ಹಾಸನ;ಲಾಡ್ಜ್ ನಲ್ಲಿ ಉಪ ತಹಶೀಲ್ದಾರ್, ಕೊಡಗಿನ ಕರ್ತಮಾಡ ತಿಮ್ಮಯ್ಯ ಆತ್ಮಹತ್ಯೆ
ಹಾಸನ; ಲಾಡ್ಜ್ ನಲ್ಲಿ ಉಪ ತಹಸೀಲ್ದಾರ್ 4 ಪುಟಗಳ ಡೆತ್ ಬರೆದಿಟ್ಟು,ನೇಣಿಗೆ ಶರಣಾಗಿರುವ ಘಟನೆ ನಡೆದಿದೆ.ಕೊಡಗಿನ ಕರ್ತಮಾಡ ತಿಮ್ಮಯ್ಯ (52) ಆತ್ಮಹತ್ಯೆಗೆ ಶರಣಾದ ಉಪತಹಶೀಲ್ದಾರ್. ಗೋಣಿಕೊಪ್ಪ ತೂಚಮಕೇರಿ ನಿವಾಸಿ ಕರ್ತಮಾಡ ತಿಮ್ಮಯ್ಯ ಅವರು, ಹಾಸನ ನಗರದ ಬಿಎಂ ರಸ್ತೆಯಲ್ಲಿರುವ ಲಾಡ್ಜ್ ನಲ್ಲಿ ಶನಿವಾರ ರಾತ್ರಿ ನೇಣಿಗೆ ಶರಣಾಗಿದ್ದಾರೆ.
ಮೈಸೂರು ಜಿಲ್ಲೆ, ಸಾಲಿಗ್ರಾಮದಲ್ಲಿ ಉಪತಹಶೀಲ್ದಾರ್ ಆಗಿದ್ದ ತಿಮ್ಮಯ್ಯ ಅವರು, ಮೂರು ವರ್ಷಗಳ ಹಿಂದೆ ಹಾಸನ ಜಿಲ್ಲೆಗೆ ವರ್ಗಾವಣೆಗೊಂಡಿದ್ದರು. ಡೆತ್ ನೋಟು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ತಿಮ್ಮಯ್ಯ ಹಾಸನ ನಗರದ ಚನ್ನಪಟ್ಟಣದ ದ್ಯಾವಮ್ಮ ಬಡಾವಣೆಯಲ್ಲಿ ಕುಟುಂಬಸ್ಥರೊಂದಿಗೆ ವಾಸವಾಗಿದ್ದರು. ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
