ಕೂಗ್೯ ಹೋಟೇಲ್, ರೆಸಾಟ್೯ ಅಸೋಸಿಯೇಷನ್ , ಹೋಂಸ್ಟೇ ಅಸೋಸಿಯೇಷನ್, ಕೊಡಗು ಚೇಂಬರ್ ನಿಂದ ಭಾವಪೂಣ೯ ಬೀಳ್ಕೊಡುಗೆ ; ಕೊಡಗಿನಲ್ಲಿ ಕತ೯ವ್ಯ ಸಲ್ಸಿಸಿದ್ದು ಜೀವನದಲ್ಲಿಯೇ ಸ್ಮರಣೀಯ - ಯಮುನಾದಂತೆ ಕಾವೇರಿ ನದಿ ಮಾಲಿನ್ಯಗೊಳಿಸದಿರಿ : ವೆಂಕಟ್ ರಾಜಾ

ಕೂಗ್೯ ಹೋಟೇಲ್, ರೆಸಾಟ್೯ ಅಸೋಸಿಯೇಷನ್ , ಹೋಂಸ್ಟೇ ಅಸೋಸಿಯೇಷನ್, ಕೊಡಗು ಚೇಂಬರ್ ನಿಂದ ಭಾವಪೂಣ೯  ಬೀಳ್ಕೊಡುಗೆ ; ಕೊಡಗಿನಲ್ಲಿ ಕತ೯ವ್ಯ ಸಲ್ಸಿಸಿದ್ದು ಜೀವನದಲ್ಲಿಯೇ ಸ್ಮರಣೀಯ -  ಯಮುನಾದಂತೆ  ಕಾವೇರಿ ನದಿ ಮಾಲಿನ್ಯಗೊಳಿಸದಿರಿ : ವೆಂಕಟ್ ರಾಜಾ

ಮಡಿಕೇರಿ ಜ.11 - ಕೊಡಗು ಜಿಲ್ಲೆಯಲ್ಲಿ ಜಿಲ್ಲಾದಿಕಾರಿಯಾಗಿ ಕತ೯ವ್ಯ ಸಲ್ಲಿಸಿದ ದಿನಗಳು ಜೀವನದಲ್ಲಿಯೇ ಸ್ಮರಣೀಯ ದಿನಗಳಾಗಿರುತ್ತವೆ. ಕೊಡಗಿನ ಜನತೆ ನೀಡಿದ ಪ್ರೀತಿ, ವಿಶ್ವಾಸ ಎಂದಿಗೂ ಮರೆಯಲಾರೆ. ಉತ್ತರಭಾರತೀಯನಾದ ತನಗೆ ಕೊಡಗು ಎರಡನೇ ಮನೆಯಿದ್ದಂತೆ ಎಂದು ನಿಗ೯ಮಿತ ಜಿಲ್ಲಾಧಿಕಾರಿ ವೆಂಕಟರಾಜ ಜನತೆಗೆ ಭಾವನಾತ್ಮಕವಾಗಿ ಧನ್ಯವಾದ ಸಲ್ಲಿಸಿದ್ದಾರೆ.

ನಗರದ ವ್ಯಾಲಿವ್ಯೂ ಹೋಟೇಲ್ ಸಭಾಂಗಣದಲ್ಲಿ ಕೂಗ್೯ ಹೋಟೇಲ್, ರೆಸಾಟ್೯ ಅಸೋಸಿಯೇಷನ್, ಕೊಡಗು ಹೋಂಸ್ಟೇ ಅಸೋಸಿಯೇಷನ್, ಕೊಡಗು ಚೇಂಬರ್ ಆಫ್ ಕಾಮಸ್೯ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ವೆಂಕಟರಾಜ ಪ್ರವಾಸೋದ್ಯಮ ಸಂಘಟನೆಗಳ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ತಾನು ಜಿಲ್ಲಾಧಿಕಾರಿಯಾಗಿ ಕತ೯ವ್ಯ ಸಲ್ಲಿಸಿದ ಎರಡೂವರೆ ವಷ೯ಗಳ ಕಾಲವೂ ಜಿಲ್ಲೆಯ ಜನತೆ ತನಗೆ ಪ್ರೀತಿ, ವಿಶ್ವಾಸತೋರಿ ಕುಟುಂಬ ನೀಡುವ ಮಮತೆಯನ್ನೇ ನೀಡಿದ್ದರು. ಕೊಡಗಿನ ಭವಿಷ್ಯದ ದೖಷ್ಟಿಯಿಂದ ಸ್ಪಷ್ಟ ಗುರಿಯೊಂದಿಗೆ ಅಭಿವೖದ್ದಿಯತ್ತ ಗಮನ ನೀಡಿ ಎಂದು ಕಿವಿಮಾತು ಹೇಳಿದ ವೆಂಕಟರಾಜಾ, ಗುರಿ ಸಾಧನೆಯ ನಿಟ್ಟಿನಲ್ಲಿ ಕೊಡಗಿನ ಜನತೆ ತಮ್ಮ ಛಲದ ಹೋರಾಟ ಮರೆಯಬಾರದು ಎಂದು ಹೇಳಿದರು.

