ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮಡಿಕೇರಿಯಲ್ಲಿ ಪದವಿ ಪ್ರದಾನ ಸಮಾರಂಭ
ಮಡಿಕೇರಿ;ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಎಂಬಿಬಿಎಸ್ ಪದವಿ ಪೂರ್ಣಗೊಳಿಸಿದ ಐದನೇ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಸಮಾರಂಭವು ಕಾಲೇಜು ಆವರಣದಲ್ಲಿ ನಡೆಯಿತು.
ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ ರಾಜ್ ನಾರಯಣ್ ತಿವಾರಿ ನಿರ್ದೇಶಕರು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) – ಪರಿಸರ ಆರೋಗ್ಯ ಸಂಶೋಧನಾ ರಾಷ್ಟ್ರೀಯ ಸಂಸ್ಥೆ ಭೂಪಾಲ್ ರವರು ವೈದ್ಯಕೀಯ ಪದವೀಧರರಿಗೆ ಹಾರ್ದಿಕ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಆಯೋಜಕರಿಗೆ ಧನ್ಯವಾದಗಳನ್ನು ತಿಳಿಸಿದರು. ವೈದ್ಯಕೀಯ ವೃತ್ತಿ ಕೇವಲ ಚಿಕಿತ್ಸೆ ನೀಡುವುದಲ್ಲದೆ, ಸಮಾಜದತ್ತ ಹೆಚ್ಚಿನ ಜವಾಬ್ದಾರಿಯನ್ನು ಹೊಂದಿದೆ ಎಂದು ಅವರು ಹೇಳಿದರು. ರೋಗಿಗಳೊಂದಿಗೆ ಸಹಾನುಭೂತಿ ಮತ್ತು ಮಾನವೀಯತೆ ವೈದ್ಯರ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ ಎಂದರು.
ಜನರು ವೈದ್ಯರನ್ನು ಕೇವಲ ಆರೋಗ್ಯ ಸಮಸ್ಯೆಗಳಿಗಾಗಿ ಮಾತ್ರವಲ್ಲದೆ, ವಿಶ್ವಾಸದ ಆಧಾರದ ಮೇಲೆ ಸಂಪರ್ಕಿಸುತ್ತಾರೆ ಎಂದು ಅವರು ಅಭಿಪ್ರಾಯಪಟ್ಟರು. ಪಿಜಿ ಅಧ್ಯಯನದಲ್ಲಿ ಸಮುದಾಯ ವೈದ್ಯಕೀಯದ ಮಹತ್ವವನ್ನು ಒತ್ತಿಹೇಳಿದ ಅವರು, ವೈದ್ಯಕೀಯ ಕ್ಷೇತ್ರದಲ್ಲಿ ಸಂಶೋಧನೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು.
Evidence Based Medicine ಇಂದಿನ ಕಾಲದಲ್ಲಿ ಅತ್ಯಂತ ಅಗತ್ಯವಾಗಿದ್ದು, ದೇಶದಲ್ಲಿ ಸಂಶೋಧನೆಗೆ ಇನ್ನಷ್ಟು ಅವಕಾಶಗಳಿವೆ ಎಂದರು. ಭಾರತವು 2047ರೊಳಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ವೈದ್ಯರ ಪಾತ್ರ ಮಹತ್ತರವಾಗಿದೆ. ದೇಶದ ಆರೋಗ್ಯವನ್ನು ಕಾಪಾಡುವ ಹೊಣೆಗಾರಿಕೆ ಯುವ ವೈದ್ಯರ ಮೇಲಿದೆ ಎಂದು ತಿಳಿಸಿದರು. ಇದೇ ವೇಳೆ ವೈದ್ಯರು ತಮ್ಮ ಸ್ವಂತ ಆರೋಗ್ಯದ ಬಗ್ಗೆ ಜಾಗರೂಕರಾಗಿರುವುದರ ಜೊತೆಗೆ, ಪರಿಸರ ಸಂರಕ್ಷಣೆಯ ದೂತರಾಗಬೇಕು ಎಂದರು.
ಜಾಗತಿಕ ತಾಪಮಾನ ಏರಿಕೆ ಮತ್ತು ಪರಿಸರ ಹಾನಿ ಆರೋಗ್ಯ ಕ್ಷೇತ್ರದ ಮೇಲೆ ಪರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ, sustainable practices ಅನುಸರಿಸುವ ಅಗತ್ಯವಿದೆ ಎಂದು ಹೇಳಿದರು.
