ಗೋಣಿಕೊಪ್ಪ; ಮಾರ್ಚ್ 29ರಿಂದ 31ರವರೆಗೆ ಶ್ರೀ ಕಿಲೇರಿ ಮುತ್ತಪ್ಪ ದೇವಸ್ಥಾನ ಹರಿಶ್ಚಂದ್ರಪುರದಲ್ಲಿ ಶ್ರೀ ಮುತ್ತಪ್ಪ ದೇವರ ವಾರ್ಷಿಕೋತ್ಸವ
ಗೋಣಿಕೊಪ್ಪ: ಗೋಣಿಕೊಪ್ಪಲು ಶ್ರೀ ಕಿಲೇರಿ ಮುತ್ತಪ್ಪ ದೇವಸ್ಥಾನ ಹರಿಶ್ಚಂದ್ರಪುರದಲ್ಲಿ ಶ್ರೀ ಮುತ್ತಪ್ಪ ದೇವರ ವಾರ್ಷಿಕೋತ್ಸವ ಮಾರ್ಚ್ 29, 30 ಮತ್ತು 31ರಂದು ಮೂರು ದಿನಗಳ ಕಾಲ ನಡೆಯಲಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.
29ರಂದು ಭಾನುವಾರ ಬೆಳಿಗ್ಗೆ 6:00ಕ್ಕೆ ಗಣಪತಿ ಹೋಮ, 8.30ಕ್ಕೆ ಪ್ರತಿಷ್ಠಾ ದಿನಾಚರಣೆ ಪೂಜೆ, ಸಂಜೆ 6:00 ಗಂಟೆಗೆ ಶ್ರೀ ಮುತ್ತಪ್ಪನ್ ದೇವರ ವೆಳ್ಳಾಟಂ, ರಾತ್ರಿ 9:00 ಗಂಟೆಗೆ ಸಾಮೂಹಿಕ ಅನ್ನ ಸಂತರ್ಪಣೆ ನಡೆಯಲಿದೆ.
30ರಂದು ಸೋಮವಾರ ಸಂಜೆ 6:30 ಗಂಟೆಗೆ ಶ್ರೀ ಮುತ್ತಪ್ಪ ವೆಳ್ಳಾಟಂ, 7:30 ಗಂಟೆಗೆ ಕಾರಣೋರ್ ವೆಳ್ಳಾಟಂ, ರಾತ್ರಿ 8:30 ಗಂಟೆಗೆ ಗುಳಿಗನ್ ವೆಳ್ಳಾಟಂ, 9:00 ಗಂಟೆಗೆ ಸಾಮೂಹಿಕ ಅನ್ನಸಂತರ್ಪಣೆ, 9:00 ಗಂಟೆಗೆ ಕಂಡಕರ್ಣನ್ ವೆಳ್ಳಾಟಂ, 10:30 ಗಂಟೆಗೆ ವಸೂರಿಮಲಾ ವೆಳ್ಳಾಟಂ, 11:30 ಗಂಟೆಗೆ ವಿಷ್ಣುಮೂರ್ತಿ ವೆಳ್ಳಾಟಂ, 12:30 ಗಂಟೆಗೆ ಪೋದಿ ವೆಳ್ಳಾಟಂ, 1:00 ಗಂಟೆಗೆ ಕಳಸ ಸ್ವಾಗತ ನಡೆಯಲಿದೆ.
.31ರಂದು ಮಂಗಳವಾರ ಪ್ರಾತಃಕಾಲ 2 ಗಂಟೆಗೆ ಗುಳಿಗನ್ ತೆರೆ, 4:00 ಗಂಟೆಗೆ ಕಂಡಕರ್ಣನ್ ತೆರೆ, 5:00 ಗಂಟೆಗೆ ತಿರುವಪ್ಪನ್ ತೆರೆ, 6:00 ಗಂಟೆಗೆ ಪೋದಿ ತೆರೆ, 6:30 ಗಂಟೆಗೆ ಕಾರಣೋರ್ ತೆರೆ, 7:00 ಗಂಟೆಗೆ ವಸೂರಿಮಲ ತೆರೆ ಹಾಗೂ 7:30 ಗಂಟೆಗೆ ವಿಷ್ಣುಮೂರ್ತಿ ತೆರೆ ನಡೆಯಲಿದೆ ಎಂದು ಆಡಳಿತ ಮಂಡಳಿ ಮಾಹಿತಿ ನೀಡಿದ್ದಾರೆ.