ದಿಲ್ಲಿಯಲ್ಲಿ ಯಮುನಾ ನದಿ ಕಲುಷಿತಗೊಂಡು ಕುಡಿಯಲು ಯೋಗ್ಯವಿಲ್ಲದಂತೆ ಆಗಿರುವುದನ್ನು ಪ್ರಸ್ತಾಪಿಸಿದ ವೆಂಕಟರಾಜಾ ಕೊಡಗಿನಲ್ಲಿ ಉಗಮಿಸಿ ಕನಾ೯ಟಕ, ತಮಿಳುನಾಡು ರಾಜ್ಯಗಳಲ್ಲಿ ಸಾಗುವ ಕಾವೇರಿ ಅತ್ಯಂತ ಪವಿತ್ರ ನದಿಯಾಗಿದೆ. ಹೀಗಾಗಿ ಕೊಡಗಿನ ಪ್ರತೀಯೋವ೯ರೂ ಕಾವೇರಿಯ ಪಾವಿತ್ರ್ಯತೆ ಹಾಳಾಗಲು ಬಿಡಬಾರದು ಎಂದೂ ಕರೆ ನೀಡಿದರು. ಕೊಡಗನ್ನು ಸ್ವಚ್ಚವಾಗಿ ಸುಂದರವಾಗಿ ಕಾಪಾಡಬೇಕಾದಲ್ಲಿ, ಪರಿಸರ ಸ್ಮೇಹಿ ಮತ್ತು ಸುಸ್ಥಿರ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಬೇಕಾದ ಅನಿವಾಯ೯ತೆ ಇದೆ ಎಂದೂ ಅವರು ಅಭಿಪ್ರಾಯಪಟ್ಟರು. ಜಿಲ್ಲೆಯಿಂದ ವಗ೯ವಾಗಿದ್ದರೂ ಕೊಡಗಿನ ಅಭಿೖವೖದ್ದಿ ನಿಟ್ಟಿನಲ್ಲಿ ಎಲ್ಲಿಯೇ ಇದ್ದರೂ ತಾನು ಸಲಹೆಗಳನ್ನು ನೀಡಿ ಎಲ್ಲಾ ರೀತಿಯ ಸಹಾಯ ಮಾಡುವುದಾಗಿಯೂ ವೆಂಕಟರಾಜ ಭರವಸೆ ನೀಡಿದರು.

