ಉಮ್ರಾ ಯಾತ್ರೆಯ ಕನಸು ನನಸು ಮಾಡುವ ಪ್ರಯತ್ನ ಶ್ಲಾಘನೀಯ: ಮಹದಿ ತಂಙಳ್

ಉಮ್ರಾ ಯಾತ್ರೆಯ ಕನಸು ನನಸು ಮಾಡುವ ಪ್ರಯತ್ನ ಶ್ಲಾಘನೀಯ: ಮಹದಿ ತಂಙಳ್

ವಿರಾಜಪೇಟೆ: ಪವಿತ್ರ ಉಮ್ರಾ ಯಾತ್ರೆ, ಮುಸ್ಲಿಂ ಸಮುದಾಯ ಬಾಂಧವರಿಗೆ ಪವಿತ್ರವಾಗಿದ್ದು, ಯಾತ್ರೆಗೆ ತೆರಳುವ ಮಂದಿಗೆ ಸಹಾಯಹಸ್ತ ನೀಡಿ, ಕನಸು ಸಹಾಕರಗೊಳಿಸುವ ಕಾರ್ಯ ಉನ್ನತವಾದದ್ದು, ಎಂದು ಲಕ್ಷದೀಪ್ ಮಹದಿ ತಂಙಳ್ ಅಭಿಪ್ರಾಯ ವ್ಯಕ್ತಪಡಿಸಿದರು.

ಡೊನೇರ‍್ಸ್ ಚಾರಿಟೇಬಲ್ ಟ್ರಸ್ಟ್ ಎ.ಪಿ.ಜೆ ಅಬ್ದುಲ್ ಕಲಾಂ ರಸ್ತೆ ವಿರಾಜಪೇಟೆ ಆಶ್ರಯದಲ್ಲಿ ಸುಣ್ಣದ ಬೀದಿ ಈದ್ಗಾ ಮೈದಾನದ ಸಭಾಂಗಣದಲ್ಲಿ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ 1500 ನೇ ವರ್ಷ ಜನ್ಮದಿನದ ಅಂಗವಾಗಿ ಉಮ್ರಾ ಯಾತ್ರೆಗೆ ತೆರಳಲು ಸಿದ್ದರಾಗಿರುವ ವ್ಯಕ್ತಿಗಳಿಗೆ ಬಿಳ್ಕೊಡುಗೆ ಮತ್ತು ಮೌಲೂದ್ ಪಾರಾಯಣ ನಡೆಯಿತು. 

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಹದಿ ತಂಙಲ್ ಅವರು, ಮುಸ್ಲಿಂ ಧರ್ಮಿಯರಿಗೆ ಉಮ್ರಾ ಯಾತ್ರೆಯು ಅತ್ಯಂತ ಪವಿತ್ರವಾಗಿದೆ. ಜೀವನದಲ್ಲಿ ಒಂದು ಬಾರಿಯಾದರು ಪ್ರವಾದಿ ಮುಹಮ್ಮದ್ ಅವರ ನೆಲೆಯನ್ನು ಕಾಣುವ ಹಂಬಲವಿರುತ್ತದೆ. ಜೀವನದ ಸಾರ್ಥಕತೆಯನ್ನು ಪಡೆಯುತ್ತದೆ ಎನ್ನುವ ವಿಶ್ವಾಸ. 

ವಿಶ್ವಾಸಗಳನ್ನು ಸಹಕಾರಗೊಳಿಸಲು ಆರ್ಥಿಕ ಮುಗ್ಗಟ್ಟು ಇರುವುದುರಿಂದ ಕಡು‌ ಬಡವರಿಗೆ ಯಾತ್ರೆಯು ಸುಗಮವಾಗುವುದಿಲ್ಲ. ಈ ನಿಟ್ಟಿನಲ್ಲಿ ನಿರ್ಗತಿಕ ಕುಟುಂಭಗಳ ವ್ಯಕ್ತಿಗಳನ್ನು ಗುರುತಿಸಿ ಅವರು ಕಂಡ ಕನಸು ಸಹಕಾರಗೊಳಿಸುವ ಪ್ರಯತ್ನ ಮಾಡಿರುವ ಸಂಘಟನೆಯ ಕಾರ್ಯ ದೇವರ ಕಾರ್ಯ ಎಂದು ಹೇಳಿದರು.

ಶಾಫಿ ಜುಮ್ಮಾ ಮಸೀದಿ ಖಾತೀಬರಾದ ಹ್ಯಾರಿಸ್ ಬಖಾವಿ ಅವರು ಮಾತನಾಡಿ, ಮುಸ್ಲಿಂ ಸಮುದಾಯದ ಪವಿತ್ರ ಸ್ಥಳಕ್ಕೆ ಯಾತ್ರೆಗೆ ಹೋಗಬೇಕು ಮತ್ತು ಸಂದರ್ಶನ ಮಾಡಬೇಕು ಅಭಿಲಾಶೆ ಸಮಜದಾಯ ಬಾಂಧವರ ಇಚ್ಛೆ. ಆದರೆ ಪರಿಸ್ಥಿತಿಯು ನೆಪದಲ್ಲಿ ಯಾತ್ರೆಗೆ ತೆರಳಲು ಅಸಾಧ್ಯವಾಗುತ್ತದೆ. ಪ್ರವಾದಿಯ ಕೃಪಾಕಾಟಕ್ಷ ಒಲಿದವರು ಮಾತ್ರ ಯಾತ್ರೆ ಮಾಡಲು ಸಾದ್ಯ. ಬಾಂಧವರರಿದ ಹಣ ಸಂಗ್ರಹಿಸಿ ಯಾತ್ರೆಗೆ ಆಯ್ಕೆಗೊಂಡ ವ್ಯಕ್ತಿಗಳನ್ನು ಉಚಿತವಾಗಿ ಕಳುಹಿಸುತ್ತಿರುವುದು ಪ್ರವಾದಿಗಳ ಚಿತ್ತವಾಗಿದೆ ಎಂದು ಹೇಳಿದರು.

