ಗೋಣಿಕೊಪ್ಪ: ಫೆಬ್ರವರಿ 22ರಂದು ಹಿಂದೂ ಸಂಗಮ ಕಾರ್ಯಕ್ರಮ

Feb 17, 2026 - 16:02
 0  353
ಗೋಣಿಕೊಪ್ಪ: ಫೆಬ್ರವರಿ 22ರಂದು ಹಿಂದೂ ಸಂಗಮ ಕಾರ್ಯಕ್ರಮ

ಗೋಣಿಕೊಪ್ಪ: ಗೋಣಿಕೊಪ್ಪ ನಗರದಲ್ಲಿ ಫೆಬ್ರವರಿ 22ರಂದು ಹಿಂದೂ ಸಂಗಮ ನಡೆಯಲಿದೆ ಎಂದು ಹಿಂದೂ ಸಂಗಮದ ಸಂಯೋಜಕ ಎಂ.ಎಸ್. ಸುಬ್ರಮಣಿ ಮಾಹಿತಿ ನೀಡಿದ್ದಾರೆ.

 22ರಂದು ಭಾನುವಾರ ಕೃಷಿ ಉತ್ಪನ್ನ ಮಾರುಕಟ್ಟ ಸಮಿತಿಯ ಆವರಣದಿಂದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಸಮಾವೇಶಗೊಳ್ಳಲಿದೆ. ಮೆರವಣಿಗೆಯಲ್ಲಿ ಡೊಳ್ಳುಕುಣಿತ, ಭಜನೆ ಕುಣಿತ, ಕೇರಳದ ಮಹಿಳೆಯರಿಂದ ಸಿಂಗಾರಿ ಮೇಳ, ಕೊಡವ ವಾಲಗ, ನಾಗರಹೊಳೆ ಬುಡಕಟ್ಟು ಸಮುದಾಯದವರ ನೃತ್ಯ, ಛದ್ಮವೇಷಗಳು, ಕೊಡಗಿನ ಉಮ್ಮತ್ತಾಟ್ ಸೇರಿದಂತೆ ಹಲವಾರು ಸಾಂಸ್ಕೃತಿಕ ಮೇಳದೊಂದಿಗೆ ಮೆರವಣಿಗೆ ಆಕರ್ಷೀಣಿಯವಾಗಿ ಹಿಂದುತ್ವವನ್ನು ಪ್ರತಿಪಾಧಿಸಲಿದೆ ಎಂದು ತಿಳಿಸಿದರು.

 ಶೋಭಯಾತ್ರೆ ಬೆಳಿಗ್ಗೆ 10 ಗಂಟೆಗೆ ಪ್ರಾರಂಭವಾಗಲಿದ್ದು, ನಂತರ ಸರ್ಕಾರಿ ಶಾಲಾ ಮೈದಾನದಲ್ಲಿ ಮಧ್ಯಾಹ್ನ 12 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ಅಧ್ಯಕ್ಷತೆಯನ್ನು ಎಂ.ಪಿ. ಪ್ರಮೋದ್‌ಕಾಮತ್ ವಹಿಸಲಿದ್ದು, ಅತಿಥಿಗಳಾಗಿ ಪುರೋಹಿತ ಮಹೇಶ್ ಭಟ್ಟ್, ಶಿಕ್ಷಕಿ ಬೆಂಜಂಡ ರಶ್ಮಿ ದೇವಯ್ಯ ಭಾಗವಹಿಸಲಿದ್ದಾರೆ, ಸಭಾ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಎಂದು ತಿಳಿಸಿದರು.