ಕೂಗ್೯ ಹೋಟೇಲ್, ರೆಸಾಟ್೯ ಅಸೋಸಿಯೇಷನ್ ಅಧ್ಯಕ್ಷ ಕುಂಡ್ಯೋಳಂಡ ದಿನೇಶ್ ಕಾಯ೯ಪ್ಪ ಮಾತನಾಡಿ, ಪ್ರವಾಸೋದ್ಯಮ ಅಭಿವೖದ್ದಿ ನಿಟ್ಟಿನಲ್ಲಿ ಸಾಕಷ್ಟು ಯೋಜನೆ ಹಮ್ಮಿಕೊಂಡಿದ್ದ ಜಿಲ್ಲಾಧಿಕಾರಿಗಳ ಪ್ರಯತ್ನದಿಂದಲೇ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಅಸೋಸಿಯೇಷನ್ ಗೆ ಪ್ರವಾಸೋದ್ಯಮ ಕಛೇರಿಯಲ್ಲಿಯೇ ತನ್ನದೇ ಆದ ಕಛೇರಿ ಲಭಿಸುವಂತಾಯಿತು ಅಂತೆಯೇ ಕೊಡಗು ಪ್ರವಾಸೋದ್ಯಮದ ಸಮಗ್ರ ದಾಖಲೆಗಳಿರುವ ಕಾಫಿ ಟೇಬಲ್ ಪುಸ್ವೂೂ ಇವರ ಪ್ರಯತ್ನದಿಂದ ಪ್ರಕಟವಾಯಿತು ಎಂದು ಸ್ಮರಿಸಿದರು. ಕುಂಡ್ಯೋಳಂಡ ಹಾಕಿ ಉತ್ಸವದ ಸಂದಭ೯ ಸ್ವತ ಹಾಕಿಪಟುವಾಗಿದ್ದ ವೆಂಕಟರಾಜ ಮೈದಾನಕ್ಕಿಳಿದು ಹಾಕಿ ಆಟವನ್ನು ಆಡಿ ಜನಮನ ಗೆದ್ದಿರುವುದನ್ನೂ ದಿನೇಶ್ ಈ ಸಂದಭ೯ ಹೇಳಿದರು. ಕೊಡಗಿನ ಜಮ್ಮಾ ಹಿಡುವಳಿದಾರರ ಸಮಸ್ಯೆ ಪರಿಹಾರದ ನಿಟ್ಟಿನಲ್ಲಿಯೂ ವೆಂಕಟರಾಜಾ ಅವರ ತಾಂತ್ರಿಕ ಮಾಹಿತಿಗಳು ಸಕಾ೯ರಕ್ಕೆ ನೆರವಾಯಿತೆಂದೂ ದಿನೇಶ್ ಕಾಯ೯ಪ್ಪ ಹೇಳಿದರು.  

ಕೊಡಗು ಚೇಂಬರ್ ಆಫ್ ಕಾಮಸ್೯ ಅಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್ ಮಾತನಾಡಿ, ಕೇವಲ ಆಶ್ವಾಸನೆಗೆ ಮಾತ್ರ ಸೀಮಿತರಾಗದೇ ಕೊಡಗಿನ ಅಭಿವೖದ್ದಿ ನಿಟ್ಟಿನಲ್ಲಿ ಸಾಕಷ್ಟು ಕಾಯ೯ಯೋಜನೆಗಳನ್ನು ವೆಂಕಟರಾಜ ಜಾರಿಗೊಳಿಸಿದ್ದರು ಎಂದು ಶ್ಲಾಘಿಸಿದರು. ಪ್ರವಾಸೋದ್ಯಮದ ಬೆಳವಣಿಗೆಗೆ 40 ಅಂಶಗಳ ಕಾಯ೯ಸೂಚಿಯನ್ನೂ ವೆಂಕಟರಾಜ ತಯಾರಿಸಿದ್ದು ಅವರ ದೂರದೖಷ್ಟಿತ್ವಕ್ಕೆ ಸಾಕ್ಷಿ ಎಂದೂ ನಾಗೇಂದ್ರ ಪ್ರಸಾದ್ ಹೇಳಿದರು.

ಕೊಡಗು ಹೋಂಸ್ಟೇ ಅಸೋಸಿಯೇಷನ್ ಅಧ್ಯಕ್ಷೆ ಮೋಂತಿಗಣೇಶ್ ಮಾತನಾಡಿ, ಸರಳತೆಯಿಂದ ಜನರ ಮನಗೆದ್ದಿದ್ದ ವೆಂಕಟರಾಜ, ಕೊಡಗಿನ ಹೋಂಸ್ಟೇಗಳ ಅನೇಕ ವಷ೯ಗಳ ಸಮಸ್ಯೆ ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆತಿಥ್ಯದ ಪರಿಕಲ್ಪನೆಗೆ ಹೊಸ ರೂಪು ನೀಡಿದ ಕೀತಿ೯ ವೆಂಕಟರಾಜ ಅವರಿಗೆ ಸಲ್ಲಬೇಕು ಎಂದು ಹೆಮ್ಮೆಯಿಂದ ನುಡಿದರು.

