ಎಚ್.ಐ.ವಿ ಏಡ್ಸ್ ಅರಿವಿನ ಮಾಸಚರಣೆ ಅಂಗವಾಗಿ ಸೋಮವಾರಪೇಟೆ ಸಂತ ಜೋಸೆಫರ ಕಾಲೇಕು ವಿದ್ಯಾರ್ಥಿಗಳಿಂದ ನಾಟಕ ಪ್ರದರ್ಶನ
ಸೋಮವಾರಪೇಟೆ:ಇಲ್ಲಿನ ಸಂತ ಜೋಸೆಫರ ಪದವಿ ಕಾಲೇಜು ಹಾಗೂ ಜಿಲ್ಲಾ ಏಡ್ಸ್ ನಿಯಂತ್ರಕ ಘಟಕ ಕೊಡಗು ಜಿಲ್ಲೆ ಇವರ ಸಹಭಾಗಿತ್ವದಲ್ಲಿ " ಎಚ್.ಐ.ವಿ ಏಡ್ಸ್ ಅರಿವು ಮಾಸಚರಣೆ ಅಂಗವಾಗಿ ನಾಟಕ ಮತ್ತು ನೃತ್ಯ ರೂಪಕ ಕಾರ್ಯಕ್ರಮ ನಡೆಯಿತು. ಸಂಸ್ಥೆಯ ವ್ಯವಸ್ಥಾಪಕರಾದ ಫಾದರ್ ಅವಿನಾಶ್ ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಹರೀಶ್ ಬಿ.ಆರ್ ಹಾಗೂ, ಎನ್.ಎಸ್.ಎಸ್ ಘಟಕದ ಸಂಯೋಜಕರಾದ ಚಂದ್ರಶೇಖರಮೂರ್ತಿ, ಯುವ ರೆಡ್ ಕ್ರಾಸ್ ಸಂಯೋಜಕರಾದ ಕು.ನಿಧಿ ಅವರ ಮಾರ್ಗದರ್ಶನದಲ್ಲಿ ಎನ್.ಎಸ್.ಎಸ್ ಮತ್ತು ರೆಡ್‌ಕ್ರಾಸ್ ಸ್ವಯಂಸೇವಕರು ಕಾಲೇಜು ಆವರಣದಲ್ಲಿ ಮತ್ತು ಸೋಮವಾರಪೇಟೆ ಪಟ್ಟಣದ "ಜೆಸಿ ವೇದಿಕೆ"ಯಲ್ಲಿ ಎಚ್.ಐ.ವಿ ವೈರಸ್ ಮತ್ತು ಸಂಬಂಧಿತ ರೋಗಗಳ ಬಗ್ಗೆ ಜಾಗೃತಿ ಮೂಡಿಸಲು ಬೀದಿ ನಾಟಕವನ್ನು ಪ್ರದರ್ಶಿಸಿದರು.