ಹುದಿಕೇರಿ:ಸಮುದಾಯ ಆಸ್ಪತ್ರೆ ನಿರ್ಮಾಣ ಸ್ಥಳ ಪರಿಶೀಲನೆ ನಡೆಸಿದ ಸಚಿವ ದಿನೇಶ್ ಗುಂಡೂರಾವ್

ಹುದಿಕೇರಿ:ಸಮುದಾಯ ಆಸ್ಪತ್ರೆ ನಿರ್ಮಾಣ ಸ್ಥಳ ಪರಿಶೀಲನೆ ನಡೆಸಿದ ಸಚಿವ ದಿನೇಶ್ ಗುಂಡೂರಾವ್

ವಿರಾಜಪೇಟೆ:ವಿಧಾನಸಭಾ ಕ್ಷೇತ್ರದ ಪ್ರವಾಸದಲ್ಲಿರುವ ರಾಜ್ಯ ಸರಕಾರದ ಮಾನ್ಯ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ರವರು ವಿರಾಜಪೇಟೆ ಶಾಸಕರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರೊಂದಿಗೆ ಇಂದು ಪೊನ್ನಂಪೇಟೆ ತಾಲೂಕಿನ ಹುದಿಕೇರಿಗೆ ಭೇಟಿ ನೀಡಿದರು. ಹುದಿಕೇರಿಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಸಮುದಾಯ ಆಸ್ಪತ್ರೆಯ ಸ್ಥಳ ವೀಕ್ಷಣೆಯನ್ನು ಮಾಡಿದ ಸಚಿವರು ಹಾಗೂ ಶಾಸಕರು, ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಶಾಸಕರು ಸಚಿವರಿಗೆ ಅಗತ್ಯ ಮಾಹಿತಿಗಳನ್ನು ಒದಗಿಸಿ, ಆಸ್ಪತ್ರೆಯ ಶೀಘ್ರ ಕಾಮಗಾರಿಗೆ ಅನುವು ಮಾಡಿಕೊಡುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಅರೋಗ್ಯ ಅಧಿಕಾರಿಗಳಾದ ಸತೀಶ್, ತಾಲೂಕು ಅರೋಗ್ಯ ಅಧಿಕಾರಿಗಳಾದ ಯತೀರಾಜ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರು ಕಾಳಿಮಾಡ ಪ್ರಶಾಂತ್, ತಹಶೀಲ್ದಾರ್ ಮೋಹನ್, ಕಂದಾಯ ಅಧಿಕಾರಿ ಸುದಿಂದ್ರ, ಡಿಸಿಸಿ ಸದಸ್ಯರು ಮುಕಟ್ಟೀರ ಸಂದೀಪ್, ತಾಲೂಕು ಬಗರ್ ಹುಕುಂ ಅಧ್ಯಕ್ಷರು ಲಾಲಾ ಅಪ್ಪಣ್ಣ, ಹಿರಿಯರಾದ ಮುಕಳೇರ ಕುಶಾಲಪ್ಪ, ಜಿಮಿ ಅಣ್ಣಯ್ಯ, ಎರ್ಮು ಹಾಜಿ, ಚೆಕ್ಕೇರ ವಾಸು ಕುಟ್ಟಪ್ಪ, ಸುಧೀರ್, ಪೆಮ್ಮಂಡ ಪೊನ್ನಪ್ಪ, ಅಜ್ಜಿಕುಟ್ಟಿರ ಗಿರೀಶ್, ಪ್ರಶಾಂತ್, ದಿಲ್ಲು, ಹುದಿಕೇರಿ ವಲಯ ಅಧ್ಯಕ್ಷರು ಸೂರಜ್, ಭವಿನ್ ಕುಶಾಲಪ್ಪ, ಸುಕು ಬೋಪಣ್ಣ, ಅಲೀರ ರಶೀದ್, ಪೆರುಮಲೆ ಗಣೇಶ್, ಹ್ಯಾರೀಶ್, ಸೂರಜ್ ಹೊಸೂರು, ಕುಂಡಚೀರ ಮಂಜು ದೇವಯ್ಯ, ಯುವ ಕಾಂಗ್ರೆಸ್ ಅಧ್ಯಕ್ಷರು ಪಟ್ಟಡ ರಕ್ಷಿತ್ ಚಂಗಪ್ಪ, ಶಬೀರ್, ವ್ಯದ್ಯರು, ಸಿಬ್ಬಂದಿಗಳು ಹಾಗೂ ಪ್ರಮುಖರು ಉಪಸ್ಥಿತರಿದ್ದರು.