ಕೂಗ್೯ ಹೋಟೇಲ್, ರೆಸಾಟ್೯ ಅಸೋಸಿಯೇಷನ್ ಗೌರವ ಸಲಹೆಗಾರ ಜಿ.ಚಿದ್ವಿಲಾಸ್ ಪ್ರಾಸ್ತಾವಿಕವಾಗಿ ಮಾತನಾಡಿ, ಕೊಡಗನ್ನು ಓವ೯ ಅದಿಕಾರಿಯಂತೆ ವೆಂಕಟರಾಜ ನೋಡಲಿಲ್ಲ. ಬದಲಿಗೆ ಕೊಡಗಿನ ನೆಲ, ಇಲ್ಲಿನ ಸಂಸ್ಕೖತಿ, ಸ್ಥಳೀಯ ಆಚಾರ, ವಿಚಾರಗಳನ್ನು ಅಧ್ಯಯನ ಮಾಡಿ ಅವುಗಳನ್ನು ಪ್ರೀತಿಸಿದರು. ಕೊಡಗಿ ಭವಿಷ್ಯದ ದೖಷ್ಟಿಯಿಂದ ಈ ಜಿಲ್ಲೆಗೆ ಏನು ಬೇಕೆಂಬುದನ್ನು ಅವರು ಕಾಯ೯ಯೋಜನೆ ರೂಪದಲ್ಲಿ ದಾಖಲಿಸಿದರು. ಅನೇಕ ಯೋಜನೆಗಳನ್ನು ಸ್ಥಳೀಯರ ಹಿತಚಿಂತನೆಗಾಗಿ ಜಾರಿಗೊಳಿಸಿದ್ದರು. ಅಪರೂಪದ ಅಧಿಕಾರಿಯಾಗಿ ಕತ೯ವ್ಯ ಸಲ್ಲಿಸಿದ್ದ ವೆಂತಟರಾಜ ಅವರನ್ನು ಕೊಡಗಿನ ಜನತೆ, ಸಂಘಸಂಸ್ಥೆಗಳು ಸದಾ ಸ್ಮರಿಸುತ್ತಿರುತ್ತದೆ ಎಂದು ಹೆಮ್ಮೆಯಿಂದ ನುಡಿದರು. ಕೊಡಗಿನ ಪ್ರವಾಸೋದ್ಯಮಕ್ಕೆ ವೆಂಕಟರಾಜ ಅವರ ಕೊಡುಗೆ ಅಪಾರ ಮತ್ತು ಮಹತ್ವದ್ದಾಗಿತ್ತು ಎಂದೂ ಅವರು ನುಡಿದರು.

ಪತ್ರಕತ೯ ಅನಿಲ್ ಹೆಚ್.ಟಿ ಮಾತನಾಡಿ, ಬಹಳ ದೂರದೖಷ್ಟಿತ್ವ ಹೊಂದಿದ್ದ ಅದಿಕಾರಿಯಾಗಿದ್ದ ವೆಂಕಟರಾಜ ಕೊಡಗಿನ ಪ್ರಗತಿಗೆ ನೀಡಿದ್ದ ಅನೇಕ ಸಲಹೆಗಳು ಭವಿಷ್ಯದ ಹಿತದೖಷ್ಟಿಯಿಂದ ಬಹಳ ಮುಖ್ಯವಾಗಿದ್ದವು. ಆದರೆ ಇಂಥ ಸಲಹೆಗಳನ್ನು ಸ್ವೀಕರಿಸಿ ಜಾರಿಗೊಳಿಸುವ ನಿಟ್ಟಿನಲ್ಲಿ ಜನರು ಒಗ್ಗಟ್ಟಾಗಬೇಕೆಂದು ಅಭಿಪ್ರಾಯಪಟ್ಟರು. ಸೈನಿಕಶಾಲೆ, ಆದಿವಾಸಿ ತಂಡಗಳು, ಸಕಾ೯ರಿ ಶಾಲಾ ಮಕ್ಕಳನ್ನು ದಸರಾ ಸಾಂಸ್ಕೖತಿಕ ಕಾಯ೯ಕ್ರಮಗಳಲ್ಲಿ ಅವಕಾಶ ನೀಡುವ ಮೂಲಕ ಕೊಡಗಿನ ಪ್ರತಿಭೆಗಳಿಗೆ ಹೆಚ್ಚು ವೇದಿಕೆ ಕಲ್ಪಿಸುವ ಚಿಂತನೆ ವೆಂಕಟರಾಜ ಅವರಲ್ಲಿತ್ತು ಎಂದು ಮೆಲುಕು ಹಾಕಿದ ಅನಿಲ್, ಮೈಸೂರು, - ಬಸವನಹಳ್ಳಿ ನಡುವಿನ ಚತುಷ್ಥಥ ಹೆದ್ದಾರಿ ನಿಮಾ೯ಣವಾದ ಬಳಿಕ ಮಡಿಕೇರಿಗೆ ವಾಹನ ದಟ್ಟಣೆ ಖಂಡಿತಾ ಎಂದು ಸಭೆಯೊಂದರಲ್ಲಿ ಎಚ್ಚರಿಸಿದ್ದ ವೆಂಕಟರಾಜ ಅವರ ಮಾತನ್ನು ಗಂಭೀರವಾಗಿ ಪರಿಗಣಿಸಿ, ಈಗಲೇ ಮಡಿಕೇರಿ ನಗರಕ್ಕೆ ಸೂಕ್ತ ಮೇಲ್ ಸೇತುವೆ ಅಥವಾ ರಿಂಗ್ ರೋಡ್ ನಿಮಾ೯ಣಕ್ಕೆ ಮುಂದಾಗಬೇಕಾದ ಅಗತ್ಯವಿದೆ ಎಂದೂ ಅನಿಲ್ ಪ್ಪತಿಪಾದಿಸಿದರು.

