ಬಿಳುಗುಂದ ಮಂಡಲದ ವತಿಯಿಂದ ಹಿಂದೂ ಸಂಗಮ ಶೋಭಾಯಾತ್ರೆ

Feb 25, 2026 - 15:24
Feb 25, 2026 - 17:44
 0  367
ಬಿಳುಗುಂದ ಮಂಡಲದ ವತಿಯಿಂದ ಹಿಂದೂ ಸಂಗಮ ಶೋಭಾಯಾತ್ರೆ

ವಿರಾಜಪೇಟೆ,ಫೆ:25: ಅಖಂಡ ಸನಾತನ ಧರ್ಮವು ಪುರಾತನವಾದದ್ದು, ಭರತ ಭೂಮಿ ಅನೇಕ ಸಾಧು ಸಂತರು, ಋಷಿ ಮುನಿಗಳು ತಪಸ್ಸು ಮಾಡಿದ ಪುಣ್ಯ ಭೂಮಿ. ಇದು ಅಂತ್ಯಕಾಣದ ಭೂಮಿಯಾಗಿದ್ದು ಧರ್ಮ ಮತ್ತು ಸಂಸ್ಕೃತಿ ಉಳಿವಿಗಾಗಿ ರಾಷ್ಠೃ ಜಾಗೃತಿಗಾಗಿ ನಾವು ಕಠಿಬದ್ಧರಾಗಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಜಿಲ್ಲಾ ಕುಟುಂಬ ಪ್ರಭೋದನ್ ಟಿ.ಸಿ. ಚಂದ್ರನ್ ಅವರು ಅಭಿಮತ ವ್ಯಕ್ತಪಡಿಸಿದರು.

 ಹಿಂದೂ ಸಂಗಮ ಆಯೋಜನ ಸಮಿತಿ ಬಿಳುಗುಂದ ಮಂಡಲದ ವತಿಯಿಂದ ಹಿಂದೂ ಸಂಗಮ ಮತ್ತು ಶೋಭಾಯಾತ್ರೆ ಕಾರ್ಯಕ್ರಮ ನಡೆಯಿತು. ಬಿಳುಗುಂದ ಕೊಡವ ಸಮಾಜದ ಆವರಣದಲ್ಲಿ ನಡೆದ ಹಿಂದೂ ಸಂಗಮ ಸಭಾ ಕಾರ್ಯಕ್ರಮಕ್ಕೆ ಆಗಮಿಸಿ ತಮ್ಮ ದಿಕ್ಸೂಚಿ ಭಾಷಣ ಮಾಡಿದ ಟಿ.ಸಿ. ಚಂದ್ರನ್ ಅವರು,

ಭವ್ಯ ಭಾರತದ ಮೇಲೆ ನೂರಾರು ವರ್ಷಗಳ ಕಾಲ ಪರಕೀಯರ ಆಕ್ರಮಣ ನಡೆದರು ಅಖಂಡ ಭಾರತದ ವೈಭವಯುತ ದಿವ್ಯ ಪರಂಪರೆ ಸಂಸ್ಕತಿ ಆಚಾರ ವಿಚಾರ ಎಂದಿಗೂ ಮರೆಯಾಗದೆ ಇಂದಿಗೂ ಜೀವಂತವಾಗಿದೆ. ರಾಷ್ಟ್ರ ಭಕ್ತಿ, ಧರ್ಮ ಸಂಸ್ಥಾಪನೆ, ದೇಶಿಯ ಪದ್ದತಿಯನ್ನು ಜೀವಂತವಾಗಿರಿಸಲು ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಕಂಕಣಬದ್ದವಾಗಿ ನೆಲೆ ನಿಂತು 100 ವರ್ಷಗಳು ಪೂರೈಸಿದೆ. ಸಂಘದ ಪಂಚಸೂತ್ರಗಳ ಅಳವಡಿಸುವಿಕೆಯಿಂದ ಜೀವನ ಪದ್ದತಿ, ದೇಶಿಯ ಸಂಸ್ಕೃತಿ, ಪರಿಸರ ಸಂರಕ್ಷಣೆಗೆ ಸಮಾಜವು ಬದ್ದವಾಗಬೇಕು ಎನ್ನುವ ಮನೋಧರ್ಮದಿಂದ ಹಳ್ಳಿ ಗ್ರಾಮಗಳಲ್ಲಿ ಹಿಂದೂ ಸಂಗಮದ ಮೂಲಕ ರಾಷ್ಠೃ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ.ಜಾತಿಗಳು ವರ್ಗಗಳು, ಮತ್ತು ವರ್ಣಗಳ ವಿಂಗಡಣೆಯಿಂದ ಬೇರ್ಪಟ್ಟ ಸಮಾಜವು ಒಂದಾಗಬೇಕು ಎನ್ನುವ ಮನೋಭಾವ ನಮ್ಮದಾಗಬೇಕು. ಭೌವ್ಯ ಭಾರತದ ಮರುಕಲ್ಪನೆಗೆ ಹಿಂದೂ ಸಮಾಜ ಒಂದಾಗಬೇಕು ಎಂದು ತಮ್ಮ ದಿಕ್ಸೂಚಿ ಭಾಷಣದಲ್ಲಿ ಹೇಳಿದರು.

ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಮೂಕಂಡ ವಿಜು ಸುಬ್ರಮಣಿ ಅವರು ಮಾತನಾಡಿ ಧರ್ಮವನ್ನು ನಾವು ರಕ್ಷಣೆ ಮಾಡಿದರೆ ಧರ್ಮವು ನಮ್ಮನ್ನು ಕಾಪಾಡುತ್ತದೆ. ಆರ್.ಎಸ್.ಎಸ್. ಒಂದು ಸಂಘಟನೆಯಾಗಿ ಉಳಿಯದೆ. ಧರ್ಮದ ಪರವಾಗಿ ಸಮಾಜಿಕ ಭದ್ದತೆಯೊಂದಿಗೆ ರಾಷ್ಠೃ ಭಕ್ತಿಯನ್ನು ವಿಶ್ವದ ಎಲ್ಲಡೆ ಪಸರಿಸುವ ಕಾರ್ಯ ಮಾಡುತ್ತಿದೆ. ಕಾಫಿ ನಾಡು ಇಂದು ಅಸ್ಸಾಂಮಿಗರ ನಾಡಾಗಿ ಪರಿವರ್ತಿತವಾಗುತ್ತಿದೆ. ಎಲ್ಲಿ ನೋಡಿದರು ಅಸ್ಸಾಮಿಗರು ಕಾಣಸಿಗುತಿದ್ದರೆ. ಸಮಾಜ ಒಡೆಯುವ ಷಡ್ಯಂತ್ರಕ್ಕೆ ಬಲಿಯಾಗದೆ. ನಾವು ಎಚ್ಚೆತ್ತುಕೊಳ್ಳಬೇಕು. ಸಮಾಜ ಬಾಂಧವರು ಒಂದಾಗಬೇಕು ಎಂದು ಹೇಳಿದರು.

 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಮ್ಮತ್ತಿ ಕೊಡವ ಸಮಾಜದ ಅಧ್ಯಕ್ಷರಾದ ಐನಂಡ ಪ್ರಕಾಶ್ ಗಣಪತಿ ಅವರು,ಸಂಸ್ಕೃತಿ, ಅಚಾರ ವಿಚಾರ ಪದ್ದತಿ ನಮ್ಮ ಪರಿಚಯ. ಇವುಗಳನ್ನು ಜೀವಂತವಾಗಿರಿಸಲು ಸಮಾಜ ಬಾಂಧವರು ಪಣತೊಡುವಂತರಾಗಬೇಕು. ವಿದೇಶಿ ಜೀವನ ಶೈಲಿಗೆ ಮಾರುಹೊಗದೆ ಮೌಲ್ಯಯುತ ಸಂಸ್ಕಾರವನ್ನು ಉಳಿಸಿ ಬೆಳೆಸುವ ನೀತಿಗೆ ಅಣಿಯಾಗಬೇಕು. ಹಿಂದೂ ಸಂಗಮದಿಂದ ಸಮಾಜದ ಬಂಧುಗಳು ಒಂದಾಗುವುದು ಮತ್ತು ಸಮಾಜ ಜಾಗೃತಿಗಾಗಿ ಕಾರ್ಯಕ್ರಮ ರೂಪುಗೊಂಡಿದೆ ಎಂದು ಹೇಳಿದರು.

ಶ್ರೀ ಭದ್ರಕಾಳಿ ದೇವಾಲಯದಿಂದ ಕೊಡವ ಸಮಾಜದ ಆವರಣದವರೆಗೆ ಹಿಂದೂ ಸಮಾಜ ಬಾಂಧವರ ಶೋಭಾಯಾತ್ರೆ ನಡೆಯಿತು.

ಕಾರ್ಯಕ್ರಮದ ವೇದಿಕೆಯಲ್ಲಿ ನಲ್ವತೋಕ್ಲು ಕೊಡವ ಸಮಾಜದ ಅಧ್ಯಕ್ಷರಾದ ಮುಕ್ಕಾಟಿರ ಸಂತೋಷ್, ಗ್ರಾಮ ಪಂಚಾಯಿತಿ ನಿಕಟಪೂರ್ವ ಅಧ್ಯಕ್ಷರಾದ ಮೂಕಂಡ ಲೀಲಾವತಿ, ಮತ್ತು ವಿವಿಧ ಜನಾಂಗಗಳ ಪ್ರಮುಖರು ಉಪಸ್ಥಿತರಿದ್ದರು. ಬಿಳುಗುಂದ ಹಿಂದೂ ಸಂಗಮ ಆಯೋಜನ ಸಮಿತಿಯ ಸಂಘಟಕರಾದ ಮುಕ್ಕಾಟಿರ  ಯೋಗೇಶ್, ವಾಟೇರಿರ ರಾಜಪ್ಪ, ಮಂಡೇಡ ರಾಜ ಮೂಕಂಡ ಸಂಪತ್, ಮಂಡೇಪಂಡ ಲವ, ಆಂಗೀರ ಸುರೇಶ್ ಸೇರಿದಂತೆ ಬಿಳುಗುಂದ, ನಲ್ವತೋಕ್ಲು ಮತ್ತು ಹೊಸಕೋಟೆ ಗ್ರಾಮಗಳ ಹಿಂದೂ ಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಹಾಜರಿದ್ದರು.

ವರದಿ;ಕಿಶೋರ್ ಕುಮಾರ್ ಶೆಟ್ಟಿ

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0