ಡೊನೇರ‍್ಸ್ ಚಾರಿಟೆಬಲ್ ಟ್ರಸ್ಟ್ ವಿರಾಜಪೇಟೆ ಗೌ. ಅಧ್ಯಕ್ಷರಾದ ಮೊಹಮ್ಮದ್ ರಾಫಿ ಅವರು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಸಂಸ್ಥೆಯು, ವಿನೂತನ ಕಾರ್ಯಕ್ಕೆ ಅಣಿಯಾಗಿದ್ದು ಪ್ರಥಮ ಬಾರಿಗೆ ಉಮ್ರಾ ಯಾತ್ರೆಗೆ ವ್ಯಕ್ತಿಗಳನ್ನು ಆಯ್ಕೆಗೊಳಿಸಿ ದಾನಿಗಳಿಂದ ಸಂಗ್ರಹಿಸಿದ ಆರ್ಥಿಕ ಧನ ಸಹಾಯದಿಂದ ಯಾತ್ರಾರ್ಥಿಗಳಿಗೆ ನೀಡಿ ಕಳುಹಿಸಿ ಕೊಡಲಾಗುತ್ತಿದೆ. ವಿರಾಜಪೇಟೆ ನಗರದಿಂದ ಮಹಿಳೆಯರು 04 ಮಂದಿ ಮತ್ತು 07 ಮಂದಿ ಪುರುಷರು ಅರ್ಜಿ ಸಲ್ಲಿಸಿದ್ದರು. ಲಾಟರಿ ಎತ್ತುವ ಮೂಲಕ ಈರ್ವರು ಮಹಿಳೆಯರು ಸೇರಿದಂತೆ ಓರ್ವ ಪುರುಷ ಯಾತ್ರಿಯನ್ನು ಆಯ್ಕೆಗೊಳಿಸಲಾಗಿದೆ. ನೆಹರುನಗರದ ಬಾವ, ಬಿ.ಪಾತು ಮತ್ತು ದಿವಂಗತ ಮೊಹಮ್ಮದ್ ಅವರ ಪತ್ನಿ ಬೀಬಿ ಅವರುಗಳು ಉಮ್ರಾ ಯಾತ್ರೆಗೆ ತೆರಳುತಿದ್ದಾರೆ. ಯಾತ್ರಗೆ ತೆರಳುವ ಮೂವರು ಪ್ರವಾದಿಗಳ ಸನ್ನಿಶಯಲ್ಲಿ ವಿರಾಜಪೇಟೆ ನಾಗರಿಕರಿಗೆ ಒಳಿತನ್ನು ಬಯಸುವ ರೀತಿಯಲ್ಲಿ ಪ್ರಾರ್ಥನೆ ಸಲ್ಲಿಸುವಂತೆ ಯಾತ್ರೆಗೆ ತೆರಳುವ ವ್ಯಕ್ತಿಗಳೋಂದಿಗೆ ಮನವಿ ಮಾಡಿದರು.

ನುಸ್ರುತುಲ್ ಉಲಮಾ ಮದ್ರಸ ಶಾಲೆಯ ಶಿಕ್ಷಕ ಅಬ್ದುಲ್ ರೆಹಮಾನ್, ಮದೀನ ಮಸಿದಿಯ ಮುಜಮಿಲ್ ಉಸ್ತಾದ್, ಪುರಸಭೆಯ ಸದಸ್ಯರಾದ ಹೆಚ್.ಎಸ್. ಮತೀನ್, ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಡೊನೇರ‍್ಸ್ ಚಾರಿಟೆಬಲ್ ಟ್ರಸ್ಟ್ ವಿರಾಜಪೇಟೆ ಅಧ್ಯಕ್ಷರಾದ ಆಲೀರ ಫವಿಲ್ ಉಸ್ಮಾನ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಡೊನೇರ‍್ಸ್ ಚಾರಿಟೆಬಲ್ ಟ್ರಸ್ಟ್ ವಿರಾಜಪೇಟೆ ಪದಾಧಿಕಾರಿಗಳು ,ಸದಸ್ಯರು ಡೊನೇರ‍್ಸ್ ಚಾರಿಟೆಬಲ್ ಟ್ರಸ್ಟ್ ಯೂತ್ ವಿಂಗ್ ಪದಾಧಿಕಾರಿಗಳು, ಸದಸ್ಯರು, ಮಹಿಳಾ ಘಟಕದ ಪಧಾಧಿಕಾರಿಗಳು ಸದಸ್ಯರು ಹಾಗೂ ಸಮೂದಾಯ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.

ವರದಿ: ಕಿಶೋರ್ ಕುಮಾರ್ ಶೆಟ್ಟಿ