ಗೆಳೆಯರ ಬಳಗದ ವತಿಯಿಂದ ಗ್ರಾ.ಪಂ ಸದಸ್ಯ ಕೆ.ಬಿ.ಶಂಶುದ್ಧೀನ್ ಜನ್ಮ ದಿನಾಚರಣೆ: ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ
ಕುಶಾಲನಗರ,ಜ೧೫: ಗೆಳೆಯರ ಬಳಗದ ವತಿಯಿಂದ ಕೂಡುಮಂಗಳೂರು ಗ್ರಾ.ಪಂ ಸದಸ್ಯರಾದ ಕೆ.ಬಿ.ಶಂಶುದ್ಧೀನ್ ಅವರ ಜನ್ಮ ದಿನವನ್ನು ಕುಶಾಲನಗರದ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣ ಹಂಪಲು ವಿತರಿಸಿ ಆಚರಿಸಲಾಯಿತು.
ಸಂಕ್ರಾಂತಿ ದಿನದಂದು ಜನ್ಮದಿನ ಆಚರಿಸುತ್ತಿರುವ ಹಿನ್ನಲೆ ಎಲ್ಲರೂ ಸಮೃದ್ಧಿಯಿಂದ ಇರಲು ಹಾಗೂ ರೋಗಿಗಳು ಬೇಗನೇ ಗುಣಮುಖರಾಗಬೇಕು ಎಂಬ ಉದ್ದೇಶದಿಂದ ಕೆ.ಬಿ.ಶಂಶುದ್ಧೀನ್ ಅವರ ಜನ್ಮದಿನವನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಆಚರಿಸಲಾಯಿತು.
ಸರ್ಕಾರಿ ಆಸ್ಪತ್ರೆಯ ೨೫ ಕ್ಕೂ ಹೆಚ್ಚು ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು. ಈ ಸಂದರ್ಭ ಮಾತನಾಡಿದ ಗೆಳೆಯರ ಬಳಗದ ಅಧ್ಯಕ್ಷರಾದ ಹಾಗೂ ಪುರಸಭೆ ಮಾಜಿ ಸದಸ್ಯರಾದ ವಿ.ಎಸ್.ಆನಂದ್ ಕುಮಾರ್, ಜನ್ಮದಿನವನ್ನು ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಸಿ ಆಚರಿಸುತ್ತಿರುವುದು ಮೆಚ್ಚುಗೆಯ ವಿಷಯ. ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಗೆಳೆಯರ ಬಳಗದ ಸದಸ್ಯರಾದ ಕೆ.ಬಿ.ಶಂಶುದ್ಧೀನ್ ಅವರ ಜನ್ಮ ದಿನವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಗುತ್ತಿದೆ ಎಂದರು.
ಜೆಡಿಎಸ್ ಮುಖಂಡ ಎಚ್.ಟಿ.ವಸಂತ್ ಕುಮಾರ್ ಹಾಗೂ ಕೂರ್ಗ್ ಟಿವಿ 6 ವ್ಯವಸ್ಥಾಪಕ ನಿರ್ದೇಶಕರಾದ ಮೋಹನ್ ಮಾತನಾಡಿ, ರೋಗಿಗಳು ಆದಷ್ಟು ಬೇಗನೇ ಗುಣಮುಖರಾಗಬೇಕು ಎಂಬ ಉದ್ದೇಶದಿಂದ ರೋಗಿಗಳೊಂದಿಗೆ ಜನ್ಮ ದಿನವನ್ನು ಆಚರಿಸುತ್ತಿರುವ ಗ್ರಾ.ಪಂ ಸದಸ್ಯರಾದ ಕೆ.ಬಿ.ಶಂಶುದ್ಧೀನ್ ಅವರಿಗೆ ಅಭಿನಂದನೆಗಳು ಎಂದರು.
ಬ್ಲಾಕ್ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಆದಂ ಮಾತನಾಡಿ, ಪತ್ರಕರ್ತರು ಹಾಗೂ ಗ್ರಾ.ಪಂ ಸದಸ್ಯರಾದ ಕೆ.ಬಿ.ಶಂಶುದ್ಧೀನ್ ಅವರು ಪ್ರತಿ ವರ್ಷ ವಿನೂತನವಾಗಿ ಆಚರಿಸುತ್ತಾ ಬಂದಿದ್ದಾರೆ. ಈ ಬಾರಿ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿ, ರೋಗಿಗಳಿಗೆ ಹಾರೈಸುವ ಮೂಲಕ ತಮ್ಮ ಜನ್ಮ ದಿನವನ್ನು ಆಚರಿಸಿದ್ದಾರೆ. ಇವರ ಈ ಸಾಮಾಜಿಕ ಕಳಕಳಿ ಬೇರೆಯವರಿಗೆ ಮಾದರಿಯಾಗಬೇಕು ಎಂದರು.
ಗ್ರಾ.ಪಂ ಸದಸ್ಯರಾದ ಕೆ.ಬಿ.ಶಂಶುದ್ಧೀನ್ ಮಾತನಾಡಿ, ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿ ಜನ್ಮ ದಿನ ಆಚರಿಸಲಾಗಿದೆ. ಇಂತಹ ಕೆಲಸಗಳು ಮನಸ್ಸಿಗೆ ನೆಮ್ಮದಿ ನೀಡುತ್ತವೆ. ಎಲ್ಲರೂ ಈ ರೀತಿ ತಮ್ಮ ಜನ್ಮ ದಿನವನ್ನು ಆಚರಿಸುವಂತಾಗಬೇಕು ಎಂದ ಅವರು, ಈ ಸತ್ಕಾರ್ಯದಲ್ಲಿ ಪಾಲ್ಗೊಂಡ ಗೆಳೆಯರ ಬಳಗಕ್ಕೆ ಧನ್ಯವಾದಗಳು.
ಈ ಸಂದರ್ಭ ಟಿ.ವಿ.೬ ಸಂಪಾದಕರಾದ ಜಯಪ್ರಕಾಶ್, ಗೆಳೆಯರ ಬಳಗದ ಸದಸ್ಯರಾದ ಅಯ್ಯೂಬ್, ಭಾಷಾ, ಗಯಾಜ್, ಅಜ಼ೀಜ಼್ ಹಾಗೂ ಇನ್ನಿತರರು ಇದ್ದರು.