ವಿದ್ಯೆ ಕಲಿತ ಕರಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನೆರವು ನೀಡಿದ ಮಾಜಿ ಸೈನಿಕ ಕ್ಯಾಪ್ಟನ್ ಬಾಚುರ ಎಸ್ ಪೂಣಚ್ಚ

Dec 25, 2025 - 14:25
Dec 25, 2025 - 14:59
 0  776
ವಿದ್ಯೆ ಕಲಿತ ಕರಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನೆರವು ನೀಡಿದ ಮಾಜಿ ಸೈನಿಕ ಕ್ಯಾಪ್ಟನ್ ಬಾಚುರ ಎಸ್ ಪೂಣಚ್ಚ

ವಿರಾಜಪೇಟೆ: ಸರಕಾರಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸುವುದು ಅವಶ್ಯ. ಈ ನಿಟ್ಟಿನಲ್ಲಿ ಶಾಲಾ ಮಕ್ಕಳಿಗೆ ಮೂಲಸೌಕರ್ಯ ಒದಗಿಸಲು ಅಗತ್ಯ ಸಹಕಾರ ನೀಡುವುದಾಗಿ ದಾನಿಗಳು ಹಾಗೂ ಮಾಜಿ ಸೈನಿಕ ಕ್ಯಾಪ್ಟನ್ ಬಾಚುರ ಎಸ್ ಪೂಣಚ್ಚ ಭರವಸೆ ನೀಡಿದರು.

   ಕರಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಟಿ ಶರ್ಟ್ ಹಾಗೂ ಟ್ರ್ಯಾಕ್ ಶೂಟ್  ವಿತರಣೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ, ತನಗೆ ವಿದ್ಯೆ ನೀಡಿದ ಶಾಲೆಗೆ ಏನಾದರೊಂದು ಕೊಡುಗೆ ನೀಡಬೇಕು ಎನ್ನುವ ನಿಟ್ಟಿನಲ್ಲಿ ಈ ಶಾಲೆಯಲ್ಲಿ ಓದುತ್ತಿರುವ ಬಡ ವಿದ್ಯಾರ್ಥಿಗಳಿಗೆ ತನ್ನಿಂದ ಆದ ಸಹಾಯವನ್ನು ನೀಡಿದ್ದೇನೆ. ಮುಂದಿನ ದಿನಗಳಲ್ಲಿಯೂ ಸಾಧ್ಯವಾದಷ್ಟು ನೆರವು ನೀಡುತ್ತೇನೆ. ಇಲ್ಲಿಂದ ವಿದ್ಯೆ ಪಡೆದ 30 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿ ಕ್ಯಾಪ್ಟನ್ ಆಗಿ ನಿವೃತ್ತಿಗೊಂಡಿದ್ದೇನೆ. ಇದು ನನ್ನ ಮೈಲಿಗಲ್ಲು. ಸಮಾಜಕ್ಕೆ ನಾವು ಏನಾದರೊಂದು ಕೊಡುಗೆ ನೀಡಬೇಕು. ಇಲ್ಲಿನ ವಿದ್ಯಾರ್ಥಿಗಳು ಕೂಡ ಉನ್ನತ ವಿದ್ಯಾಭ್ಯಾಸ ಪಡೆದು ಸೇನೆಗೆ ಸೇರುವಂತಾಗಬೇಕು ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

