾಸಿ ಚೆಕ್ಕೇರ ತಿಮ್ಮಯ್ಯ ಎಂಬುವವರ ಕಾಫಿ ತೋಟದ ಲೈನ್ ಮನೆಯಲ್ಲಿ ವಾಸವಿದ್ದರು. ದಿನಾಂಕ 30-06-2022 ರಂದು ಚಾಮಿ ವಾರದ ರಜೆ ಪಡೆದು ತನ್ನ ಪೋಷಕರನ್ನು ನೋಡಲು ತೈಲ ಗ್ರಾಮಕ್ಕೆ ಆಗಮಿಸಿದ್ದ.ಪೊಷಕರು ವಾಸವಿರುವ ಲೈನ್ ಮನೆಯ ಸನಿಹದಲ್ಲೇ ಪ್ರಕರಣದ ಆರೋಪಿಯಾಗಿರುವ ಸುಬ್ರಮಣಿ ಮತ್ತು ಪತ್ನಿ ಪುಟ್ಟಿ ವಾಸವಾಗಿದ್ದರು.
ಸುಬ್ರಮಣಿ ಮತ್ತು ಪತ್ನಿ ಪುಟ್ಟಿ ಈರ್ವರ ಮಧ್ಯೆ ಆಗ್ಗಿಂದಾಗೆ ಜಗಳಗಳು ನಡೆಯುತ್ತಿದ್ದವು ಎನ್ನಲಾಗಿದೆ. ನಂತರ ಸಂಜೆ ವೇಳೆ ಅಂದರೆ ಸುಮಾರು 6-30 ಗಂಟೆಗೆ ಚಾಮಿ ಮತ್ತು ಪೊಷಕರು ಸಂಜೆಯ ಅಡುಗೆ ಕೆಲಸದಲ್ಲಿ ತಲ್ಲೀನರಾಗಿದ್ದರು. ಆ ಸಮಯದಲ್ಲಿ ಪಕ್ಕದ ಲೈನ್ ಮನೆಯಲ್ಲಿದ್ದ ಸುಬ್ರಮಣಿ ಮತ್ತು ಪತ್ನಿ ಪುಟ್ಟಿಯ ನಡುವೆ ಜಗಳ ನಡಯುತಿದ್ದ ಶಬ್ದ ಕೇಳಿಸಿಕೊಂಡಿದೆ.ತಕ್ಷಣವೇ ಸುಬ್ರಮಣಿ ಜಗಳ ಬಿಡಿಸಲು ಸ್ಥಳಕ್ಕೆ ತೆರಳಿದ್ದಾನೆ. ಈ ವೇಳೆ ಕೋಪಿತನಾದ ಸುಬ್ರಮಣಿ ತನ್ನ ಪತ್ನಿ ಹಾಗು ನಿನ್ನ ನಡುವೆ ಅಕ್ರಮ ಸಂಭಂದವಿದೆ ಎಂದು ಹೇಳುತ್ತಾ ಜಗಳಕ್ಕೆ ಬಂದಿದ್ದಾನೆ. ಹುಚ್ಚು ಮಾತನಾಡಬೇಡ ಜಗಳ ನಿಲ್ಲಿಸು ಎಂದು ಹೇಳಿದ ಚಾಮಿ.
ಈ ಸಂದರ್ಭದಲ್ಲಿ ಮನೆಯಲ್ಲಿದ್ದ ಕತ್ತಿಯನ್ನು ಹೊರತಂದು ಚಾಮಿಯನ್ನು ಕೊಲೆ ಮಾಡುವ ಉದ್ದೇಶದಿಂದ ಕತ್ತಿಯಿಂದ ಚಾಮಿಯ ಮೇಲೆ ಪ್ರಹಾರ ಮಾಡಿದ್ದಾನೆ.ತಲೆಭಾಗಕ್ಕೆ ಪ್ರಹಾರ ಮಾಡಲು ಮುಂದಾದಗ ಕೈಯಿಂದ ತಡೆಯಲು ಯತ್ನಸಿದ್ದಾನೆ ಚಾಮಿ, ಪರಿಣಾಮ ಕ್ಷಣ ಮಾತ್ರದಲ್ಲೇ ಕೈಯ ಮಣಿಗಂಟಿನ ಮುಂಭಾಗ ಕತ್ತರಿಸಿ ನೆಲೆಕ್ಕೆ ಉರುಳಿದೆ. ರಕ್ತ ಸ್ರಾವದಿಂದ ನರಳುತ್ತಾ ಕೂಗಿಕೊಂಡಿದ್ದಾನೆ. ಚಾಮಿಯ ಪೋಷಕರು ಮತ್ತು ಸನಿಹದ ಲೈನ್ ಮನೆಯಲ್ಲಿ ವಾಸವಿದ್ದ ಇತರರು ತೋಟದ ಮಾಲೀಕರಿಗೆ ವಿವರ ತಿಳಿಸಿದ್ದಾರೆ.