ಅತಿಥಿಗಳಾಗಿ ಆಗಮಿಸಿದ ಕೊಡಗು ಜಿಲ್ಲಾ ಗ್ಯಾರಂಟಿ ಅಧ್ಯಕ್ಷರಾದ ಟಿ.ಎಂ ಧರ್ಮಜ ಉತ್ತಪ್ಪನವರು ಮಾತನಾಡಿ ಕೊಡಗಿನ ರಮನೀಯ ಸ್ಥಳದಲ್ಲಿ ಎಂಬಿಬಿಎಸ್ ವ್ಯಾಸಂಗವನ್ನು ಪೂರ್ಣಗೊಳಿಸಿ ತೆರಳುತ್ತಿರುವ ನಿಮಗೆಲ್ಲರೀಗೂ ಕಾವೇರಿ ಮಾತೆ ಉತ್ತಮ ಭವಿಷ್ಯವನ್ನು ರೂಪಿಸಲು ಆರ್ಶಿವಾದ ಮಾಡಲಿ ಎಂದು ಹಾರೈಸುತ್ತಾ ದೇವರು ಮತ್ತು ತಂದೆ-ತಾಯಿಯ ನಂತರ ಸಮಾಜದಲ್ಲಿ ಅತ್ಯಂತ ಗೌರವಿಸಲ್ಪಡುವವರು ವೈದ್ಯರು ಎಂದು ಹೇಳಿದರು. ವೈದ್ಯರ ಸೇವೆಯೇ ದೇಶದ ಭವಿಷ್ಯವನ್ನು ರೂಪಿಸುವಲ್ಲಿ ಮಹತ್ವದ ಪಾತ್ರವಹಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ವೈದ್ಯ ವೃತ್ತಿಗೆ ಶ್ರೇಷ್ಟವಾದ ಗೌರವವಿದ್ದು ಸರ್ಕಾರಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿರುವ ನಿಮಗೆ ಅಪರವಾದ ಅನುಭವ ಸಿಕ್ಕಿದ್ದು ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಒತ್ತಡಕ್ಕೆ ಮಣಿಯದೆ ನಿಮ್ಮ ವೃತ್ತಿಯನ್ನು ಗೌರವಿಸಿ ಕರ್ವ್ಯ ನಿರ್ವಹಿಸಿ ಎಂದು ಶುಭ ಹಾರೈಸಿದರು.
ಈ ಸಂಧರ್ಬದಲ್ಲಿ ಡಾ ಜಯರಾಮ್ ಮಂಡ್ಯ ಜಿಲ್ಲೆ ರವರು ಕಳೆದ 25 ವರ್ಷಗಳಿಂದ ವೈದ್ಯಕೀಯ ಕಾಲೇಜುಗಳಿಗೆ ಕೊಡುಗೆಗಳನ್ನು ನೀಡುತ್ತಾ ಬಂದಿದ್ದು ತಮ್ಮ ಪತ್ನಿಯು ಕೊಡಗಿನವರಾಗಿದ್ದು ಅವರ ಜ್ಞಾಪಕರ್ತವಾಗಿ ಅವರ ಹೆಸರಿನಲ್ಲಿ ರೂ 2,50,000/- ರೂಪಾಯಿ ಠೇವಣಿಯನ್ನು ಕಾಲೇಜಿನಲ್ಲಿ ಇರಿಸಿದ್ದು ಬಡ್ಡಿ ಮೊತ್ತದಲ್ಲಿ ಪ್ರಸೂತಿ ಮತ್ತು ಸ್ತ್ರೀ ರೋಗ ವಿಭಾಗದ ಸ್ನಾತಕೋತ್ತರ ವಿಬಾಗದಲ್ಲಿ ಪ್ರಥಮ ಅಂಕ ಪಡೆದವರಿಗೆ ರೂ 10,000 ರೂಪಾಯಿಗಳನ್ನು ವಿತರಿಸಿ ಗೌರವಿಸಲಾಯಿತು.
ಸಂಸ್ಥೆಯ ನಿರ್ದೇಶಕರು ಹಾಗೂ ಡೀನ್ ರವರಾದ ಡಾ. ಲೋಕೇಶ್ ಎ.ಜೆ ಪ್ರಾಂಶುಪಾಲರಾದ ಡಾ. ವಿಶಾಲ್ ಕುಮಾರ್, ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿಗಳಾದ ರೋಹಿಣಿ ಕೆ.ಎಂ, ವೈದ್ಯಕೀಯ ಅಧೀಕ್ಷಕರಾದ ಡಾ. ಸೋಮಶೇಖರ್, ಜಿಲ್ಲಾ ಶಸ್ತ್ರ ಚಿಕಿತ್ಸಕ ರಾದ ಡಾ. ನಂಜುಂಡಯ್ಯ, ಅಕಾಡೆಮಿಕ್ ರಿಜಿಸ್ಟ್ರಾರ್ ಡಾ. ರವಿಕಿರಣ್ ಕಿಸಾನ್, ಸಂಸ್ಥೆಯ ವಿಭಾಗದ ಮುಖ್ಯಸ್ಥರುಗಳು ಬೋಧಕ ವರ್ಗದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು ಸಂಸ್ಥೆಯಲ್ಲಿ ಈ ಬಾರಿ 150 ವೈದ್ಯ ವಿದ್ಯಾರ್ಥಿಗಳು ವೈದ್ಯರಾಗಿ ಹೊರಹೊಮ್ಮಿ ಪದವಿ ಸ್ವೀಕರಿಸಿದರು.