ಚೆಟ್ಟಳ್ಳಿಯಲ್ಲಿ ಸಂಭ್ರಮದ ಕ್ರಿಸ್ಮಸ್ ಆಚರಣೆ

ಚೆಟ್ಟಳ್ಳಿಯಲ್ಲಿ ಸಂಭ್ರಮದ ಕ್ರಿಸ್ಮಸ್ ಆಚರಣೆ

ಚೆಟ್ಟಳ್ಳಿ: ಶಾಂತಿ ಮತ್ತು ತ್ಯಾಗದ ಸಂಕೇತವಾಗಿರುವ ಕ್ರಿಸ್ಮಸ್ ಹಬ್ಬವನ್ನು ಕೊಡಗು ಜಿಲ್ಲೆಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು.ಚೆಟ್ಟಳ್ಳಿಯ ಸಂತ ಸೆಬಾಸ್ಟಿಯನ್ ಚರ್ಚ್ ನಲ್ಲಿ ಶ್ರದ್ಧಾ ಭಕ್ತಿಯಿಂದ ಕ್ರಿಸ್ಮಸ್ ಪ್ರಾರ್ಥನೆ ನೆರವೇರಿತು.

ಈ ಸಂದರ್ಭದಲ್ಲಿ ಮಾತನಾಡಿದ ಫಾದರ್ ಜೆರಾಡ್ ಸಿಕ್ವೆರಾ,ಶಾಂತಿ,ಸತ್ಯ ಮತ್ತು ಬಲಿದಾನದ ಸಂಕೇತವಾಗಿದೆ ಕ್ರಿಸ್ಮಸ್.ಯೇಸು ಕ್ರಿಸ್ತನು ಸತ್ಯದವಾಹಕ ಮತ್ತು ನಮ್ಮೆಲ್ಲರ ರಕ್ಷಕಣಾಗಿ ಜನ್ಮತಾಳಿದ ದಿನವಿದು.ಈ‌ ನಾಡಿನಲ್ಲಿ ಶಾಂತಿ,ನೆಮ್ಮದಿ ನೆಲೆಸಲಿ ಎಂದು ಪ್ರಾರ್ಥನೆ ಮಾಡಿದರು.

ಈ ಸಂದರ್ಭದಲ್ಲಿ ಚೆಟ್ಟಳ್ಳಿ ಭಾಗದ ನೂರಾರು ಕ್ರಿಶ್ಚಿಯನ್ ಬಾಂಧವರು ಇದ್ದರು.ಸಂಭ್ರಮದಿಂದ ಕೇಕ್ ಕತ್ತರಿಸಿ,ಪಟಾಕಿ ಸಿಡಿಸಿ ಕ್ರಿಸ್ಮಸ್ ಹಬ್ಬವನ್ನು ಸಂಭ್ರಮಿಸಿದರು.