ದಸರಾ ಉದ್ಘಾಟಕರಾಗಿ ಬಾನು ಮುಷ್ತಾಕ್ ಆಯ್ಕೆ ಕಾಮಾಲೆ ಕಣ್ಣಿಂದ ನೋಡದಿರಿ: ಶಾಸಕ ಎ.ಎಸ್.ಪೊನ್ನಣ್ಣ

Aug 26, 2025 - 09:13
 0  259
ದಸರಾ ಉದ್ಘಾಟಕರಾಗಿ ಬಾನು ಮುಷ್ತಾಕ್ ಆಯ್ಕೆ ಕಾಮಾಲೆ ಕಣ್ಣಿಂದ ನೋಡದಿರಿ: ಶಾಸಕ  ಎ.ಎಸ್.ಪೊನ್ನಣ್ಣ

ಮಡಿಕೇರಿ: ನಾಡ ಹಬ್ಬ ಮೈಸೂರು ದಸರಾ ಕಾರ್ಯಕ್ರಮ ಉದ್ಘಾಟನೆ ಗೆ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ರವರ ಆಯ್ಕೆಯನ್ನು ಕಾಮಾಲೆ ಕಣ್ಣಿಂದ ನೋಡದಿರಿ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಶಾಸಕರಾದ ಎ.ಎಸ್.ಪೊನ್ನಣ್ಣ ನವರು ಪ್ರತಿಕ್ರಿಯೆ ನೀಡಿದ್ದಾರೆ.

ವಿಶ್ವವಿಖ್ಯಾತ ಮೈಸೂರು ದಸರಾ ಕಾರ್ಯಕ್ರಮಕ್ಕೆ ಬಾನು ಮುಷ್ತಾಕ್ ರವರಿಗೆ ಅವಕಾಶ ನೀಡಿದಕ್ಕೆ ಪರ ವಿರೋಧ ಚರ್ಚೆ ನಡೆಯುತ್ತಿದ್ದು ಇದರ ಬಗ್ಗೆ ತಮ್ಮ ಅಭಿಪ್ರಾಯ ಏನು ಎಂದು ಮಾಧ್ಯಮ ದವರು ಮಾಡಿದ ಪ್ರಶ್ನೆ ಗೆ ಉತ್ತರಿಸಿದ ಪೊನ್ನಣ್ಣ ನವರು ಸರ್ಕಾರ ಲೇಖಕಿ ಬಾನು ಮುಷ್ತಾಕ್ ರವರು ಕನ್ನಡದ ಕೀರ್ತಿಯನ್ನು ವಿಶ್ವ ಮಟ್ಟಕ್ಕೆ ಕೊಂಡೊಯ್ದಿದ್ದಾರೆ.ಸಾಹಿತ್ಯ ಲೋಕಕ್ಕೆ ಅವರು ನೀಡಿದ ಕೊಡುಗೆಯನ್ನು ಗಮನಿಸಿ ಸರ್ಕಾರ ಅವರನ್ನು ಆಯ್ಕೆ ಮಾಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕುಲ,ಜಾತಿ ,ಗೋತ್ರಗಳನ್ನು ಗಮನಿಸಬಾರದು.ಸಾಧನೆಯನ್ನು ಗಮನಿಸಬೇಕು. ಸಂವಿಧಾನವು ಎಲ್ಲರಿಗೂ ಸಮಾನತೆಯನ್ನು ಕಲ್ಪಿಸಿದೆ ಎಂದು ಹೇಳಿದರು. ಸಂಸದ ಯದುವೀರ್ ಒಡೆಯರ್ ರವರು ಬಾನು ಮುಷ್ತಾಕ್ ರವರ ಆಯ್ಕೆ ಸರಿ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದು ಅವರ ಅಭಿಪ್ರಾಯ ಸ್ವಾಗತಾರ್ಹ ಎಂದು ಪೊನ್ನಣ್ಣ ನವರು ಯದುವೀರ್ ನಡೆಯನ್ನು ಸ್ವಾಗತಿಸಿದ್ದಾರೆ.

What's Your Reaction?

Like Like 1
Dislike Dislike 0
Love Love 1
Funny Funny 0
Angry Angry 0
Sad Sad 0
Wow Wow 1