ಗೋಣಿಕೊಪ್ಪ: ಲಾರಿಯ ಮೇಲೆ ಮರ ಬಿದ್ದು, ಲಾರಿಯಲ್ಲಿ ಪ್ರಯಾಣಿಸುತ್ತಿದ್ದ 8 ಕಾರ್ಮಿಕರಿಗೆ ಗಾಯ

May 13, 2026 - 16:20
 0  1.7k
ಗೋಣಿಕೊಪ್ಪ: ಲಾರಿಯ ಮೇಲೆ ಮರ ಬಿದ್ದು, ಲಾರಿಯಲ್ಲಿ ಪ್ರಯಾಣಿಸುತ್ತಿದ್ದ 8 ಕಾರ್ಮಿಕರಿಗೆ ಗಾಯ

ಗೋಣಿಕೊಪ್ಪ: ಸಿಡಿಲು ಅಪ್ಪಳಿಸಿ ಪರಿಣಾಮ ಮರ ಚಲಿಸುತ್ತಿದ ಲಾರಿಯ ಮೇಲೆ ಬಿದ್ದು, ಲಾರಿಯಲ್ಲಿ ಪ್ರಯಾಣಿಸುತ್ತಿದ್ದ 8 ಕಾರ್ಮಿಕರಿಗೆ ಸಣ್ಣಪುಟ್ಟ ಗಾಯಗಳಾಗಿ ಪ್ರಾಣಾಪಾಯದಿಂದ ಪಾರಾದ ಘಟನೆ ಕುಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ನಾಲ್ಕೇರಿ ಗ್ರಾಮದಲ್ಲಿ ನಡೆದಿದೆ.

 ಲೋಡಿಂಗ್ ಕೆಲಸ ಮಾಡುತ್ತಿದ್ದ ರಾಘವೇಂದ್ರ ಎಂಬುವವರಿಗೆ ಈ ಘಟನೆಯಿಂದ ತಲೆಗೆ ಮತ್ತು ಎಡಭಾಗದ ತೊಡೆಗೆ ಮರದ ಕೊಂಬೆ ಮತ್ತು ಲಾರಿಯ ಮುಂಭಾಗದ ಗಾಜುಗಳು ಚುಚ್ಚಿ ಗಂಭೀರ ಗಾಯಗಳಾಗಿವೆ. ಉಳಿದಂತೆ ರಮೇಶ, ಮಹೇಶ, ವಿಜಿ, ಜಹೀರ್, ರಂಗ, ಕರಿಗೌಡ, ಶಂಕರ ಇವರುಗಳಿಗೂ ಸಣ್ಣಪುಟ್ಟ ಗಾಯಗಳಾಗಿವೆ.

ಲಾರಿಯಲ್ಲಿದ್ದ ಗೊಬ್ಬರವನ್ನು ನಾಲ್ಕೇರಿ ಕೃಷಿಪತ್ತಿನ ಸಹಕಾರ ಸಂಘಗಳ ಗೋದಾಮುಗೆ ಸಂಗ್ರಹಿಸಿಟ್ಟು ಹಿಂದಿರುಗುತ್ತಿದ್ದಾಗ ನಾಲ್ಕೇರಿ, ಗೋಣಿಕೊಪ್ಪ ಮಾರ್ಗದ ರಸ್ತೆಯ ನಡುವೆ ಈ ಘಟನೆ ನಡೆದಿದೆ.

ಕುಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಲಾರಿಯ ಮಾಲೀಕರು ಗಾಯಾಳುಗಳಿಗೆ ಪರಿಹಾರ ನೀಡುವ ಭರವಸೆಯನ್ನು ನೀಡಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 4
Wow Wow 1