ಪ್ರೌಢಶಾಲಾ ಶಿಕ್ಷಕರ ಸಂಘಗಳಿಂದ ಶಾಸಕರಿಗೆ‌ ಮನವಿ ಸಲ್ಲಿಕೆ: ಮಕ್ಕಳ ಸಂಖ್ಯೆಯ ಮಿತಿ ಸಡಿಲಗೊಳಿಸುವುದು, ಶಿಕ್ಷಕರಿಗೆ ಓ.ಪಿ.ಎಸ್. ಜಾರಿ ಒತ್ತಾಯಿಸಿ ಮನವಿ

ಪ್ರೌಢಶಾಲಾ ಶಿಕ್ಷಕರ ಸಂಘಗಳಿಂದ ಶಾಸಕರಿಗೆ‌ ಮನವಿ  ಸಲ್ಲಿಕೆ: ಮಕ್ಕಳ ಸಂಖ್ಯೆಯ ಮಿತಿ ಸಡಿಲಗೊಳಿಸುವುದು, ಶಿಕ್ಷಕರಿಗೆ  ಓ.ಪಿ.ಎಸ್. ಜಾರಿ ಒತ್ತಾಯಿಸಿ ಮನವಿ

ಸೋಮವಾರಪೇಟೆ: ಕೊಡಗು ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕ ಸಂಘ ಮತ್ತು ಕೊಡಗು ಜಿಲ್ಲಾ ಅನುದಾನಿತ ನೌಕರರ ಸಂಘ ವತಿಯಿಂದ ಭಾನುವಾರ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂತರಗೌಡ ರವರನ್ನು ಭೇಟಿ ಮಾಡಿ, ಅನುದಾನಿತ ಶಾಲೆಗಳು ಇಂದು ನಮ್ಮ ಜಿಲ್ಲೆಯಲ್ಲಿ ಸರ್ಕಾರದ ಮಕ್ಕಳ ಸಂಖ್ಯೆಯ ಮಿತಿ ನಿಯಮದಿಂದ ಸಾಕಷ್ಟು ಶಾಲೆಗಳು ಮುಚ್ಚುತ್ತಿವೆ, ಹಾಗಾಗಿ ಸರ್ಕಾರ ಈ, ನಿಯಮವನ್ನು ರದ್ದು ಪಡಿಸಬೇಕು, ಹೆಚ್ಚುವರಿಯಾದ ಅನುದಾನಿತ ಶಿಕ್ಷಕರನ್ನು ಶಾಶ್ವತವಾಗಿ ಸರ್ಕಾರಿ ಶಾಲೆಗಳಿಗೆ ನಿಯೋಜಿಸಬೇಕು, ಅನುದಾನಿತ ಶಾಲೆಗಳ ಶಿಕ್ಷಕರಿಗೂ ಓ.ಪಿ.ಎಸ್.( O. P. S: ಹಳೆ ಪಿಂಚಣಿ ಯೋಜನೆ ) ಕೊಡಬೇಕು, ಹಾಗೂ ಜ್ಯೋತಿ ಸಂಜೀವಿನಿ ಯೋಜನೆಯನ್ನು ಜಾರಿಗೆ ತರಬೇಕು, ಪ್ರೌಢಶಾಲಾ ಶಿಕ್ಷಕರಿಗೆ ಬಡ್ತಿ ನೀಡುವ ಉದ್ದೇಶದಿಂದ ಜಾರಿಗೆ ತಂದಿರುವ ಪರೀಕ್ಷೆಯನ್ನು ಕೈಬಿಡಬೇಕು, ಬಿ. ಎಲ್. ಒ. ಮತ್ತು ಶೈಕ್ಷಣಿಕೇತರ ಕಾರ್ಯಗಳಿಗೆ ಶಿಕ್ಷಕರನ್ನು ನಿಯೋಜಿಸಬಾರದು, F. L. N ನೀತಿ ಪ್ರೌಢಶಾಲಾ ಶಾಲೆಗಳಿಗೆ ಅವೈಜ್ಞಾನಿಕವಾಗಿ ಶಿಕ್ಷಕರಿಗೆ ಅನಗತ್ಯ ಒತ್ತಡ ಉಂಟುಮಾಡುತ್ತಿದೆ, ಇದನ್ನು ತಪ್ಪಿಸಬೇಕು , ಪ್ರೌಢಶಾಲಾ ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸಲು ಶಾಸಕರು ಸರ್ಕಾರಕ್ಕೆ ಗಮನ ತರಬೇಕು ಎಂದು ಮನವಿ ಮಾಡಲಾಯಿತು.

ಈ ಸಂದರ್ಭದಲ್ಲಿ ಶಾಸಕರಾದ ಮಂತರಗೌಡ ರವರು ಸಕಾರಾತ್ಮಕವಾಗಿ ಸ್ವಂದಿಸಿ, ಶಿಕ್ಷಣ ಮಂತ್ರಿಗಳ ಗಮನಕ್ಕೆ ತರುತ್ತೇನೆ ಎಂದು ಭರವಸೆ ನೀಡಿದರು, ಅಷ್ಟೇ ಅಲ್ಲದೆ ಅಧಿಕಾರಿಗಳ ಸಭೆಯನ್ನು ಕರೆದು ಚರ್ಚಿಸುತ್ತೇನೆ ಎಂದು ಆಶ್ವಾಸನೆ ನೀಡಿದರು.

