ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳನ್ನು ಕಾಡಿಗಟ್ಟಿದ ಅರಣ್ಯ ಇಲಾಖೆ

ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳನ್ನು ಕಾಡಿಗಟ್ಟಿದ ಅರಣ್ಯ ಇಲಾಖೆ

ಸಿದ್ದಾಪುರ:-ತಿತಿಮತಿ ವಲಯದ ಚೆನ್ನಂಗಿ ಶಾಖೆಯ ವ್ಯಾಪ್ತಿಗೆ ಒಳಪಡುವ ಮಾರ್ಗೋಳ್ಳಿ ಎಸ್ಟೇಟ್ ಮತ್ತು ಮೈಲಾಪುರ ಎಸ್ಟೇಟ್ ಒಳಗೆ ಇದ್ದ ಸುಮಾರು 4 ಮರಿಗಳು ಸೇರಿದ 23  ಕಾಡಾನೆಗಳನ್ನು ಮಂಗಳವಾರ ಕಾರ್ಯಾಚರಣೆ ನಡೆಸಿ ಮಾಲ್ದಾರೆ ಮೀಸಲು ಅರಣ್ಯಕ್ಕೆ ಹಿಮ್ಮೇಟಿಸಲಾಯಿತು.

 ಕೊಡಗು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿಯವರ ಸೂಚನೆ ಮೇರೆಗೆ ವಿರಾಜಪೇಟೆ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೀ ಜಗನ್ನಾಥ್ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀ ಗೋಪಾಲ್ ಕೆ ಪಿ ರವರ ನಿರ್ದೇಶನದ ಮೇರೆಗೆ ವಲಯ ಅರಣ್ಯ ಅಧಿಕಾರಿ ಶ್ರೀ ಗಂಗಾಧರ್ ರವರ ಮಾರ್ಗದರ್ಶನದಲ್ಲಿ ಚೆನ್ನಂಗಿ ಶಾಖೆಯ ಉಪ ವಲಯ ಅರಣ್ಯ ಅಧಿಕಾರಿ ಶಶಿ ಪಿ ಟಿ ಮತ್ತು ತಂಡದವರು ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿದ್ದಾರೆ ಕಾರ್ಯಚರಣೆಯಲ್ಲಿ ಗಸ್ತು ಅರಣ್ಯ ಪಾಲಕ ರಾಜೇಶ್ ಆರ್ ಆರ್‌ಟಿ ತಂಡದ ರಂಜಿತ್, ಶಂಕರ್, ಪ್ರದೀಪ, ರೋಷನ್, ಸುಂದರ, ಧನು, ಪ್ರವೀಣ, ಪ್ರಜ್ವಲ್ ಮತ್ತು ಅರುಣ ಹಾಗೂ ಮಾಲ್ದಾರೆ ಶಶಿ ಭಾಗವಹಿಸಿದ್ದರು.