ಗೋಣಿಕೊಪ್ಪ ದಸರಾ: ಕಾವೇರಿ ಕಲಾ ವೇದಿಕೆಯಲ್ಲಿ ಬುಡಕಟ್ಟು ಸಮುದಾಯದವರಿಗೆ ಅನ್ಯಾಯ ಆರೋಪ
ಗೋಣಿಕೊಪ್ಪ:ಇಂದು 6:30 ರಿಂದ 7:30ರ ತನಕ ನಾಗರಹೋಳೆ ಗಿರಿಜನ ಸಮಗ್ರ ಅಭಿವೃದ್ಧಿ ಕಲಾ ಸಂಸ್ಥೆ ನಾಣಚ್ಚಿ ಇವರಿಂದ ಜೇನು ಕುರುಬರ ಹಾಡು ಹಾಗೂ ನೃತ್ಯ, ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆದರೆ ,ಅವರಿಗೆ ವೇದಿಕೆಯನ್ನು ಬಿಟ್ಟುಕೊಡಲು ಮತ್ತು ಮೈಕುಗಳ ವ್ಯವಸ್ಥೆಯನ್ನು ಮಾಡಲು ಸಮಿತಿ ನಿರ್ಲಕ್ಷ ತೋರಿದೆ ಎಂದು ಆರೋಪ ವ್ಯಕ್ತವಾಗಿದೆ.
ಮೊದಲ ಕಾರ್ಯಕ್ರಮಕ್ಕೆ ವ್ಯವಸ್ಥೆ ಮಾಡಿಕೊಡುವ ಬದಲು ಬುಡಕಟ್ಟು ಸಮುದಾಯದವರ ಕಾರ್ಯಕ್ರಮ ನಡೆದ ನಂತರ ಪ್ರಾರಂಭವಾಗುವ ಮ್ಯೂಸಿಕಲ್ ನೈಟ್ ಕಾರ್ಯಕ್ರಮಕ್ಕೆ ಶ್ರೀ ಕಾವೇರಿ ದಸರಾ ಸಮಿತಿ ಹೆಚ್ಚಿನ ಆಸಕ್ತಿ ತೋರಿದ್ದಾರೆ. ಈಗಾಗಲೇ 8.30ಕ್ಕೆ ಪ್ರಾರಂಭಿಸಬೇಕಾದ ಕಾರ್ಯಕ್ರಮದವರು ವೇದಿಕೆಯನ್ನು ಪೂರ್ತಿ ಬಳಸಿಕೊಂಡಿದ್ದಾರೆ. ಬುಡಕಟ್ಟು ಸಮುದಾಯದವರು ಮೈಕ್ ಒದಗಿಸಿ ಕೊಡಿ ಎಂದು ಸಮಿತಿ ಅವರಲ್ಲಿ ಅಂಗಲಾಚುತಿದ್ದಾರೆ. ಕಾರ್ಯಕ್ರಮ ಮುಗಿಸುವ ಸಮಯ ಬಂದರು ಪ್ರಾರಂಭವೇ ಆಗಲಿಲ್ಲ ಎಂಬುವುದು ಬೇಸರದ ವಿಚಾರ. ಕಾಳಜಿ ಇಲ್ಲದ ಕಾಟಚಾರದ ವ್ಯವಸ್ಥೆಗಳು ನಡೆದಾಗ ಹೀಗೆ ಸಮಸ್ಯೆಗಳು ಹುಟ್ಟಿಕೊಳ್ಳಲು ಕಾರಣವಾಗುತ್ತದೆ.
ವರದಿ:ಜಗದೀಶ್ ಜೋಡುಬೀಟಿ