ಈ ಸಂದರ್ಭದಲ್ಲಿ ಪ್ರೌಢಶಾಲಾ ಸಹ ಶಿಕ್ಷಕ ಸಂಘದ ಜಿಲ್ಲಾ ಅಧ್ಯಕ್ಷರಾದ, ಹೆಚ್. ಜಿ. ಕುಮಾರ್, ಜಿಲ್ಲಾ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಕಾರ್ಯದರ್ಶಿ, ಎಂ. ಎಸ್, ಮಹೇಂದ್ರ, ಸೋಮವಾರ ಪೇಟೆ ಪ್ರೌಢಶಾಲಾ ಸಹ ಶಿಕ್ಷಕ ಸಂಘದ ಅಧ್ಯಕ್ಷರಾದ ರತ್ನ ಕುಮಾರ್, ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕ ಸಂಘದ ಖಂಜಾಚಿ, ಎ. ಸಿ. ಮಂಜುನಾಥ್, ಮಡಿಕೇರಿ ತಾಲೂಕು ಪ್ರೌಢಶಾಲಾ ಸಹ ಶಿಕ್ಷಕ ಸಂಘದ ಅಧ್ಯಕ್ಷ ರವಿಕ್ರಷ್ಣ, ವಿರಾಜಪೇಟೆ ತಾಲೂಕಿನ ಪ್ರೌಢಶಾಲಾ ಸಹ ಶಿಕ್ಷಕ ಸಂಘದ ಅಧ್ಯಕ್ಷರಾದ ಕ್ರಷ್ಣ ಚೈತನ್ಯ, ಜಿಲ್ಲಾ ಅನುದಾನಿತ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ನಾಗರಾಜ್,ಜಿಲ್ಲಾ ಉಪಾಧ್ಯಕ್ಷ ರಾದ ,ಮೆಹಬೂಬ ಸಾಬ್, ವಿರಾಜಪೇಟೆ ತಾಲೂಕಿನ ಅನುದಾನಿತ ನೌಕರರ ಸಂಘದ ಅಧ್ಯಕ್ಷರಾದ ಗಿಡ್ಡಯ್ಯ, ಮಡಿಕೇರಿ ತಾಲೂಕಿನ ಅನುದಾನಿತ ನೌಕರರ ಸಂಘದ ಅಧ್ಯಕ್ಷ ಶರತ್, ಹಾಗೂ ಪ್ರೌಢಶಾಲಾ ಸಹ ಶಿಕ್ಷಕ ಸಂಘದ ತಾಲೂಕುಗಳ, ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕ ಸಂಘದ ಜಿಲ್ಲಾ ಪದಾಧಿಕಾರಿಗಳು, ಹಾಗೂ ಅನುದಾನಿತ ನೌಕರರ ಸಂಘದ ತಾಲೂಕಿನ ಮತ್ತು ಜಿಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

 ಖಾಸಗಿ ಅನುದಾನಿತ ಪ್ರೌಢಶಾಲೆಗಳಲ್ಲಿ ಪ್ರತಿ ತರಗತಿಯಲ್ಲಿ ಕನಿಷ್ಠ 25 ಮಕ್ಕಳ ಮಿತಿಯನ್ನು ಸಡಿಲಗೊಳಿಸುವ ಕುರಿತು ಮನವಿ. ಜಿಲ್ಲೆಯಲ್ಲಿ ಪ್ರೌಢಶಾಲೆಗಳಲ್ಲಿ 8,9 & 10 ನೇ ತರಗತಿಗಳಲ್ಲಿ 25 ಮಕ್ಕಳ ಸಂಖ್ಯೆಗಿಂತ ಕಡಿಮೆಯಿರುವ ಶಾಲೆಗಳನ್ನು ಮುಚ್ಚುತ್ತಿರುವುದರಿಂದ ಶಿಕ್ಷಕರಿಗೆ ತೊಂದರೆಯಾಗುತ್ತಿದೆ. ಎಲ್ಲಾ ಕಡೆ ಅಗತ್ಯಕ್ಕಿಂತ ಹೆಚ್ಚು ಪ್ರೌಢಶಾಲೆಗಳ ಆರಂಭ ಹಾಗೂ ಅದರಲ್ಲೂ ಇಂಗ್ಲೀಷ್ ಮಾಧ್ಯಮ. ಪ್ರೌಢಶಾಲೆಗಳನ್ನು ಹೆಚ್ಚು ತೆರೆದಿರುವ ಕಾರಣ ಕನ್ನಡ ಮಾಧ್ಯಮ ಪ್ರೌಢಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿದೆ. 25 ಮಕ್ಕಳ ಸಂಖ್ಯೆಯ ಮಿತಿಯನ್ನು ಕಡಿತಗೊಳಿಸಬೇಕು ಎಂದು ಅನುದಾನಿತ ಪ್ರೌಢಶಾಲಾ ಶಿಕ್ಷಕರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.