ಕುಂಜಿಲ ಪೈನರಿ ಸುನ್ನೀ ಮುಸ್ಲಿಂ ಜಮಾಅತ್ ವತಿಯಿಂದ ಸಂಭ್ರಮದ ಈದುಲ್ ಫಿತರ್

Mar 21, 2026 - 11:37
 0  17
ಕುಂಜಿಲ ಪೈನರಿ ಸುನ್ನೀ ಮುಸ್ಲಿಂ ಜಮಾಅತ್ ವತಿಯಿಂದ ಸಂಭ್ರಮದ ಈದುಲ್ ಫಿತರ್

ವರದಿ:ಝಕರಿಯ ನಾಪೋಕ್ಲು

ನಾಪೋಕ್ಲು : ನಾಪೋಕ್ಲು ಬಳಿಯ ಕುಂಜಿಲ ಗ್ರಾಮದ ಪೈನರಿ ಸುನ್ನೀ ಮುಸ್ಲಿಂ ಜಮಾಅತ್ ವತಿಯಿಂದ ಬದ್ರಿಯಾ ಜುಮಾ ಮಸೀದಿಯಲ್ಲಿ ಈದುಲ್ ಫಿತರ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಮಸೀದಿಯ ಖತೀಬರಾದ ನಿಝಾರ್ ಅಹ್ಸನಿ ಕಕ್ಕಡಿ ಪುರಂ ಅವರ ನೇತೃತ್ವದಲ್ಲಿ ಸಾಮೂಹಿಕ ಈದ್ ನಮಾಜ್ ನೆರವೇರಿಸಲಾಯಿತು.

ಪರಸ್ಪರ ಸೌಹಾರ್ದತೆಯನ್ನು ಸಾರುವ ಪವಿತ್ರ ಈದುಲ್ ಫಿತರ್ ಹಬ್ಬವು ಸಮಾಜದಲ್ಲಿ ಶಾಂತಿ ಸಹಬಾಳ್ವೆಯನ್ನು ಪ್ರತಿಪಾದಿಸುತ್ತದೆ. ನಾಡಿನಲ್ಲಿ ಎಲ್ಲರೂ ಐಕ್ಯತೆಯಿಂದ ಜೀವನ ಸಾಧಿಸುವಮೂಲಕ ದೇಶದ ಮುನ್ನುಡಿಗೆ ಮಾದರಿಯಾಗಬೇಕೆಂದು ಈದ್ ಸಂದೇಶ ಸಾರಿದರು.

ಬಳಿಕ ನಾಡಿನಿಂದ ಮರಣ ಹೊಂದಿದವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಪರಸ್ಪರ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು ಸಂಭ್ರಮದಿಂದ ಹಬ್ಬವನ್ನು ಆಚರಿಸಿದರು. ಈ ಸಂದರ್ಭ ಜಮಾಅತ್ ಅಧ್ಯಕ್ಷರು,ಆಡಳಿತ ಮಂಡಳಿ ಪದಾಧಿಕಾರಿಗಳು, ಜಮಾಅತ್ ನ ಸರ್ವ ಸದಸ್ಯರು ಪಾಲ್ಗೊಂಡಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0