ಗೋಣಿಕೊಪ್ಪ: ಕೈಕೇರಿ ಒಕ್ಕಲಿಗರ ಯುವ ಒಕ್ಕೂಟದಿಂದ ಸ್ವಚ್ಛತಾ ಕಾರ್ಯ
ಗೋಣಿಕೊಪ್ಪ. ಗೋಣಿಕೊಪ್ಪ ನಗರದಲ್ಲಿ ಕಳೆದ ಹಲವು ದಿನಗಳಿಂದ ದಸರಾ ಪ್ರಯುಕ್ತ ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ನಗರದಲ್ಲಿ ದಿನಂಪ್ರತಿ ಸಾವಿರಾರು ಜನಗಳ ಜನಜಂಗುಳಿಯಲ್ಲಿ ಮಿಂದೆದ್ದ ನಗರವೂ ಇಂದಿನಿಂದ ಶಾಂತ ರೀತಿಯಲ್ಲಿ ಕಂಗೊಳಿಸುತ್ತಿತ್ತು.
ಅದ್ಧೂರಿಯಾಗಿ ಸಂಪನ್ನಗೊಂಡ ದಸರಾ ಕಾರ್ಯಕ್ರಮವು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ನಗರ ವಾಸಿಗಳು ಕುಣಿದು ನಲಿದು ಸುಸ್ತಾಗಿ ಬೆಳಗಿನ ಜಾವ ಮನೆ ಸೇರಿ ವಿಶ್ರಾಂತಿ ಪಡೆಯುತ್ತಿದ್ದರೆ ಇಲ್ಲೊಂದು ತಂಡ ಕೈಕೇರಿಯ ಒಕ್ಕಲಿಗರ ಯುವ ಒಕ್ಕೂಟವು ಪ್ರಾಣೇಶ್ ರವರ ನೇತೃತ್ವದಲ್ಲಿ ತನ್ನ ಗ್ರಾಮದ ಯುವಕರನ್ನು ಕಟ್ಟಿಕೊಂಡು ಕಾವೇರಿ ಕಾಲೇಜಿನಿಂದ ಉಮಾಮಹೇಶ್ವರಿ ದೇವಸ್ಥಾನದವರೆಗೆ ಸ್ವಚ್ಛತಾ ಕಾರ್ಯವನ್ನು ಮಾಡಿದ್ದಾರೆ.