Kodagu

ಹರದೂರು: ಅಂಬೇಡ್ಕರ್ ನಿಗಮದ ವಾಹನ ಸೌಲಭ್ಯ, ಫಲಾನುಭವಿ ಮಂಜುಗೆ ಕೀ ಹಸ್ತಾಂತರ

admincoorgdaily

ಹರದೂರು: ಅಂಬೇಡ್ಕರ್ ನಿಗಮದ ವಾಹನ ಸೌಲಭ್ಯ, ಫಲಾನುಭವಿ ಮಂಜುಗೆ ಕೀ ಹಸ್ತಾಂತರ

ಸುಂಟಿಕೊಪ್ಪ: ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ ವಾಹನ ಸೌಲಭ್ಯ ಪಡೆದ ಹರದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಫಲಾನುಭವಿ ಮಂಜು ಅವರಿಗೆ ಶಾಸಕ ಡಾ. ಮಂತರ್ ಗೌಡ ಶನಿವಾರ ವಾಹನದ ಕೀ ಹಸ್ತಾಂತರಿಸಿ ಶುಭ ಹಾರೈಸಿದರು.

ಸ್ವಯಂ ಉದ್ಯೋಗ ಕೈಗೊಂಡು ಆರ್ಥಿಕವಾಗಿ ಸ್ವಾವಲಂಬಿಯಾಗಲು ನಿಗಮದ ಯೋಜನೆಯಡಿ ಮಂಜು ಅವರಿಗೆ ವಾಹನ ಮಂಜೂರಾಗಿದೆ. ಕೀ ಹಸ್ತಾಂತರಿಸಿ ಮಾತನಾಡಿದ ಶಾಸಕರು, "ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಅಭಿವೃದ್ಧಿ ಹೊಂದಿ. ಇತರರಿಗೂ ಮಾದರಿಯಾಗಿ" ಎಂದು ಕಿವಿಮಾತು ಹೇಳಿದರು.