   ನರಿಯಂದಡ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ, ವಿರಾಜಪೇಟೆ ಮಹಿಳಾ ಸಮಾಜದ ಅಧ್ಯಕ್ಷೆ ಪಟ್ರಪಂಡ ಗೀತಾ ಬೆಳ್ಯಪ್ಪ ಮಾತನಾಡಿ ಗ್ರಾಮೀಣ ಭಾಗದ ಸರಕಾರಿ ಶಾಲೆಗಳಲ್ಲಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ದಾನಿಗಳ ಸಹಕಾರ ಅವಶ್ಯ. ಶಾಲೆಯಲ್ಲಿ ಕಲಿತು ಉನ್ನತ ಸ್ಥಾನದಲ್ಲಿರುವ ಹಳೇ ವಿದ್ಯಾರ್ಥಿಗಳು ಕಲಿತ ಶಾಲೆಗೆ ಕೈಲಾದ ಸಹಾಯ ಮಾಡಬೇಕು. ಈ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಇಂದು ಅನೇಕ ಹುದ್ದೆಗಳನ್ನು ಅಲಂಕರಿಸಿ ಕೀರ್ತಿ ತಂದಿದ್ದಾರೆ. ಅಂತಹದೇ ಸಾಲಿನಲ್ಲಿ ದಾನಿಗಳು ಹಾಗೂ ನಿವೃತ್ತ ಮಾಜಿ ಸೈನಿಕ ಕ್ಯಾಪ್ಟನ್ ಪೂಣಚ್ಚ ಸೇರಿದ್ದಾರೆ. ಇವರು ಎಲೆಮರೆಯ ಕಾಯಿಯ ಹಾಗೆ ಸಮಾಜ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದಾರೆ. ತಾನು ಕಲಿತ ಶಾಲೆಗೆ ಏನಾದರೊಂದು ಕೊಡುಗೆ ನೀಡಬೇಕು ಎನ್ನುವ ಹಂಬಲದಿAದ ತಮ್ಮ ಕೈಲಾದ ಸೇವೆಯನ್ನು ಇಲ್ಲಿನ ವಿದ್ಯಾರ್ಥಿಗಳಿಗೆ ನೀಡುತ್ತಾ ಬಂದಿದ್ದಾರೆ. ಮುಂದಿನ ದಿನಗಳಲ್ಲಿ ಇವರ ಸೇವೆ ಇನ್ನಷ್ಟು ಮುಂದುವರೆಯಲಿ ಎಂದು ಹಾರೈಸುವುದಾಗಿ ಹೇಳಿದರು.

    ಶಾಲಾ ಮುಖ್ಯ ಶಿಕ್ಷಕಿ ಚೆಯ್ಯಂಡ ಲೀಲಾವತಿ ಮಾತನಾಡಿ, ಸರಕಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣದ ಜತೆಗೆ ಅನೇಕ ರೀತಿಯ ಸಾಂಸ್ಕöÈತಿಕ ಕಾರ್ಯಕ್ರಮಗಳ ಮೂಲಕ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಸರಕಾರ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುತ್ತಿದೆ. ಅದರೊಂದಿಗೆ ದಾನಿಗಳು ನೆರವು ನೀಡಿದ್ದಲ್ಲಿ ಬಡ ಮಕ್ಕಳಿಗೆ ಅನುಕೂಲವಾಗುತ್ತದೆ. ಈ ಹಿಂದೆ ದಾನಿಗಳಾದ ಕ್ಯಾಪ್ಟನ್ ಪೂಣಚ್ಚ ಅವರು ನೀಡಿದ ಭರವಸೆಯಂತೆ ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಟ್ರಾö್ಯಕ್ ಶೂಟ್ ಹಾಗೂ ಟಿಶರ್ಟ್ ವಿತರಿಸಿ ನೆರವು ನೀಡಿದ್ದಾರೆ. ಇವರ ಸೇವೆ ಅನುಕರಣೀಯ. ಇವರು ಈ ಶಾಲೆಯ ಮೇಲಿಟ್ಟಿರುವ ಅಭಿಮಾನಕ್ಕೆ ಬೆಲೆಕಟ್ಟಲಾಗದು ಎಂದು ಮೆಚ್ಚುಗೆಯ ನುಡಿಗಳನ್ನಾಡಿದರು.

