ಗೋಣಿಕೊಪ್ಪ:ಬೆಳ್ಳಂಬೆಳಗ್ಗೆ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ

Jan 1, 2026 - 10:01
 0  1.3k
ಗೋಣಿಕೊಪ್ಪ:ಬೆಳ್ಳಂಬೆಳಗ್ಗೆ  ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ

ಗೋಣಿಕೊಪ್ಪ:ಮೈಸೂರು ರಸ್ತೆಯ ಸೀಗೆತೋಡು ಎಂಬಲ್ಲಿ ಬೆಳಗಿನ ಜಾವ ಐದೂವರೆ ಗಂಟೆಗೆ ದೇವರಪುರದಿಂದ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಅಪ್ಪಳಿಸಿದ ಪರಿಣಾಮ, ವಿದ್ಯುತ್ ತಂತಿ ರಸ್ತೆ ಸಮೀಪ ಬಿದ್ದು, ಕರ್ತವ್ಯದಲ್ಲಿದ್ದ 112 - ಪೊಲೀಸರ ಸಕಾಲಿಕ ಕ್ರಮದಿಂದಾಗಿ ಬಾರಿ ಅನಾಹುತ ತಪ್ಪಿಸಿರುವ ಘಟನೆ ನಡೆದಿದೆ.

ಗೋಣಿಕೊಪ್ಪಲಿನ ಎರಡನೇ ವಿಭಾಗದ ನಿವಾಸಿ ಸಲೀಂ ಪಾಷಾ ರವರ ಪುತ್ರ ರೋಶನ್ ಹಾಗೂ ಇತರ ಮೂವರು ದೇವರಪುರದಿಂದ ಗೋಣಿಕೊಪ್ಪಲ್ಲಿಗೆ ತಮ್ಮ Polo ಕಾರಿನಲ್ಲಿ(KA 05 MJ 3493) ಬರುತ್ತಿರುವ ಸಂದರ್ಭ ಕಾರು ನಿಯಂತ್ರಣ ತಪ್ಪಿ ಸೀಗೆತೋಡು ಸೇತುವೆ ಸಮೀಪದ ವಿದ್ಯುತ್ ಕಂಬಕ್ಕೆ ನೇರವಾಗಿ ಡಿಕ್ಕಿಯಾಗಿ ಕೆಳಭಾಗಕ್ಕೆ ಮಗುಚಿಕೊಂಡಿದೆ. ವಿದ್ಯುತ್ ಕಂಬದ ತಂತಿಗಳೆಲ್ಲ ತುಂಡಾಗಿ ರಸ್ತೆ ಬದಿಯಲ್ಲಿ ಬಿದ್ದಿತ್ತು.

ರಶೀದ್ ಎಂಬುವರು ದೂರವಾಣಿ ಮೂಲಕ 112ಗೆ ಕರೆ ಮಾಡಿ ಸುದ್ದಿ ಮುಟ್ಟಿಸಿದರು. ಸ್ಥಳಕ್ಕಾಗಮಿಸಿದ 112 - ಪೊಲೀಸರು ಸೆಸ್ಕ್ ನವರಿಗೆ ದೂರವಾಣಿ ಮೂಲಕ ಸಂಪರ್ಕ ಸಾಧಿಸಲು ಸಾಧ್ಯವಿಲ್ಲದಿದ್ದಾಗ ನೇರವಾಗಿ ಪವರ್ ಮ್ಯಾನ್ ಹಾಗೂ ಜೆ.ಇ. ಅವರಿಗೆ ಸುದ್ದಿ ಮುಟ್ಟಿಸಿ ಕೂಡಲೇ ವಿದ್ಯುತ್ ನಿಲುಗಡೆಗೊಳಿಸಿ ರಸ್ತೆ ಬದಿಯಿಂದ ತಂತಿಗಳನ್ನು ತೆರವುಗೊಳಿಸಲಾಯಿತು.

112 - ಪೊಲೀಸ್ ಸಿಬ್ಬಂದಿಗಳ ಕಾರ್ಯಕ್ಷಮತೆಯಿಂದ ವಿದ್ಯುತ್ ತಂತಿಗಳಿಂದ ಆಗಬಹುದಾಗಿದ್ದ ಬಾರಿ ಅನಾಹುತ ತಪ್ಪಿದಂತಾಗಿದೆ. ಎ.ಎಸ್ ಐ ಪ್ರಮೋದ್, 112 ಚಾಲಕ ಚಿಣ್ಣಪ್ಪ ಅಕ್ಕಿ, ಕಾನ್ಸ್ಟೇಬಲ್ ರಮೇಶ್, ಸೆಸ್ಕ್ ಸಿಬ್ಬಂದಿಗಳಾದ ಕೃಷ್ಣ ಮತ್ತಿತರು ಕಾರ್ಯಚರಣೆ ನಡೆಸಿ ವಿದ್ಯುತ್ ತಂತಿಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಬಾರಿ ಮಂಜು ಆವರಿಸಿದ್ದರಿಂದ, ಚಾಲಕನ ನಿಯಂತ್ರಣ ಕಳೆದುಕೊಂಡಿದ್ದರಿಂದ ಈ ಅನಾಹುತ ಸಂಭವಿಸಿದ್ಫು, ಚಾಲಕ ಸೇರಿದಂತೆ ಇತರರಿಗೆ ಯಾವುದೇ ರೀತಿಯ ಗಾಯಗಳು ಉಂಟಾಗಿಲ್ಲ. ಕಾರು ಸಂಪೂರ್ಣವಾಗಿ ಜಖಂಗೊಂಡಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 1
Sad Sad 1
Wow Wow 1