ಶಿಕ್ಷಣದಿಂದ ಗುರಿ ಸಾಧಿಸಲು ಮತ್ತು ಸಮಾಜವನ್ನು ಬದಲಾವಣೆ ಮಾಡಲು ಸಾಧ್ಯ; ಉಪನ್ಯಾಸಕ ಡಾ.ಜಮೀರ್ ಅಹ್ಮದ್ ಅಭಿಪ್ರಾಯ

Mar 31, 2026 - 09:41
 0  138
ಶಿಕ್ಷಣದಿಂದ ಗುರಿ ಸಾಧಿಸಲು ಮತ್ತು ಸಮಾಜವನ್ನು ಬದಲಾವಣೆ ಮಾಡಲು ಸಾಧ್ಯ; ಉಪನ್ಯಾಸಕ ಡಾ.ಜಮೀರ್ ಅಹ್ಮದ್  ಅಭಿಪ್ರಾಯ

ಶನಿವಾರಸಂತೆ:ಮಾ30:ಶಿಕ್ಷಣದಿಂದ ಗುರಿ ಸಾಧಿಸಲು ಮತ್ತು ಸಮಾಜವನ್ನು ಬದಲಾವಣೆ ಮಾಡಲು ಸಾಧ್ಯವಾಗುತ್ತದೆ ಎಂದು ಚಿಕ್ಕಅಳುವಾರದ ಕೊಡಗು ವಿ.ವಿ.ನಿಲಯದ ಉಪನ್ಯಾಸಕ ಡಾ.ಜಮೀರ್ ಅಹ್ಮದ್ ಅಭಿಪ್ರಾಯಪಟ್ಟರು.

 ಅವರು ಶನಿವಾರಸಂತೆ ಸರಕಾರಿ ಮಾದರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸ್ಥಳೀಯ ಭಾರತಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ಹಮ್ಮಿಕೊಂಡಿದ್ದ 2025-26ನೇ ಸಾಲಿನ ವಾರ್ಷಿಕ ಶಿಬಿರದ ಮುಕ್ತಾಯ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

 ಶಿಕ್ಷಣ ಮತ್ತು ಜ್ಞಾನಾರ್ಜನೆ ಮೂಲಕ ಎಲ್ಲಾರೂ ಪ್ರಗತಿ ಹೊಂದಬಹುದು ಆದರೆ ಇಂದು ಹಣ ಸಂಪಾದನೆ ಮಾಡುವುದಕ್ಕಾಗಿ ಮತ್ತು ಒಂದೆ ದಿನದಲ್ಲಿ ಶ್ರೀಮಂತನಾಗಬೇಕೆಂಬ ಎಂಬ ಉದ್ದೇಶ ಇಟ್ಟುಕೊಂಡು ಶಿಕ್ಷಣ ಪಡೆಯುತ್ತಿರುವುದು ದುರಂತವಾಗಿದೆ ಎಂದರು. ಇಂದಿನ ವಿದ್ಯಾವಂತ ಯುವ ಸಮೂಹದವರಲ್ಲಿ ದೇಶ ಪ್ರೇಮ ಇರುವುದಿಲ್ಲ ಈ ನಿಟ್ಟಿನಲ್ಲಿ ವಿದ್ಯಾವಂತರು ರಾಷ್ಟçದ ಬಗ್ಗೆ ಹೆಮ್ಮೆ ಪಡುವಂತಹ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಮುಂದಿನ ಪೀಳೆಯವರ ಸದೃಢ ಸಮಾಜಕ್ಕಾಗಿ ಇಂದಿನ ಪೀಳಿಗೆಯವರು ತಮ್ಮ ಸಮಾಜ ಮತ್ತು ದೇಶದ ಬಗ್ಗೆ ಹೆಮ್ಮೆ ಪಟ್ಟುಕೊಂಡು ಧನಾತ್ಮಕ ಚಿಂತನೆ ಹರಿಸುವಂತೆ ಸಲಹೆ ನೀಡಿದರು .

ವಿದ್ಯಾಸಂಸ್ಥೆ ನಿರ್ದೇಶಕ ಎ.ಎಂ.ಆನಂದ್ ಮಾತನಾಡಿ,ವಿದ್ಯಾರ್ಥಿಗಳು ಶಿಕ್ಷಣದ ಜೊತೆಯಲ್ಲಿ ವಿನಯವಂತಿಕೆ, ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕು ಈ ನಿಟ್ಟಿನಲ್ಲಿ ಶಿಬಿರಾರ್ಥಿಗಳಿಗೆ ರಾಷ್ಟ್ರೀಯ ಸೇವಾ ಶಿಬಿರವು ಸಹಕಾರಿಯಾಗುತ್ತದೆ ಎಂದರು.

ಕಾಲೇಜಿನ ಪ್ರಾಂಶುಪಾಲ ಎಸ್.ಎನ್.ಮೋಹನ್ ಕುಮಾರ್ ಕಾರ್ಯಕ್ರಮದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿ,ವಿದ್ಯಾರ್ಥಿಗಳು ಶಿಬಿರದಲ್ಲಿ ಕಲಿತಿರುವುದುದನ್ನು ಜೀವನದ ಉದ್ದಕ್ಕೂ ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.

ಸಮಾರಂಭದಲ್ಲಿ ವಿದ್ಯಾಸಂಸ್ಥೆ ಉಪಾಧ್ಯಕ್ಷ ಮಹಮ್ಮದ್ ಪಾಷ, ಗೌ.ಕಾರ್ಯದರ್ಶಿ ಎನ್.ಕೆ.ಅಪ್ಪಸ್ವಾಮಿ, ನಿರ್ದೇಶಕ ಎನ್.ಜಿ.ಅರುಣ್, ಶಿಬಿರಾಧಿಕಾರಿ ಎಂ.ಎನ್.ಹರೀಶ್ ಮಾಗಲು, ಉಪನ್ಯಾಸಕ ಬಿ.ಎಂ.ಪೊನ್ನಪ್ಪ, ಶಾಲಾ ಎಸ್‌ಡಿಎಂಸಿ ಸದಸ್ಯೆ ಪೂಜಾ ಮುಂತಾದವರು ಹಾಜರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0