ಕೂಗ್೯ ಹೋಟೇಲ್ ಅಸೋಸಿಯೇಷನ್ ಪ್ರಧಾನ ಕಾಯ೯ದಶಿ೯ ನಾಸೀರ್ ಸ್ವಾಗತಿಸಿ, ಹೋಂಸ್ಟೇ ಅಸೋಸಿಯೇಷನ್ ಪ್ರಧಾನ ಕಾಯ೯ದಶಿ೯ ಅಂಬೆಕಲ್ ನವೀನ್ ಕುಶಾಲಪ್ಪ ವಂದಿಸಿದ ಕಾಯ೯ಕ್ರಮದಲ್ಲಿ ಜಿಲ್ಲೆಯಾದ್ಯಂತಲಿನ ಪ್ರವಾಸೋದ್ಯಮಿಗಳು ಹಾಜರಿದ್ದು ನಿಗ೯ಮಿಕ ಅಧಿಕಾರಿ ವಂಕಟರಾಜ ಅವರಿಗೆ ಭಾವಪೂಣ೯ ವಿದಾಯ ಹೇಳಿದರು.

ಕೊಡಗು ನನ್ನ ಪಾಲಿಗೆ ಎರಡನೇ ಮನೆಯಿದ್ದಂತೆ!

ಕನಾ೯ಟಕಕ್ಕೆ ನಿಯುಕ್ತಿಗೊಂಡ ನಾನು ಕೋಲಾರದಲ್ಲಿ ಕತ೯ವ್ಯ ಸಲ್ಲಿಸಿ ಕೊಡಗಿಗೆ ಜಿಲ್ಲಾಧಿಕಾರಿಯಾಗಿ ನೇಮಕಗೊಂಡೆ. ಆ ಮೂಲಕ ಮೂರು ಊರುಗಳ ಹೆಸರೂ ತನ್ನ ಪಾಲಿಗೆ ಕೆ ಯಿಂದ ದೊರಕಿದವು. ನನ್ನ ಮಗ ಕೖಷ್ಣದೇವರಾಯ ಮಡಿಕೇರಿಯಲ್ಲಿಯೇ ಜನಸಿದ್ದೂ ಕೂಡ ನನ್ನ ಸೌಭಾಗ್ಯ. ಕನಾ೯ಟಕ ರಾಜ್ಯ ನನಗೆ ಅಧಿಕಾರಿಯಾಗಿ ಸೇವೆ ಸಲ್ಲಿಸಲು ಅವಕಾಶ ಕೊಟ್ಟ ರಾಜ್ಯವಾಗಿದ್ದರೆ ನಾನು ಜಿಲ್ಲಾಧಿಕಾರಿಯಾಗಿ ಜನರು ನೀಡಿದ ಪ್ರೀತಿಯಿಂದ ಕಾಯ೯ನಿವ೯ಹಿಸಿದ್ದ ಕೊಡಗು ನನ್ನ ಎರಡನೇ ಮನೆಯಂತೆ ಸದಾ ಸ್ಮರಣೀಯವಾಗಿರುತ್ತದೆ.

- ವೆಂಕಟರಾಜ, ನಿಗ೯ಮಿತ ಜಿಲ್ಲಾಧಿಕಾರಿ, ಭಾವಪೂಣ೯ ನುಡಿ