State News

ಪಿಕಪ್ ನೊಂದಿಗೆ ನದಿಯಲ್ಲಿ ಕೊಚ್ಚಿಹೋಗಿದ್ದ ಚಾಲಕ: ಆರು ದಿನಗಳ ಬಳಿಕ ಮೃತದೇಹ ಪತ್ತೆ

admincoorgdaily

ಚಿಕ್ಕಮಗಳೂರು: ಪಿಕಪ್ ವಾಹನದೊಂದಿಗೆ ಚಾಲಕ ಕೊಚ್ಚಿ ಹೋಗಿದ್ದ ಪ್ರಕರಣದ, ಆರು ದಿನಗಳ ಬಳಿಕ ಚಾಲಕ‌ ಶಮಂತ್ ಮೃತದೇಹ ಪತ್ತೆಯಾಗಿದೆ. ಕಾರ್ಮಿಕರನ್ನು ಕೆಲಸಕ್ಕೆ ಕರೆದೊಯ್ಧು ಹಿಂದಿರುಗುತ್ತಿದ್ದ ವೇಳೆ ಪಿಕಪ್ ವಾಹನ ಭಧ್ರಾ ನದಿ ತೀರದ ವಿದ್ಯುತ್ ಕಂಬಕ್ಕೆ ಢಿಕ್ಕಿಯಾಗಿತ್ತು . ಚಾಲಕ ಶಮಂತ್ ನಿಯಂತ್ರಣ ತಪ್ಪಿದ ಪಿಕಪ್ ಬದ್ರಾ ನದಿಗೆ ಉರುಳಿತ್ತು. ಶಮಂತ್ ಕೂಡ ನದಿ ಪಾಲಾಗಿದ್ದ, ಮಗ ಶಮಂಥ್ ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಘಟನೆಯಿಂದ ನೊಂದಿದ್ದ ತಾಯಿ ರವಿಕಲಾ ಮನೆ‌ ಸಮೀಪದ‌ ಕೆರೆಗೆ ಹಾರಿ ಆತ್ಮಹತ್ತೆ ಮಾಡಿಕೊಂಡಿದ್ದರು. ಘಟನೆ ನಡೆದ ಮೂರು‌ ದಿನಗಳ ನಂತರ ನದಿಯಲ್ಲಿ‌ಪಿಕಪ್ ಪತ್ತೆಯಾಗಿದ್ದು,ಇದೀಗ ಆರು ದಿನಗಳ ಬಳಿಕ ಶಮಂತ್ ಮೃತದೇಹ ಕಳಸ ಪಟ್ಡಣ ಸಮೀಪದ( ಕೋಟೆಹೊಳೆ)ಎಂಬಲ್ಲಿ ಪತ್ತೆಯಾಗಿದೆ. ಪೊಲೀಸರು, ಸಾರ್ವಜನಿಕರು, ಅಗ್ನಿಶಾಮಕದಳ, ಮುಳುಗು ತಜ್ಞರು 06 ದಿನಗಳಿಂದ ಶಮಂತ್ ಮೃತದೇಹಕ್ಕಾಗಿ ಶೋಧ ನಡೆಸುತ್ತಿದ್ದರು.