ಮಾಲೀಕರು ಬೆಂಗಳೂರುನಲ್ಲಿ ನೆಲೆಸಿರುವುದರಿಂದ, ಬೇರುಕೊಲ್ಲಿ ಮೊಹಮ್ಮದ್ ಅಲಿ ಎಂಬುವವರಿಗೆ ಸಹಯಕ್ಕೆ ಧಾವಿಸಲು ತಿಳಿಸಿದ್ದಾರೆ. ಗಾಯಳುವನ್ನು ಕುಟ್ಟ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು. ಗಾಯಳು ಚಾಮಿ ನೀಡಿದ ದೂರಿನ ಅಧಾರದ ಮೇಲೆ ಕುಟ್ಟ ಪೊಲೀಸ್ ಠಾಣೆಯಲ್ಲಿ ಅರೋಪಿ ಸುಬ್ರಮಣಿಯ ಮೇಲೆ ತಾ.01-07-2022 ರಂದು ಐ.ಪಿ.ಸಿ 307 ರಂತೆ ಪ್ರಕರಣ ದಾಖಲಾಗುತ್ತದೆ. ಕುಟ್ಟ ಪಿ.ಎಸ್.ಐ ಆಗಿದ್ದ ಸಣ್ಣಪ್ಪ ಅವರು ತನಿಖೆ ನಡೆಸಿ 08-08-2022 ರಲ್ಲಿ ನ್ಯಾಯಲಯಕ್ಕೆ ದೋಷಾರೋಪಣ ಪತ್ರವನ್ನು ಸಲ್ಲಿಸುತ್ತಾರೆ.
ವಿರಾಜಪೇಟೆ 2 ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ವಿರಾಜಪೇಟೆಯಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತದೆ. ಅಂತಿಮವಾಗಿ 27-09-2025 ರಲ್ಲಿ ನ್ಯಾಯಾಲಯವು ತೀರ್ಪುನ್ನು ಪ್ರಕಟಿಸಿತು. ತಾ.03-10-2025 ರಂದು ನ್ಯಾಯಾಲಯದ ಗೌ. ನ್ಯಾಯಾಧೀಶರಾದ ಎಸ್, ನಟರಾಜು ಅವರು ಪ್ರಕರಣದ ಆರೋಪಿಗೆ ಕಲಂ 307 ರ ಅನ್ವಯ ಜೀವಾವಧಿ ಕಠಿಣ ಕಾರಾಗೃಹ ಶಿಕ್ಷೆ ಮತ್ತು 25000/- ದಂಡ ವಿಧಿಸಿದ್ದು ದಂಡ ಪಾವತಿಸಲು ತಪ್ಪಿದಲ್ಲಿ 06 ತಿಂಗಳ ಕಾಲ ಹೆಚ್ಚುವರಿ ಕಾರಾಗೃಹ ವಾ ಅನುಭವಿಸುವಂತೆ ಶಿಕ್ಷೆಯ ಪ್ರಮಾಣವನ್ನು ವಿಧಿಸಿ ತೀರ್ಪು ನೀಡಿತು. "ಜಗಳವನ್ನು ನಿಲ್ಲಸಲು ಬಂದವನ ಕೈಯಲ್ಲಿ ರಕ್ತ ಸುರಿದರೆ ಕಾನೂನು ಮೌನವಾಗಲಾರದು." ಎಂದು ತೀರ್ಪು ನೀಡಿದ ವೇಳೆಯಲ್ಲಿ ನ್ಯಾಯಾಧೀಶರು ಉಲ್ಲೇಖಿಸಿದರು. 2 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸರ್ಕಾರಿ ಅಭಿಯೋಜಕರಾದ ಯಾಸೀನ್ ಅಹಮ್ಮದ್ ಅವರು ವಾದವನ್ನು ಮಂಡಿಸಿದರು.