  ನರಿಯಂದಡ ಗ್ರಾಮ ಪಂಚಾಯಿತಿ ಸದಸ್ಯ ಬೇಪಡಿಯಂಡ ವಿಲೀನ ಅಧ್ಯಕ್ಷತೆ ವಹಿಸಿ ಮಾತನಾಡಿ, ದಾನಿಗಳು ಪೋತ್ಸಾಹದಾಯಕ ಕೊಡುಗೆ ನೀಡಿದರೆ ಮಕ್ಕಳ ಉತ್ತಮ ಕಲಿಕೆಗೆ ನೆರವಾಗುತ್ತದೆ. ಈ ನಿಟ್ಟಿನಲ್ಲಿ ಇದೇ ಶಾಲೆಯಲ್ಲಿ ವ್ಯಾಸಂಗ ಮಾಡಿದ, ದಾನಿಗಳು ಆದ, ಮಾಜಿ ಸೈನಿಕ ಕ್ಯಾಪ್ಟನ್ ಬಾಚುರ ಪೂಣಚ್ಚ ತನಗೆ ವಿದ್ಯೆ ನೀಡಿದ ಶಾಲೆಯ ವಿದ್ಯಾರ್ಥಿಗಳಿಗೆ ನೆರವಾಗುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಬಟ್ಟೆಗಳನ್ನು ವಿತರಿಸಿ ಇಂದು ಮಾನವೀಯತೆ ಮೆರೆದಿದ್ದಾರೆ. ಇದು ಶ್ಲಾಘನೀಯ. ಉತ್ತಮ ಬೋಧನೆ ಮೂಲಕ ಮಕ್ಕಳ ವ್ಯಕ್ತಿತ್ವ ರೂಪಿಸುವ ಹೊಣೆಗಾರಿಕೆ ಶಿಕ್ಷಕರ ಮೇಲಿದೆ. ಸರಕಾರಿ ಶಾಲೆಗಳನ್ನು ಉಳಿಸಬೇಕು. ಪೋಷಕರು, ಶಿಕ್ಷಕರು ಶಾಲೆ ಪ್ರಗತಿ ಕುರಿತು ಕಾಳಜಿ ತೋರಿಸಬೇಕು. ಮಕ್ಕಳಲ್ಲಿರುವ ಕಲಿಕೆಯ ಆಸಕ್ತಿ ಗಮನಿಸಬೇಕು. ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಿಗೆ ಕಲಿಕೆಯ ಮಹತ್ವ ತಿಳಿಸಿಕೊಡಬೇಕು ಎಂದರು.

     ವೇದಿಕೆಯಲ್ಲಿ ನಿವೃತ್ತ ಕ್ಯಾಪ್ಟನ್ ಬಾಚುರ ಪೂಣಚ್ಚ ಅವರ ತಾಯಿ ಬಾಚುರ ಕಾಮವ್ವ, ಸ್ಥಳಿಯ ಕಾಫಿ ಬೆಳೆಗಾರರು, ಸಮಾಜ ಸೇವಕರು ಆದ ಪಟ್ರಪಂಡ ಸುರೇಶ್ ಬೆಳ್ಯಪ್ಪ, ಸ್ಥಳದಾನಿಗಳು, ಶಾಲೆಯ ಸಲಹಾ ಸಮಿತಿ ಸದಸ್ಯರಾದ ಬಿದ್ದೇರಿಯಂಡ ದೇವಯ್ಯ, ಉಪಸ್ಥಿತರಿದ್ದರು.

    ಇದೇ ಸಂದರ್ಭ ಶಾಲೆಯಲ್ಲಿನ ಎಲ್ಲಾ ವಿದ್ಯಾರ್ಥಿಗಳಿಗೆ ನಿವೃತ್ತ ಕ್ಯಾಪ್ಟನ್ ಬಾಚುರ ಪೂಣಚ್ಚ ಹಾಗೂ ಬಾಚುರ ಕಾಮವ್ವ ಅವರು ಟಿ ಶರ್ಟ್ ಹಾಗೂ ಟ್ರಾö್ಯಕ್ ಶೂಟ್ ವಿತರಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

  ಈ ಸಂದರ್ಭ ನಡಿಕೇರಿಯಂಡ ಪ್ರಭು ನಂಜಪ್ಪ, ಅತಿಥಿ ಶಿಕ್ಷಕಿ ಫಸಿಲಾ, ಶಾಲಾ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0