ವಿದ್ಯುತ್ ತಂತಿ ತಗುಲಿ ಬೆಳೆಗಾರ ಸಾವು:ಮರ ಕಡಿಯುವ ವೇಳೆ ದುರ್ಘಟನೆ

Jul 9, 2026 - 17:35
Jul 9, 2026 - 18:14
 0  1.1k
ವಿದ್ಯುತ್ ತಂತಿ ತಗುಲಿ ಬೆಳೆಗಾರ ಸಾವು:ಮರ ಕಡಿಯುವ ವೇಳೆ ದುರ್ಘಟನೆ

ವಿರಾಜಪೇಟೆ: ಮರ ಕಡಿಯುವ ವೇಳೆ 11 ಕೆವಿ ವಿದ್ಯುತ್ ತಂತಿ ಸ್ಪರ್ಶಿಸಿ ಬೆಳೆಗಾರರೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಬಿಟ್ಟಂಗಾಲ ಗ್ರಾಮ ಪಂಚಾಯತಿ ವ್ಯಾಪ್ತಿಯ ಎರಡನೇ ರುದ್ರಗುಪ್ಪೆ ಜೋಡು ಭಗವತಿ ದೇವಾಲಯದ ಬಳಿ ಗುರುವಾರ ನಡೆದಿದೆ.

ಮೃತರನ್ನು ಕೊಂಗಂಡ ಅರುಣ (65)ಎಂದು ಗುರುತಿಸಲಾಗಿದೆ. ಗುರುವಾರ ಸಂಜೆ ಸುಮಾರು 4 ಗಂಟೆ ವೇಳೆಗೆ ಅರುಣ ಅವರು ಮರ ಕಡಿಯುವ ಕಾರ್ಯದಲ್ಲಿ ತೊಡಗಿದ್ದರು. ಈ ವೇಳೆ ಮರವು ಸಮೀಪದ 11 ಕೆವಿ ವಿದ್ಯುತ್ ತಂತಿಯ ಮೇಲೆ ಬಿದ್ದು, ತಂತಿ ತುಂಡಾಗಿ ಅರುಣ ಅವರಿಗೆ ತಗುಲಿದೆ. ಪರಿಣಾಮವಾಗಿ ಅವರು ಸ್ಥಳದಲ್ಲೇ ಮೃತಪಟ್ಟರು. ಘಟನೆಯ ವಿಷಯ ತಿಳಿದ ಕೂಡಲೇ ಚೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

What's Your Reaction?

Like Like 0
Dislike Dislike 0
Love Love 3
Funny Funny 0
Angry Angry 0
Sad Sad 2
Wow Wow 0