 ರಾಷ್ಟ್ರೀಯ ಸ್ವಯಂ ಸೇವ ಸಂಘದ 100ನೇ ವರ್ಷದ ಸಂಭ್ರಮಾಚರಣೆಯ ಅಂಗವಾಗಿ ದೇಶದಾದ್ಯಂತ ಗ್ರಾಮ ಗ್ರಾಮಗಳಲ್ಲಿ ಹಿಂದುತ್ವದ ಸಂಘಟನೆಗಾಗಿ ಶೋಭಯಾತ್ರೆ ಆಯೋಜಿಸಲಾಗುತ್ತಿದೆ ಎಂದು ಹೇಳಿದರು. ಹಿಂದೂಗಳ ಮನೆಗಳಿಗೆ ತೆರಳಿ ಹಿಂದೂತ್ವದ ಬಗ್ಗೆ ಜಾಗೃತಿ ಮೂಡಿಸುವುದರೊಂದಿಗೆ ಪ್ರತಿಯೊಬ್ಬರ ಮನದಲ್ಲಿ ಈ ಸಂಸ್ಕೃತಿಯನ್ನು ಆಳವಾಗಿ ಬಿತ್ತು ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ 103 ಗ್ರಾಮಗಳ ಮಂಡಲಗಳಲ್ಲಿಯೂ ಶೋಭಯಾತ್ರೆ ಆಯೋಜನೆಗಳೊಳ್ಳುತ್ತಿದ್ದು, ಹಿಂದುತ್ವದ ಜಾಗೃತಿ ಮೂಡಿಸುತ್ತಿದೆ ಎಂದು ಹೇಳಿದರು. ಸ್ವದೇಶ ವಸ್ತುಗಳ ಬಳಕೆ, ಕುಟುಂಬದಲ್ಲಿ ಸುಸಂಸ್ಕೃತ ವಾತಾವರಣ, ಸಮಾಜದಲ್ಲಿ ಸಾಮರಸ್ಯ ವಾತಾವರಣವನ್ನು ಹುಟ್ಟು ಹಾಕುವ ಪರಿಕಲ್ಪನೆಯೊಂದಿಗೆ ಹಿಂದುತ್ವವನ್ನು ಪ್ರಪಂಚದಲ್ಲಿಯೇ ಬಿತ್ತು ಚಿಂತನೆಯೊಂದಿಗೆ ಶೋಭಯಾತ್ರೆ ಕಾರ್ಯಕ್ರಮಗಳು ನಡೆಯುತ್ತಿದೆ. ಭಾನುವಾರದಂದು ನಡೆಯುವ ಬೃಹತ್ ಶೋಭಯಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂ ಭಾಂದವರು ಭಾಗವಹಿಸುವ ಮೂಲಕ ಹಿಂದುತ್ವದ ಒಗ್ಗಟ್ಟನ್ನು ಎತ್ತಿ ಹಿಡಿಯಬೇಕೆಂದು ಕರೆ ನೀಡಿದರು.

ಹಿಂದೂ ಸಂಗಮದ ಆರ್ಥಿಕ ಸಮಿತಿ ಸಂಯೋಜಕ ಗುಮ್ಮಟೀರ ಕಿಲನ್ ಗಣಪತಿ ಮಾತನಾಡಿ, ಹಿಂದುಗಳ ಶಕ್ತಿ ಪ್ರದರ್ಶನಕ್ಕಾಗಿ ಮತ್ತು ಈ ದೇಶದ ಹಿಂದುತ್ವದ ಏಕತೆಗಾಗಿ ಸಾರುವ ಉದ್ದೇಶದೊಂದಿಗೆ ಶೊಭಯಾತ್ರೆ ಪ್ರತಿ ಗ್ರಾಮಗಳಲ್ಲಿಯೂ ಆಯೋಜನೆಗೊಳ್ಳುತ್ತಿದೆ. ರಾಜ್ಯದ 3600 ಗ್ರಾಮಗಳಲ್ಲಿ ಹಿಂದೂ ಸಂಘಟನೆಗಳಡಿಯಲ್ಲಿ ಹಿಂದುತ್ವವನ್ನು ಪ್ರತಿಪಾದಿಸುವ ಶೋಭಯಾತ್ರೆಗಳು ನಡೆದಿದೆ.

ಆ ಪ್ರೇರಣೆಯೊಂದಿಗೆ ಗೋಣಿಕೊಪ್ಪದಲ್ಲಿಯೂ 22ರಂದು ಬೃಹತ್ ಶೋಭಯಾತ್ರೆ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಹಿಂದುಗಳು ಭಾಗವಹಿಸಬೇಕೆಂದು ಮನವಿ ಮಾಡಿದರು. ಹಿಂದೂ ಸಂಗಮ ಸಾಂಸ್ಕೃತಿಕ ಸಮಿತಿ ಸಂಯೋಜಕ ರಾಜೇಶ್ ಕೆ, ಆಯೋಜಕ ಸುರೇಶ್ ರೈ, ವಿರಾಜಪೇಟೆ ತಾಲೂಕು ಹಿಂದೂ ಸಂಗಮ ಸಮಿತಿ ಉಪಾಧ್ಯಕ್ಷ ಸೋಮಯ್ಯ ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0